HEALTH TIPS

ಯಾವುದೇ ಶೀರ್ಷಿಕೆಯಿಲ್ಲ

             ಸ್ವರ್ಗದಲ್ಲಿ ರಕ್ಷಾ ಬಂಧನ
  ಪೆರ್ಲ: ಭಾರತವು ಸಂಸ್ಕೃತಿ, ಪರಂಪರೆ, ಆಚಾರಗಳಲ್ಲಿ ವಿಭಿನ್ನತೆಯನ್ನು ಹೊಂದಿದ್ದು ಪ್ರತಿಯೊಂದು ಆಚರಣೆ, ಹಬ್ಬಗಳಿಗೂ ಅದರದೇ ಆದ ವಿಶೇಷತೆಯಿದೆ. ಪ್ರತಿಯೊಂದು ಹಬ್ಬವೂ ಒಂದೊಂದು ರೀತಿಯ ಸಂದೇಶಗಳನ್ನು ಸಾರುತ್ತದೆ. ರಕ್ಷಾ ಬಂಧನ ಆಚರಣೆ ಸಂಬಂಧವನ್ನು ಬಲಪಡಿಸುವ ಪವಿತ್ರ ಹಬ್ಬ. ಸಹೋದರತ್ವದ ಸಂಕೇತ ಎಂದು ಎಣ್ಮಕಜೆ ಗ್ರಾ.ಪಂ. ನಿಕಟಪೂರ್ವ ಅಧ್ಯಕ್ಷೆ ರೂಪವಾಣಿ ಆರ್.ಭಟ್ ಹೇಳಿದರು.
   ನ್ಯೂ ಫ್ರೆಂಡ್ಸ್ ಕ್ಲಬ್ ಹಾಗೂ ಬಿಜೆವೈಎಂ ಸ್ವರ್ಗ ಘಟಕದ ಸಂಯುಕ್ತ ಆಶ್ರಯದಲ್ಲಿ ಸ್ವರ್ಗ ಪರಿಸರದಲ್ಲಿ ನಡೆದ ರಕ್ಷಾ ಬಂಧನ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
   ನಿವೃತ್ತ ಶಿಕ್ಷಕ ನಾಗರಾಜ್ ಬಾಳಿಕೆ ಅಧ್ಯಕ್ಷತೆ ವಹಿಸಿದ್ದರು. ಸಹೋದರತ್ವದ ಭಾವನೆಯನ್ನು ಬೆಸೆಯುವ ರಾಖಿ ಹಬ್ಬದ ಮಹತ್ವ ಬಲಪಡುತ್ತಿರುವುದು ಸನಾತನ ಧರ್ಮಕ್ಕೆ ಹೆಮ್ಮೆಯ ವಿಷಯ. ಆಧುನಿಕ ರಾಖಿಗಳತ್ತ ಆಕಷರ್ಿತರಾಗದೇ ಸಾಂಪ್ರದಾಯಿಕ ಶೈಲಿಯ ರಾಖಿಯನ್ನು ಬಳಸುವ ಹಾಗೂ ಆಚರಣೆಯ ಮಹತ್ವ ಅರಿಯುವುದರ ಮೂಲಕ ಸಾಂಪ್ರದಾಯಿಕ ರೀತಿಯಲ್ಲಿ ರಕ್ಷಾ ಬಂಧನ ಆಚರಣೆ ನಡೆಯಲಿ ಎಂದು ಆಶಯ ವ್ಯಕ್ತಪಡಿಸಿದರು.
   ವಿವೇಕಾನಂದ ಬಿ.ಕೆ., ಪೆರ್ಲ ಸೇವಾ ಸಹಕಾರಿ ಬ್ಯಾಂಕ್ ನಿದರ್ೇಶಕ ವೆಂಕಟ್ರಮಣ ಭಟ್ ಎಡಮಲೆ, ಸಂಘಟನೆಗಳ ಪದಾಧಿಕಾರಿಗಳಾದ ರವೀಂದ್ರ ಎಡಮಲೆ, ನಾಗರಾಜ್ ಡಿ, ಲೋಹಿತ್, ಪದ್ಮನಾಭ, ಚೇತನ್, ಲೋಹಿತ್ ಮತ್ತಿತರರು ಉಪಸ್ಥಿತರಿದ್ದರು.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries