HEALTH TIPS

No title

             ಪ್ಲಾಸ್ಟಿಕ್ ಮುಕ್ತ ಬದಿಯಡ್ಕದ ಕನಸಿನೊಂದಿಗೆ ಹರಿತಸೇನೆ ರಂಗಕ್ಕೆ
    ಬದಿಯಡ್ಕ : ಪ್ಲಾಸ್ಟಿಕ್ ತ್ಯಾಜ್ಯಗಳಿಂದ ಮುಕ್ತಿ ಪಡೆಯುವ ಸದುದ್ಧೇಶವನ್ನು ಮುಂದಿಟ್ಟು ಹೊಸಹೊಸ ಯೋಜನೆಗಳೊಂದಿಗೆ ಕೇರಳದಾದ್ಯಂತ ಸ್ವಚ್ಛತಾ ಆಂದೋಲನವು ನಡೆಯುತ್ತಿದೆ. ಈ ಪ್ಲಾಸ್ಟಿಕ್ ಯುಗದಲ್ಲಿ ಪ್ಲಾಸ್ಟಿಕ್ ತ್ಯಾಜ್ಯವು ಬೃಹತ್ ಸಮಸ್ಯೆಯಾಗಿ ತಲೆದೋರುತ್ತಿದ್ದು ಅದರಿಂದ ಶಾಶ್ವತ ಮುಕ್ತಿ ನೀಡಿ  ಕೇರಳವನ್ನು ಹಸಿರಾಗಿಸುವ ವಿವಿಧ ಪ್ರಯತ್ನ ನಾಡಿನಾದ್ಯಂತ ನಡೆದು ಬರುತ್ತಿದೆ. ಮನೆಮನೆಗಳಿಗೆ ತೆರಳಿ ಜನರಲ್ಲಿ ಆ ಬಗ್ಗೆ ಅರಿವು ಮೂಡಿಸುವುದರ ಮೂಲಕ ಪ್ಲಾಸ್ಟಿಕ್ ತ್ಯಾಜ್ಯದ ಸಮಸ್ಯೆಗೆ ಪರಿಹಾರ ಕಾಣುವ ನಿಟ್ಟಿನಲ್ಲಿ ಬದಿಯಡ್ಕ ಗ್ರಾಮ ಪಂಚಾಯತು "ಹರಿತ ಬದಿಯಡ್ಕ" ಎಂಬ ಯೋಜನೆಯೊಂದಿಗೆ ರಂಗಕ್ಕಿಳಿದಿದೆ.
   ಈ ಹಿನ್ನೆಲೆಯಲ್ಲಿ ಹರಿತ ಕೇರಳ ಯೋಜನೆಗೆ ಬದಿಯಡ್ಕದಲ್ಲಿ ಇತ್ತೀಚೆಗೆ ಚಾಲನೆ ನೀಡಲಾಯಿತು. ಬದಿಯಡ್ಕ ಗ್ರಾ.ಪಂ. ಅಧ್ಯಕ್ಷ ಕೆ.ಎನ್. ಕೃಷ್ಣ ಭಟ್ ಅವರು ಗ್ರಾ.ಪಂ.ಮಾಜೀ ಅಧ್ಯಕ್ಷ  ಸುಂದರ ಪ್ರಭು ಅವರಿಗೆ ಹರಿತ ಕೇರಳ ಯೋಜನೆಯ ಮಾಹಿತಿ ಪತ್ರವನ್ನು ನೀಡಿ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಪಂಚಾಯತು ಉಪಾಧ್ಯಕ್ಷೆ ಸೈಬುನ್ನಿಸಾ ಅಧ್ಯಕ್ಷತೆ ವಹಿಸಿದರು. ಸ್ಥಾಯಿ ಸಮಿತಿ ಅಧ್ಯಕ್ಷ ಶ್ಯಾಮ ಪ್ರಸಾದ್ ಮಾನ್ಯ, ಪಂಚಾಯತು ಸದಸ್ಯರಾದ ಡಿ ಶಂಕರ, ಬಾಲಕೃಷ್ಣ ಶೆಟ್ಟಿ, ವಿಶ್ವನಾಥ ಪ್ರಭು, ಅನಿತಾ ಕ್ರಾಸ್ತಾ, ಪ್ರೇಮ, ರಾಜೇಶ್ವರಿ, ಸಿ.ಡಿ.ಎಸ್. ಅಧ್ಯಕ್ಷೆ ಸುಧಾ ಜಯರಾಮ್, ಗೀತಾ ಪಿ.ಎಸ್., ಗೀತಾ ರೈ, ಸುಮತಿ, ಕಮಲ, ಲಕ್ಷ್ಮಿ, ಸಲೀನಾ ಪೂಣರ್ಿಮ ಪ್ರಭು ಸೀಮಾ ಪ್ರಭು ಮುಂತಾದವರು ಉಪಸ್ಥಿತರಿದ್ದರು.
   ಏನಂತಾರೆ:
   ಪ್ಲಾಸ್ಟಿಕ್ನಿಂದ ಉಂಟಾಗುವ ಅಪಾಯದ ಅರಿವಿದ್ದರೂ ವಿದ್ಯಾವಂತ ಸಮಾಜ ಬದಲಾಗಲು ಮುಂದಾಗದಿರುವುದು ವಿಪಯರ್ಾಸ. ಆದುದರಿಂದಲೇ ಪಂಚಾಯತು ಹಸಿರು ಕೇರಳ ಪದ್ಧತಿಯನ್ನು ಕೈಗೊಂಡಿದೆ. ನಮ್ಮೊಂದಿಗಿರುವ ಸದಸ್ಯರ ಆಸಕ್ತಿ ಹಾಗೂ ಪ್ರಾಮಾಣಿಕ ಪ್ರಯತ್ನ ಬದಲಾವಣೆಯ ಕ್ರಾಂತಿಯನ್ನು ಉಂಟುಮಾಡುವತ್ತಾ ಸಾಗುತ್ತಿದೆ.
          ಕೆ.ಎನ್.ಕೃಷ್ಣ ಭಟ್,
   ಅಧ್ಯಕ್ಷರು ಬದಿಯಡ್ಕ ಗ್ರಾಮ ಪಂಚಾಯತು.
.......................................................................................................
     ಹಿಂದೆ ಪ್ಲೆಕ್ಸ್ ಹಾಗೂ ಇನ್ನಿತರ ಪ್ಲಾಸ್ಟಿಕ್ ವಸ್ತುಗಳ ಉಪಯೋಗವು ಮಿತಿಯಲ್ಲಿತ್ತು. ಆದರೆ ಕಾಲದೊಂದಿಗಿನ ಓಟದಲ್ಲಿ ನಮ್ಮ ಪ್ರಕೃತಿಯ ಸಂರಕ್ಷಣೆಯ ಹೊಣೆ ಮಾಯವಾಗಿ ಎಲ್ಲವೂ ಪ್ಲಸ್ಟಿಕ್ ಮಯವಾಗಿದೆ. ಆ ನಿಟ್ಟಿನಲ್ಲಿ ಪಂಚಾಯತು ಕೈಗೊಂಡಿರುವ ಈ ಅರ್ಥಪೂರ್ಣ ಕಾರ್ಯಕ್ಕೆ ನನ್ನ ಪೂರ್ಣ ಬೆಂಬಲವಿದೆ. ಪ್ರಮಾಣಿಕವಾಗಿ ಮಾಡುವ ಕೆಲಸಕ್ಕೆ ಸುಲಭವಾಗಿ ಪ್ರತಿಫಲ ದೊರಕುತ್ತದೆ.
                   ಸುಂದರ ಪ್ರಭು ಬದಿಯಡ್ಕ
           ಮಾಜಿ ಅಧ್ಯಕ್ಷರು ಬದಿಯಡ್ಕ ಗ್ರಾಮ ಪಂಚಾಯತು.
    

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries