HEALTH TIPS

No title

                    ಅಡೂರಿನಲ್ಲಿ ವರಮಹಾಲಕ್ಷ್ಮೀ ಪೂಜೆ
     ಮುಳ್ಳೇರಿಯ: ಅಡೂರಿನ ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿ, ಮಾತೃ ಮಂಡಳಿ ಹಾಗೂ ಅಡೂರಿನ ವಿದ್ಯಾಭಾರತೀ ವಿದ್ಯಾಲಯದ ಜಂಟಿ ಆಶ್ರಯದಲ್ಲಿ ಆ.24ರಂದು ಬೆಳಗ್ಗೆ 9.30ರಿಂದ ಸಾರ್ವಜನಿಕ ಶ್ರೀ ವರಮಹಾಲಕ್ಷ್ಮೀ ಪೂಜೆಯು ಅಡೂರಿನ ವಿದ್ಯಾಭಾರತಿ ವಿದ್ಯಾಲಯದಲ್ಲಿ ನಡೆಯಲಿದೆ. ಬೆಳಗ್ಗೆ 11ಕ್ಕೆ ನಡೆಯುವ ಧಾಮರ್ಿಕ ಸಭೆಯಲ್ಲಿ ನಿವೃತ್ತ ಮುಖ್ಯ ಶಿಕ್ಷಕ ಶಂಕರ ಸಾರಡ್ಕ ಧಾಮರ್ಿಕ ಭಾಷಣ ಮಾಡುವರು. ಮಧ್ಯಾಹ್ನ 12ಕ್ಕೆ ಮಹಾಪೂಜೆ ಹಾಗೂ ಪ್ರಸಾದ ವಿತರಣೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
..........................................................................................................................................................................................................................
              ಬಲಿವಾಡು ಕೂಟ
    ಮುಳ್ಳೇರಿಯ: ಅಡೂರು ಶ್ರೀ ಮಹಾಲಿಂಗೇಶ್ವರ ಮಹಾವಿಷ್ಣು ವಿನಾಯಕ ಕ್ಷೇತ್ರದ ದ್ವಿತೀಯ ಹಂತದ ಜೀಣರ್ೋದ್ದಾರವನ್ನು ಪೂರ್ಣಗೊಳಿಸುವ ಸಲುವಾಗಿ ಭಕ್ತಜನರ ಮಹಾಸಭೆ ಹಾಗೂ ಬಲಿವಾಡು ಕೂಟ ಆ.26ರಂದು ಬೆಳಿಗ್ಗೆ 11ಕ್ಕೆ ಶ್ರೀಕ್ಷೇತ್ರದಲ್ಲಿ ನಡೆಯಲಿದೆ.
...................................................................................................................................................................
                ವಿವಿಧೆಡೆಗಳಲ್ಲಿ ವರಮಹಾಲಕ್ಷ್ಮಿ ಪೂಜೆ
     ಪೆರ್ಲ: ಸಮೀಪದ ವಿವಿಧೆಡೆಗಳಲ್ಲಿ ಆ.24ರಂದು ವರಮಹಾಲಕ್ಷ್ಮಿ ಪೂಜೆ ನಡೆಯಲಿದೆ.
    ಇಡಿಯಡ್ಕ: ಇಡಿಯಡ್ಕ ಶ್ರೀ ದುಗರ್ಾಪರಮೇಶ್ವರೀ (ಉಳ್ಳಾಲ್ತಿ), ವಿಷ್ಣುಮೂತರ್ಿ ಕ್ಷೇತ್ರದಲ್ಲಿ, ಕ್ಷೇತ್ರ ಹಾಗೂ  ಶ್ರೀ ಉಳ್ಳಾಲ್ತಿ ಮಹಿಳಾ ಸಂಘದ ಆಶ್ರಯದಲ್ಲಿ 10ನೇ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜೆ ಬೆಳಗ್ಗೆ 9.30ರಿಂದ ಆರಂಭವಾಗಲಿದೆ.
   ಕಾಟುಕುಕ್ಕೆ:ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಳದಲ್ಲಿ ಶ್ರೀ ಸುಬ್ರಹ್ಮಣ್ಯೇಶ್ವರ ಮಹಿಳಾ ಮಂಡಳಿ, ವರಮಹಾಲಕ್ಷ್ಮಿ ಪೂಜಾ ಸಮಿತಿ ಆಶ್ರಯದಲ್ಲಿ ಬೆಳಗ್ಗೆ 10ಕ್ಕೆ ಆರಂಭವಾಗಲಿದ್ದು
ಮಧ್ಯಾಹ್ನ 1ರಿಂದ ಪಡ್ರೆ ಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರ ನಿದರ್ೇಶಕ ನಾಟ್ಯಗುರು ಸಬ್ಬಣಕೋಡಿ ರಾಮಭಟ್  ಇವರ ಶಿಷ್ಯರಿಂದ(ಮಕ್ಕಳ ಮೇಳ)  ಶ್ರೀ ದೇವಿ ಲೀಲಾಮೃತ ಯಕ್ಷಗಾನ ಬಯಲಾಟ, ಸಂಜೆ 4.30ರಿಂದ ರಾಘವೇಂದ್ರ ಆಚಾರ್ಯ ಜನ್ಸಾಲೆ ಸಾರಥ್ಯದಲ್ಲಿ ಯಕ್ಷಗಾನ ಗಾನ-ನಾಟ್ಯ-ವೈಭವ ನಡೆಯಲಿದೆ.
   ಚೇರ್ಕಬೆ: ಚೇರ್ಕಬೆ ಶ್ರೀ ಶಾಸ್ತಾರ ಸುಬ್ರಹ್ಮಣ್ಯೇಶ್ವರ ದೇವಳದಲ್ಲಿ ಶ್ರೀ ಶಾಸ್ತಾರ ಸುಬ್ರಹ್ಮಣ್ಯೇಶ್ವರ ಸೇವಾ ಟ್ರಸ್ಟ್ ಮತ್ತು ಶ್ರೀ ವರಮಹಾಲಕ್ಷ್ಮಿ ಸೇವಾ ಸಮಿತಿ ಸಂಯುಕ್ತ ಆಶ್ರಯದಲ್ಲಿ 4ನೇ ವರ್ಷದ ಶ್ರೀ ವರಮಹಾಲಕ್ಷ್ಮಿ ಪೂಜೆ ಬೆಳಗ್ಗೆ 10ಕ್ಕೆ ಆರಂಭವಾಗಲಿದೆ.
   ಏತಡ್ಕ: ಏತಡ್ಕ ಶ್ರೀ ದುಗರ್ಾಪರಮೇಶ್ವರಿ ಭಜನಾ ಮಂದಿರದಲ್ಲಿ ಶ್ರೀ ದುಗರ್ಾಪರಮೇಶ್ವರಿ ಭಜನಾ ಸಂಘ, ಶ್ರೀ ದುಗರ್ಾಪರಮೇಶ್ವರಿ ಮಾತೃ ಮಂಡಳಿ ಆಶ್ರಯದಲ್ಲಿ  ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜೆ ಬೆಳಗ್ಗೆ 10 ಕ್ಕೆ ಆರಂಭವಾಗಲಿದೆ.
...................................................................................................................................................................

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries