HEALTH TIPS

No title


                      ಚುಟುಕು ಉಪನ್ಯಾಸ-ನೃತ್ಯ ನಾಟ್ಯ ಸಿಂಚನದೊಂದಿಗೆ ಕಳೆಗಟ್ಟಿದ ಸಾಂಸ್ಕೃತಿಕ ಸಂಜೆ
     ಬದಿಯಡ್ಕ: ರಾಷ್ಟ್ರದ ಸಮಗ್ರ ಸಂಸ್ಕೃತಿ, ಸಂಸ್ಕಾರಗಳು ವಿಸ್ಕೃತವಾಗಿ ಬೆಳೆದು ಬರುವಲ್ಲಿ ಸಾಹಿತ್ಯ ಕ್ಷೇತ್ರದ ಕೊಡುಗೆ ಮಹತ್ವಪೂರ್ಣವಾದುದು. ಇಂದು ಬರೆಯುವ-ಓದುವ ಹವ್ಯಾಸಗಳು ಯುವಜನರಲ್ಲಿ ಕುಸಿಯುತ್ತಿದ್ದು, ಅಗತ್ಯದ ಪ್ರೋತ್ಸಾಹ ನೀಡಬೇಕು. ಅರ್ಥಪೂರ್ಣವಾಗಿ, ಸಂಕ್ಷೀಪ್ತವಾಗಿ ಮತ್ತು ಪರಿಪೂರ್ಣವಾದ ಚುಟುಕು ಸಾಹಿತ್ಯ ಪ್ರಕಾರ ಈಗ ಜನಜನಿತವಾಗಿದ್ದು, ಈ ಪರಂಪರೆಯ ಬೇರು ಮಹಾಭಾರತದಲ್ಲಿ ಕಂಡುಬಂದಿದೆ ಎಂದು ಸಾಹಿತಿ ಎ.ಎನ್. ರಮೇಶ ಗುಬ್ಬಿ ಅಭಿಪ್ರಾಯ ವ್ಯಕ್ತಪಡಿಸಿದರು.
   ಶ್ರೀಮದ್ ಎಡನೀರು ಮಠಾಧೀಶರಾದ ಶ್ರೀಕೇಶವಾನಂದ ಭಾರತೀ ಶ್ರೀಗಳ 58ನೇ ಚಾತುಮರ್ಾಸ್ಯದ ಅಂಗವಾಗಿ ಗುರುವಾರ ಸಂಜೆ ನಡೆದ ಸಾಂಸ್ಕೃತಿಕ ಸಂಜೆಯಲ್ಲಿ ಚುಟುಕು ಸಾಹಿತ್ಯದ ಬಗ್ಗೆ ಉಪನ್ಯಾಸ ನೀಡಿ ಅವರು ಮಾತನಾಡಿದರು.
  ಶ್ರೀಮದ್ ಎಡನೀರು ಮಠಾಧೀಶರ ಸಾಹಿತ್ಯ, ಸಾಂಸ್ಕೃತಿಕ ಆಸಕ್ತಿ ಮತ್ತು ಪ್ರೇರಣೆ ಅಸದೃಶ್ಯವಾದುದು. ಯತಿಗಳಾಗಿ ಸಾಹಿತ್ತಿಕ ಚಟುವಟಿಕೆಗಳಿಗೆ ಅವರು ನೀಡುವ ಪ್ರೋತ್ಸಾಹವನ್ನು ಪ್ರಸಾದ ರೂಪದಲ್ಲಿ ಸ್ವೀಕರಿಸಿ ಸತ್ ಚಿಂತನೆಯ ಸಾಹಿತ್ಯ ಸೇವೆ ಮಾಡಬೇಕು ಎಂದು ಅವರು ತಿಳಿಸಿದರು. ಈ ಸಂದರ್ಭ ತಮ್ಮ ಸಾಹಿತ್ಯ ಸೇವೆಗೆ ಶ್ರೀಗಳ ಅನುಗ್ರಹದ ಬಗ್ಗೆ ಧನ್ಯತೆಯನ್ನು ತಿಳಿಸಿ ವಿವಿಧ ಕವನಗಳನ್ನು ವಾಚಿಸಿದರು.
   ಬಳಿಕ ಉಡುಪಮೂಲೆಯ ಭೂಮಿಕಾ ಪ್ರತಿಷ್ಠಾನ ಮತ್ತು ಒಡಿಯೂರಿನ ಸಾತ್ವಿಕತೇಜ ಕಲಾಕೇಂದ್ರದವರಿಂದ ನೃತ್ಯ ನಾಟ್ಯ ಕಲಾ ಸಿಂಚನ ಕಿಕ್ಕಿರಿದ ಪ್ರೇಕ್ಷಕರ ಕರತಾಡವದೊಂದಿಗೆ ಪ್ರದರ್ಶನಗೊಂಡಿತು. ವಿದುಷಿಃ ಅನುಪಮಾ ರಾಘವೇಂದ್ರ ಉಡುಪಮೂಲೆ, ಉಷಾ ಒಡಿಯೂರು, ಗುರುತೇಜ ಒಡಿಯೂರು, ಕೀರ್ತನಾ ಹೇರಳ, ಅಜಿದ, ಚೈತ್ರ, ಭವಿಷ್ಯ, ಅಶ್ವಿನಿ, ಪೂಜಾ ಪದ್ಮನಾಭ ಹಾಗೂ ನವ್ಯಾ ಉದಯನ್ ವೈವಿಧ್ಯಮಯ ನೃತ್ಯ ಪ್ರದಶರ್ಿಸಿದರು.
  ಈ ಸಂದರ್ಭ ಭಸ್ಮಾಸುರ ಮೋಹಿನಿ ದ್ವಿಪಾತ್ರಗಳ ಯಕ್ಷಗಾನ ಪ್ರದರ್ಶನ ನಡೆಯಿತು. ಹಿಮ್ಮೇಳದಲ್ಲಿ ಗಣೇಶ್ ಭಟ್ ಹೊಸಮೂಲೆ(ಭಾಗವತರು), ಸುಬ್ರಹ್ಮಣ್ಯ ಭಟ್ ದೇಲಂತಮಜಲು(ಚೆಂಡೆ), ಲವಕುಮಾರ ಐಲ(ಮದ್ದಳೆ) ಹಾಗೂ ನಿಶ್ವತ್ (ಚಕ್ರತಾಳ)ದಲ್ಲಿ ಸಹಕರಿಸಿದರು. ಅನಿರುದ್ದ ವಾಸಿಷ್ಠ ಶಮರ್ಾ ಉಡುಪಮೂಲೆ(ಭಸ್ಮಾಸುರ) ಹಾಗೂ ಗುರುತೇಜ ಒಡಿಯೂರು (ಮೋಹಿನಿ) ಪಾತ್ರ ನಿರ್ವಹಣೆಗೈದರು.
   ಶುಕ್ರವಾರ ಬೆಳಿಗ್ಗೆ ವಿವಿಧ ವೈಧಿಕ ಕಾರ್ಯಕ್ರಮಗಳು ನಡೆದವು. ಸಂಜೆ ಸಾಂಸ್ಕೃತಿಕ ಸಂಜೆಯಲ್ಲಿ ಶ್ರೀಗಳಿಂದ ದೇವಭಾವ ಸಂಗೀತ ಕಾರ್ಯಕ್ರಮ ಪ್ರಸ್ತುತಗೊಂಡಿತು. ಶನಿವಾರ ಸಂಜೆ ಡಾ.ಜ್ಯೋಸ್ನಾ ಶ್ರೀಕಾಂತ್ ಬೆಂಗಳೂರು ಅವರಿಂದ ವಯಲಿನ್ ಫ್ಯೂಶನ್ ಸಂಗೀತ ನಡೆಯಲಿದೆ.







   

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries