HEALTH TIPS

No title

                  ಕಾಮರ್ಿಕ ಮೋಟಾರು ಕಾಯ್ದೆ ತಿದ್ದುಪಡಿ ವಿರುದ್ದ ಕಾಮರ್ಿಕರಲ್ಲಿ ಐಕ್ಯತೆ ಅಗತ್ಯ : ಜೋಯ್ ಜೋಸೆಫ್
    ಮಂಜೇಶ್ವರ: ಕೇಂದ್ರ ಸರಕಾರ ಜಾರಿಗೆ ತರಲು ಉದ್ದೇಶಿಸಿರುವ ಮೋಟಾರು ಕಾಯ್ದೆ ತಿದ್ದುಪಡಿಗೆದುರಾಗಿ ಕಾಮರ್ಿಕರು ಐಕ್ಯತೆಯನ್ನು ಕಾಪಾಡಿಕೊಳ್ಳಬೇಕೆಂಬುದಾಗಿ ಸಂಘಟನೆಯ ರಾಜ್ಯ ಕಾರ್ಯದಶರ್ಿ ಜೋಯ್ ಜೋಸೆಫ್ ಹೇಳಿದರು.
    ಅವರು ಹೊಸಂಗಡಿಯ ಸುಜನಪ್ರಿಯ ನಗರದಲ್ಲಿ ಭಾನುವಾರ ನಡೆದ ಕಾಸರಗೋಡು ಜಿಲ್ಲಾ ಮೋಟಾರ್ ಹಾಗೂ ಎಂಜಿನಿಯರಿಂಗ್ ವರ್ಕಸರ್್ ಯೂನಿಯನ್ (ಎಐಟಿಯುಸಿ) ಇದರ ಜಿಲ್ಲಾ ವಾಷರ್ಿಕ ಸಮ್ಮೆಳನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
   ಕೇಂದ್ರ ಸರಕಾರದ ಏಕಸ್ವಾಮ್ಯ ಕ್ರಮದಿಂದ ದೇಶದಲ್ಲಿ ಸಾರಿಗೆ ವಲಯ ತೀವ್ರವಾದ ಬಿಕ್ಕಟ್ಟನ್ನು ಎದುರಿಸುತ್ತಿದೆ. ಕೇಂದ್ರ ಸರಕಾರ ಜಾರಿಗೆ ತರುತ್ತಿರುವ ಹೊಸ ಹೊಸ ನೀತಿಗಳು ಸಾರಿಗೆ ವಲಯವನ್ನೇ ಅಲ್ಲೋಲ ಕಲ್ಲೋಲ ಮಾಡುತ್ತಿದೆ. ಒಟ್ಟಿನಲ್ಲಿ ಮೋಟಾರು ವಲಯದಲ್ಲಿ ಸಾಮಾನ್ಯ ಕಾಮರ್ಿಕರಿಗಿರುವ ಎಲ್ಲಾ ಅವಕಾಶಗಳು ಇಲ್ಲದಂತಾಗುವುದು ಖಚಿತವಾಗುತ್ತಿದೆ. ಇದರ ವಿರುದ್ಧ ಸೆಟೆದು ನಿಲ್ಲಲು ಕಾಮರ್ಿಕರೆಲ್ಲರೂ ಒಂದಾಗಬೇಕಾಗಿದೆ ಎಂಬುದಾಗಿ ಅವರು ಕರೆಯಿತ್ತರು.
   ಸಮ್ಮೇಳನಕ್ಕೆ ಮೊದಲು ಸಂಘಟನೆಯ ಜಿಲ್ಲಾಧ್ಯಕ್ಷ ಬಿ.ವಿ.ರಾಜನ್ ಧ್ವಜಾರೋಹಣಗೈದರು. ಮುಖ್ಯ ಅತಿಥಿಯಾಗಿ್ವುಪಸ್ಥಿತರಿದ್ದ  ಎ.ಐ.ಟಿ.ಯು.ಸಿ. ಜಿಲ್ಲಾ ಪ್ರಧಾನ ಕಾರ್ಯದಶರ್ಿ ಕೆ.ಕೃಷ್ಣನ್ ಸಮ್ಮೇಳನಕ್ಕೆ ಶುಭ ಹಾರೈಸಿದರು. ಪಿ.ವಿಜಯ ಕುಮಾರ್ ವಾಷರ್ಿಕ ವರದಿ ಹಾಗೂ ಲೆಕ್ಕ ಪತ್ರ ಮಂಡಿಸಿದರು. ನೇತಾರರಾದ ಮಣಿಕಠನ್ ಕೆ.ಎಂ.ಡಿ.ಮುಸ್ತಫ ಕಡಂಬಾರ್, ರಾಜನ್ ಕಾಂಞಂಗಾಡ್, ಅಬ್ದುಲ್ ಖಾದರ್ ತೃಕ್ಕರಿಪುರ, ಮನಮೋಹನ್ ಕಾಸರಗೋಡು  ಮೊದಲಾದವರು ಸಮ್ಮೇಳನದಲ್ಲಿ  ಮಾತನಾಡಿದರು.
   ಅಗಲಿದ ಕಾರ್ಯಕರ್ತರಿಗೆ ಮೌನ ಪ್ರಾರ್ಥಣೆಯೊಂದಿಗೆ ಶ್ರದ್ಧಾಂಜಲಿಯನ್ನು ಅಪರ್ಿಸಲಾಯಿತು. ಸಮ್ಮೇಳನದಲ್ಲಿ ನೂರಾರು ಮಂದಿ ಸಂಘಟನೆಯ ಪ್ರತಿನಿಧಿಗಳು ಪಾಲ್ಗೊಂಡರು.
ನಿರುದ್ಯೋಗಿ ಯುವಕರು ಆರಂಭಿಸಿದ ಡ್ರೈವಿಂಗ್ ಶಾಲೆಗಳು ಕಾರ್ಪರೇಟರ್ ಪಾಲಾಗುವುದರಿಂದ ರಕ್ಷಿಸಬೇಕು, ವಾಹನಗಳ ಬಿಡಿ ಭಾಗಗಳ ಮಾರಾಟ ಪರವಾನಿಗೆಯನ್ನು ಕಾರ್ಪರೇಟರುಗಳಿಗೆ ನೀಡುವುದನ್ನು ತಡೆಯಬೇಕು, ಮೋಟಾರು ವಾಹನ ನಿಯಮದಲ್ಲಿ ಹಸ್ತಕ್ಷೇಪ ಮಾಡಬಾರದು, ಸಾಮಾನ್ಯ ಕಾಮರ್ಿಕನಿಗೆ ರಕ್ಷಣೆ ನೀಡಬೇಕು ಮೊದಲಾದ ಬೇಡಿಕೆಗಳು ಸಮ್ಮೇಳನದಲ್ಲಿ ಕೇಳಿ ಬಂತು. ಎಂ.ಡಿ.ಮುಸ್ತಫ ಸ್ವಾಗತಿಸಿದರು. ಕೆ.ಕೃಷ್ಣನ್ ವಂದಿಸಿದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries