ಇಂದು ದೀನಬಂಧು ಕಿಳಿಂಗಾರು ಸಾಯಿರಾಂ ಭಟ್ಟರಿಗೆ "ಭಗವಾನ್ ಸಾಯಿಬಾಬಾ ಸೇವಾ ಸಿರಿ" ಪ್ರಶಸ್ತಿ
ಬದಿಯಡ್ಕ: ಬಡವರ್ಗದ ಸೂರಿಲ್ಲದವರಿಗೆ ವಾಸ್ತವ್ಯಕ್ಕೆ ಯೋಗ್ಯವಾದ ನೂರಾರು ಮನೆಗಳನ್ನು ನಿಮರ್ಿಸಿ ದಾನ ಮಾಡುತ್ತಿರುವ ದೀನಬಂಧು ಸಾಯಿರಾಂ ಭಟ್ ಎಂದೇ ಖ್ಯಾತರಾದ ಕಿಳಿಂಗಾರು ಗೋಪಾಲಕೃಷ್ಣ ಭಟ್ಟರಿಗೆ ಕಲ್ಕೂರ ಪ್ರತಿಷ್ಠಾನದಿಂದ ಭಗವಾನ್ ಸಾಯಿಬಾಬಾ ಸೇವಾ ಸಿರಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಜನರಲ್ಲಿ ಜನಾರ್ದನನ್ನು ಕಾಣುವ ಧೀಮಂತ ವ್ಯಕ್ತಿತ್ವದ ವಯೋವೃದ್ಧರೂ, ಜ್ಞಾನವೃದ್ಧರೂ ಆಗಿರುವ ಸಾಯಿರಾಂ ಭಟ್ಟರು ಧಾಮರ್ಿಕ, ಶೈಕ್ಷಣಿಕ, ಸಾಮಾಜಿಕ, ಸಾಹಿತ್ಯಿಕ ಸಹಿತ ಹತ್ತು ಹಲವಾರು ಕ್ಷೇತ್ರಗಳಲ್ಲಿ ಸಾಧಕ ಶ್ರೇಷ್ಠರಾಗಿದ್ದು ಸರ್ವಮಾನ್ಯರಾಗಿದ್ದಾರೆ. ಇವರ ಜೀವನದ ಮಹತ್ಸಾಧನೆಯನ್ನು ಗುರುತಿಸಿ ಅಗಸ್ಟ್ 23ನೇ ಗುರುವಾರ (ಇಂದು) ಸಂಜೆ 4 ಗಂಟೆಗೆ ಮಂಗಳೂರು ಪುರಭವನದಲ್ಲಿ ಜರಗಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಭಗವಾನ್ ಶ್ರೀ ಶಿರಡಿ ಸಾಯಿಬಾಬಾ ಅವರು 1918ರಲ್ಲಿ ಸಮಾಧಿಸ್ಥರಾಗಿದ್ದು ಈ ವರ್ಷ ಸಮಾಧಿ ಹೊಂದಿ ಶತಮಾನ ಕಳೆಯುವ ಚಾರಿತ್ರಿಕ ವರ್ಷವಾಗಿದೆ. ಈ ಪ್ರಯುಕ್ತ ಪ್ರಪ್ರಥಮ ಬಾರಿಗೆ ಶಿರಡಿ ಸಾಯಿ ಬಾಬಾರವರ ಜೀವನಾಧಾರಿತ "ಭಗವಾನ್ ಸಾಯಿಬಾಬಾ" ಯಕ್ಷಗಾನ ಬಯಲಾಟ ಪ್ರದರ್ಶನ ಈ ಸಂದರ್ಭದಲ್ಲಿ ನಡೆಯಲಿರುವ ಸಂದರ್ಭ ಸಾಯಿರಾಮ್ ಭಟ್ಟರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದೆಂದು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.