HEALTH TIPS

No title

              ಕನ್ನಡ ವಾಚನ ಸ್ಪಧರ್ೆ ಸೆ.16 ರಂದು-ಕೃತಿಗಳ ಪಟ್ಟಿ ಪ್ರಕಟ 
   ಮಂಜೇಶ್ವರ: ಕೇರಳ ರಾಜ್ಯ ಲೈಬ್ರರಿ ಕೌನ್ಸಿಲ್ ಕನ್ನಡ ವಿಭಾಗದಲ್ಲಿ  ಹೈಯರ್ ಸೆಕೆಂಡರಿ ವಿಭಾಗದ ವಿದ್ಯಾಥರ್ಿಗಳಿಗಾಗಿ ಕನ್ನಡ ವಾಚನ ಸ್ಪಧರ್ೆಯನ್ನು ಸಂಘಟಿಸುತ್ತಿದ್ದು, ಪ್ರಸ್ತುತ ಸಾಲಿನ ವಾಚನ ಸ್ಪಧರ್ೆಗಳು  ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ನಡೆಯಲಿದೆ. ನಿಗದಿಪಡಿಸಿದ ಪುಸ್ತಕಗಳನ್ನು ಆಧಾರವಾಗಿರಿಸಿ ಪ್ರಶ್ನೆ ಗಳನ್ನು  ತಯಾರಿಸಲಾಗುತ್ತದೆ. ಸಾಮಾನ್ಯ ಜ್ಞಾನದ ಪ್ರಶ್ನೆಗಳು ಹೈಯರ್ ಸೆಕೆಂಡರಿ ವಿಭಾಗದಲ್ಲಿ ಅಳವಡಿಸಲಾಗುವುದಿಲ್ಲ. ವಾಚನ ಸ್ಪಧರ್ೆಯ ಪುಸ್ತಕಗಳಾಗಿ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ರ ಸುಬ್ಬಣ್ಣ, ಪೂರ್ಣಚಂದ್ರ ತೇಜಸ್ವಿಯವರ ಕವರ್ಾಲೋ, ಜೆ.ಎಂ.ಕೃಷ್ಣಮೂತರ್ಿಯವರ ಮರೆತುಹೋಗಿರುವ ಮಹಾನಗರಗಳು, ರಾಧಾಕೃಷ್ಣ ಕೆ. ಉಳಿಯತ್ತಡ್ಕ ಅವರ ಅರ್ಧ ಸತ್ಯದ ಬೆಳಕು, ರೋಹಿತ್ ಚಕ್ರತೀರ್ಥ ಅವರ ಏಳು ಸಾವಿರ ವರ್ಷ ಬದುಕಿದ ಮನುಷ್ಯ ಕೃತಿಗಳನ್ನು ಆಯ್ಕೆಮಾಡಲಾಗಿದೆ. ಸೆಪ್ಟೆಂಬರ್ 16 ರಂದು ಪೂವರ್ಾಹ್ನ 10.30 ರಿಂದ  12.30 ರವರೆಗೆ ತಾಲೂಕು ಮಟ್ಟದ ಸ್ಪಧರ್ೆಗಳು ನಡೆಯಲಿವೆ. ಮಂಜೇಶ್ವರ ತಾಲೂಕು ಮಟ್ಟದ ಸ್ಪಧರ್ೆಗಳು ಜಿ .ಎಚ್ .ಯಸ್. ಯಸ್ ಮಂಗಲ್ಪಾಡಿ, ಕಾಸರಗೋಡು ತಾಲೂಕು ಮಟ್ಟದ ಸ್ಪಧರ್ೆಗಳು ಪಿಲಿಕುಂಜೆಯಲ್ಲಿರುವ ಜಿಲ್ಲಾ ಗ್ರಂಥಾಲಯ ಹಾಗೂ ಹೊಸದುರ್ಗ ತಾಲೂಕು ಮಟ್ಟದ ಸ್ಪಧರ್ೆಗಳು ಪಾಲಕುನ್ನು ಅಂಬಿಕಾ ಇ.ಎಮ್.ಎಸ್ ಶಾಲೆಗಳಲ್ಲಿ ನಡೆಯಲಿದೆ. ಜಿಲ್ಲಾ ಮಟ್ಟದ ಸ್ಪಧರ್ೆ ಅಕ್ಟೋಬರ್ 7 ರಂದು ಪಿಲಿಕುಂಜೆಯಲ್ಲಿರುವ ಜಿಲ್ಲಾ ಗ್ರಂಥಾಲಯದಲ್ಲಿ ನಡೆಯಲಿದೆ. ತಾಲೂಕು ಮಟ್ಟದ ಸ್ಪಧರ್ೆಯಲ್ಲಿ ಪ್ರಥಮ  ರೂ. 2500, ದ್ವಿತೀಯ ರೂ.2000 ಹಾಗೂ ತೃತೀಯ ರೂ.1500 ಮತ್ತು ಜಿಲ್ಲಾ ಮಟ್ಟದಲ್ಲಿ ಪ್ರಥಮ ರೂ.6000, ದ್ವಿತೀಯ ರೂ.4000, ತೃತೀಯ ರೂ.3000 ಬಹುಮಾನ ಮೊತ್ತ ನೀಡಲಾಗುವುದು.
    ಪ್ರತಿ ಶಾಲೆಯಿಂದ ಗರಿಷ್ಠಿ 5 ಮಂದಿ ವಿದ್ಯಾಥರ್ಿಗಳು ಭಾಗವಹಿಸಬಹುದಾಗಿದ್ದು, ಸ್ಪಧರ್ೆಯಲ್ಲಿ ಭಾಗವಹಿಸುವವರು ಶಾಲಾ ಅಧಿಕೃತರ ಮೂಲಕ ಸೆಪ್ಟೆಂಬರ್ 5 ರೊಳಗಾಗಿ  ಟಚಿಟಿರಿಜತಿಚಿಡಿಣಟಛಿ@ರಟಚಿಟ.ಛಿಠಟ   ಇಮೇಲ್ ದಾಖಲಾತಿ ಕಳುಹಿಸಬಹುದಾಗಿದೆ. ಹೆಚ್ಚಿನ ವಿವರಗಳಿಗೆ ದೂರವಾಣಿ ಸಂಖ್ಯೆ  04998 274776/ 9447551536 ಕಾರ್ಯದಶರ್ಿ  ಮಂಜೇಶ್ವರ ತಾಲೂಕು ಲೈಬ್ರರಿ ಕೌನ್ಸಿಲ್ ಅವರನ್ನು ಸಂಪಕರ್ಿಸಬಹುದಾಗಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries