HEALTH TIPS

No title

                  ಜಿಲ್ಲೆಯ ಎಲ್ಲ  ಅಂಗನವಾಡಿಗಳು ಇನ್ನು  ಮುಂದೆ ಡಿಜಿಟಲ್
     ಕಾಸರಗೋಡು: ಕಾಸರಗೋಡು ಜಿಲ್ಲೆಯ ಎಲ್ಲ  ಅಂಗನವಾಡಿಗಳ ನೋಂದಾವಣೆಯನ್ನು  ಇನ್ನು  ಮುಂದೆ ಡಿಜಿಟಲೀಕರಣಗೊಳಿಸಲು ಯೋಜನೆ ರೂಪಿಸಲಾಗಿದೆ. ಪ್ರಾಯೋಗಿಕವಾಗಿ ಕಾಸರಗೋಡು,ಕಣ್ಣೂರು, ಮಲಪ್ಪುರಂ ಮತ್ತು  ವಯನಾಡು ಜಿಲ್ಲೆಗಳನ್ನು  ಈ ಯೋಜನೆಯಲ್ಲಿ  ಒಳಪಡಿಸಲು ನಿರ್ಧರಿಸಲಾಗಿದೆ.
    ಮಹಿಳೆಯರು ಮತ್ತು  ಮಕ್ಕಳಲ್ಲಿ  ಪೋಷಕಾಂಶಯುಕ್ತ  ಆಹಾರ ಲಭ್ಯತೆ ವಿಷಯದಲ್ಲಿ  ಸಮರ್ಪಕ ಪರಿಹಾರ ಕಂಡುಕೊಳ್ಳಲು ರಾಷ್ಟ್ರೀಯ ನ್ಯುಟ್ರೀಶಿಯನ್ (ಪೋಷಕಾಂಶ) ಮಿಷನ್ನ ಅಂಗವಾಗಿ ರಾಜ್ಯ ಮಹಿಳಾ ಮತ್ತು  ಮಕ್ಕಳ ಅಭಿವೃದ್ಧಿ ಇಲಾಖೆಯು ಈ ಸಂಪುಷ್ಟ  ಕೇರಳ ಎಂಬ ವಿನೂತನ ಯೋಜನೆಗೆ ರೂಪು ನೀಡಿದೆ. ಅದರಂತೆ ಕಾಸರಗೋಡು ಸೇರಿ ನಾಲ್ಕು ಜಿಲ್ಲೆಗಳ ಅಂಗನವಾಡಿಗಳ ನೋಂದಾವಣೆಯನ್ನು  ಡಿಜಿಟಲ್ಗೊಳಿಸಲು ತೀಮರ್ಾನಿಸಲಾಗಿದೆ.
    ಈ ನಾಲ್ಕು ಜಿಲ್ಲೆಗಳಲ್ಲಾಗಿ ಒಟ್ಟು  8534 ಅಂಗನವಾಡಿಗಳಿದ್ದು, ಅವುಗಳಿಗೆ ಯೋಜನೆಯ ಪ್ರಯೋಜನ ದೊರಕಲಿದೆ. ಇದರಂತೆ ಈ ಅಂಗನವಾಡಿಗಳಿಗಾಗಿ ಒಟ್ಟು  8500 ಸ್ಮಾಟರ್್ ಫೋನ್ಗಳನ್ನು  ನೀಡಲಾಗುವುದು. ಅಂಗನವಾಡಿ ಫಲಾನುಭವಿಗಳ ಎಲ್ಲ  ಮಾಹಿತಿಗಳನ್ನು  ಈ ಫೋನ್ನ ಅಪ್ಲಿಕೇಶನ್ನಲ್ಲಿ  ಸಂಗ್ರಹಿಸಲು ಯೋಜನೆ ಕೈಗೊಳ್ಳಲಾಗಿದೆ. ಇಂತಹ ಕ್ರಮ ಜಾರಿಗೊಂಡ ಬಳಿಕ ಅಂಗನವಾಡಿಗಳಲ್ಲಿ  ಈಗ ಬಳಸಲಾಗುತ್ತಿರುವ 11 ರಿಜಿಸ್ಟ್ರಾರ್ಗಳನ್ನು  ಪೂತರ್ಿಯಾಗಿ ನಿಲ್ಲಿಸಲು ನಿರ್ಧರಿಸಲಾಗಿದೆ.
   ಅಂಗನವಾಡಿಗಳ ಮಕ್ಕಳ `ಭಾರ, ಎತ್ತರ ಮತ್ತು  ಪೋಷಕಾಂಶ ಕೊರತೆ ಇತ್ಯಾದಿ ಸಂಪೂರ್ಣ ಮಾಹಿತಿಗಳ ಸಂಗ್ರಹ ಮುಂತಾದವುಗಳನ್ನು  ಕೇಂದ್ರೀಕೃತ ಸರ್ವರ್ನಲ್ಲಿ  ಒಳಪಡಿಸಲಾಗುವುದು. ಮುಂದಿನ ವರ್ಷದಿಂದ ಈ ಯೋಜನೆಯನ್ನು  ಕೇರಳ ರಾಜ್ಯದ ಎಲ್ಲ  ಜಿಲ್ಲೆಗಳಿಗೂ ವಿಸ್ತರಿಸಲು ಮಹಿಳಾ ಮತ್ತು  ಮಕ್ಕಳ ಅಭಿವೃದ್ಧಿ ಇಲಾಖೆಯು ತೀಮರ್ಾನಿಸಿದೆ. ಇದಕ್ಕಾಗಿ ಕಾರ್ಯ ಯೋಜನೆಗಳನ್ನು  ತಯಾರಿಸಲಾಗುತ್ತಿದೆ.
    ಸಂಪುಷ್ಟ  ಕೇರಳ ಯೋಜನೆಯಂತೆ ಆಯಾ ಪ್ರದೇಶಗಳಲ್ಲಿ  ಲಭಿಸುವ ತರಕಾರಿಗಳು, ಸೊಪ್ಪು  ತರಕಾರಿಗಳು, ಪಪ್ಪಾಯಿ, ಹಲಸಿನಹಣ್ಣು, ನೇಂದ್ರ ಬಾಳೆಹಣ್ಣು  ಇತ್ಯಾದಿಗಳನ್ನು  ಬಳಸಿ ವಿಶೇಷ ಮಾದರಿಯ ಆಹಾರ ನೀತಿಗೂ ರೂಪು ನೀಡಲಾಗುವುದು. ಈ ಯೋಜನೆಗೆ ಇತರ ಹಲವು ಇಲಾಖೆಗಳ ಸಹಾಯವೂ ಲಭಿಸಲಿದೆ. ಅಂಗನವಾಡಿ ಮಕ್ಕಳ ಮತ್ತು  ಅವರ ತಾಯಂದಿರ ಪೋಷಕಾಂಶ ಕೊರತೆಯನ್ನು  ನೀಗಿಸಿ ಅವರನ್ನು  ಸಂಪೂರ್ಣ ಆರೋಗ್ಯವಂತರನ್ನಾಗಿಸುವುದೇ ಈ ಯೋಜನೆಯ ಪ್ರಧಾನ ಉದ್ದೇಶವಾಗಿದೆ.
    ಜಿಲ್ಲೆಯ ಅಂಗನವಾಡಿ ಮಕ್ಕಳನ್ನು  ಪೋಷಕಾಂಶಯುಕ್ತವಾಗಿ ಬೆಳೆಸುವುದು ಮತ್ತು  ಪ್ರತಿನಿತ್ಯ ಅಂಗನವಾಡಿಗಳಿಗೆ ಅವರು ಬಂದು ಶಿಕ್ಷಣ ಪಡೆಯುವ ಗುರಿಯನ್ನೂ  ಈ ಮೂಲಕ ಹಾಕಿಕೊಳ್ಳಲಾಗಿದೆ. ಅಂಗನವಾಡಿಗಳನ್ನು  ಡಿಜಿಟಲೀಕರಣಗೊಳಿಸಿದಾಗ ಒಟ್ಟು  ವ್ಯವಸ್ಥೆಯು ಕ್ಷಣಮಾತ್ರದಲ್ಲಿ  ಲಭ್ಯವಾಗಲಿದೆ. ಕಂಪ್ಯೂಟರ್ ಮತ್ತು  ಇಂಟರ್ನೆಟ್ನಲ್ಲೇ ಅಂಗನವಾಡಿಗಳ ಸಂಪೂರ್ಣ ಯೋಜನೆಯ ಕುರಿತು ಮಾಹಿತಿ ದೊರಕಲಿದೆ. ಈ ಮೂಲಕ ಯಾವುದೇ ಒಂದು ಅಂಗನವಾಡಿಯಲ್ಲಿ  ಪೋಷಕಾಂಶಯುಕ್ತ  ಆಹಾರ ನೀಡದಿದ್ದರೂ ಆ ಮಾಹಿತಿಯು ಇಲಾಖೆಯ ಅಧಿಕಾರಿಗಳಿಗೆ ಕೂಡಲೇ ಲಭಿಸುವಂತೆ ಡಿಜಿಟಲ್ನ ಅಂಗವಾಗಿ ವ್ಯವಸ್ಥೆ  ಮಾಡಲಾಗುತ್ತಿದೆ.
      ಜಿಲ್ಲೆಯ ನಾಲ್ಕು ತಾಲೂಕುಗಳಿಗೂ ವಿಸ್ತರಣೆ : ಕಾಸರಗೋಡು ಜಿಲ್ಲೆಯ ನಾಲ್ಕು ತಾಲೂಕುಗಳಿಗೂ ಸಂಪುಷ್ಟ  ಯೋಜನೆಯನ್ನು  ವಿಸ್ತರಿಸಲು ನಿರ್ಧರಿಸಲಾಗಿದೆ. ಅದರಂತೆ ಮಂಜೇಶ್ವರ, ಕಾಸರಗೋಡು, ಹೊಸದುರ್ಗ, ವೆಳ್ಳರಿಕುಂಡು ತಾಲೂಕುಗಳಲ್ಲಿ  ಯೋಜನೆಯು ಕ್ರಮಬದ್ಧವಾಗಿ ಜಾರಿಗೆ ಬರಲಿದೆ. ಎಲ್ಲ  ಅಂಗನವಾಡಿಗಳಲ್ಲೂ  ಯೋಜನೆಯನ್ನು  ಅನುಷ್ಠಾನಕ್ಕೆ ತರಲಾಗುವುದು. ಈ ನಿಟ್ಟಿನಲ್ಲಿ  ಅಂಗನವಾಡಿಗಳ ಅಂಕಿ ಅಂಶಗಳನ್ನು  ತಯಾರಿಸಲಾಗುತ್ತಿದೆ. ನಂತರ ಅಲ್ಲಿರುವ ಮಕ್ಕಳು ಮತ್ತು  ಮಕ್ಕಳ ತಾಯಂದಿರ ಸಂಖ್ಯೆಯನ್ನು  ಲೆಕ್ಕಹಾಕಿ ಮುಂದಿನ ವ್ಯವಸ್ಥೆಗಳನ್ನು  ಜಾರಿಗೊಳಿಸಲು ತೀಮರ್ಾನ ಕೈಗೊಳ್ಳಲಾಗಿದೆ. ಅಲ್ಲದೆ ಮಹಿಳಾ ಮತ್ತು  ಮಕ್ಕಳ ಅಭಿವೃದ್ಧಿ ಇಲಾಖೆಯ ನೇತೃತ್ವದಲ್ಲಿ ಹಂತ ಹಂತವಾಗಿ ಯೋಜನೆಯನ್ನು  ಕಾರ್ಯರೂಪಕ್ಕೆ ತರಲಾಗುತ್ತಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries