HEALTH TIPS

No title

             ವ್ಯಸನಗಳಿಂದ ಭವಿಷ್ಯ ನಾಶ-ಬೇಕು ಸಮರ್ಪಕ ಯೋಜನೆ-ಡಾ.ಬನಾರಿ
                   1245ನೇ ಮದ್ಯವರ್ಜನ ಶಿಬಿರ ಉದ್ಘಾಟನೆ 
     ಮಂಜೇಶ್ವರ: ಆಧುನಿಕ ತಂತ್ರಜ್ಞಾನ, ಸೌಕರ್ಯಗಳು ಸಾಕಷ್ಟು ವೃದ್ದಿಸಿದ್ದರೂ ಅಭಿವೃದ್ದಿಯ ವೇಗ ಕುಂಠಿತಗೊಂಡಳ್ಳುತ್ತಿದ್ದು, ಜೊತೆಗೆ ಎಲ್ಲೆಡೆ ವ್ಯಾಪಿಸದಿರುವುದರ ಹಿಂದೆ ಸಾಮಾಜಿಕ ಪಿಡುಗಳ ಕರಾಳತೆ ಪ್ರಮುಖ ಕಾರಣವಾಗಿದೆ. ಯುವ ಸಮೂಹ ಮದ್ಯ ಸಹಿತ ಅಮಲು ಪದಾರ್ಥಗಳ ದಾಸರಾಗಿ ಭವಿಷ್ಯವನ್ನು ನಾಶಗೊಳಿಸುತ್ತಿರುವುದು ಆಧುನಿಕ ಸಮಾಜದ ಪ್ರಮುಖ ಸವಾಲಾಗಿದ್ದು, ಕ್ರಿಯಾತ್ಮಕ ಯೋಜನೆಯ ಮೂಲಕ ಸಮಾಜದ ಮುಖ್ಯ ನೆಲೆಗೆ ಕರೆತರಲು ಸಾಧ್ಯವಿದೆ ಎಂದು  ಖ್ಯಾತ ವೈದ್ಯ, ಸಾಹಿತಿ ಡಾ. ರಮಾನಂದ ಬನಾರಿ ನುಡಿದರು.
 ಅವರು ಹೊಸಂಗಡಿ ಬಳಿಯ ಬಂಗ್ರಮಂಜೇಶ್ವರ ಶ್ರೀ ವೀರಭದ್ರ ಮಹಾಮ್ಮಾಯೀ ದೇವಸ್ಥಾನದ ಸಭಾಂಗಣದಲ್ಲಿ ಮಂಗಳವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾಸರಗೋಡು ಹಾಗೂ ವಿವಿಧ ಸಂಘ- ಸಂಸ್ಥೆಗಳ ಸಹಕಾರದೊಂದಿಗೆ ಆಯೋಜಿಸಲಾದ 1245ನೇ ಮಧ್ಯವರ್ಜನ ಶಿಬಿರವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿಸಿದರು.
    ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಮ್ಮಿಕೊಳ್ಳುವ ಮದ್ಯವರ್ಜನ ಶಿಬಿರಗಳು ಅತ್ಯಂತ ದೊಡ್ಡ ಸಮಾಜ ಸೇವೆಯಾಗಿದೆ. ಧಮರ್ಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಡೆಯವರು ಇಂತಹ ಶಿಬಿರಗಳ ಮೂಲಕ ಸಾಮಾಜಿಕ ಕ್ರಾಂತಿಯನ್ನೇ ಸೃಷ್ಟಿಸಿದ್ದಾರೆ ಎಂದು
    ಕ್ಷಣಿಕ ಸುಖಕ್ಕಾಗಿ ಮದ್ಯಪಾನಿಗಳಾಗುವ ಯುವಕರು ಕ್ರಮೇಣ ಅಪರಾಧಿಗಳಾಗಿ ಮಾರ್ಪಡುತ್ತಾರೆ.  ಇವರನ್ನು ಸರಿದಾರಿಗೆ ತರವುದೇ ನಿಜವಾದ ಭಗವಂತನ ಸೇವೆ ಎಂದು ಅವರು ಹೇಳಿದರು.
ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾ ಜನಜಾಗೃತಿ ವೇದಿಕೆ ಕಾಸರಗೋಡಿನ ಜಿಲ್ಲಾಧ್ಯಕ್ಷ ಗೋಪಾಲ ಶೆಟ್ಟಿ ಅರಿಬೈಲು ವಹಿಸಿದ್ದರು. ವೇದಿಕೆಯಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲಾ ನಿದರ್ೇಶಕ ಚಂದ್ರಶೇಖರ್. ಕೆ, ಬಂಗ್ರಮಂಜೇಶ್ವರ ಶ್ರೀ ವೀರಭದ್ರ ಮಹಾಮ್ಮಾಯೀ ದೇವಸ್ಥಾನದ ಅಧ್ಯಕ್ಷ ಲಕ್ಷ್ಮಣ ಶೆಟ್ಟಿಗಾರ್, ದಕ್ಷಿಣ ಕನ್ನಡ ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಎನ್. ಎ ರಾಮಚಂದ್ರ, ಕಾಸರಗೋಡು ಜಿಲ್ಲಾ ಪಂಚಾಯತಿ ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷ ಹಷರ್ಾದ್ ವಕರ್ಾಡಿ, ಬಂಗ್ರಮಂಜೇಶ್ವರ ಶ್ರೀ ವೀರಭದ್ರ ಮಹಾಮ್ಮಾಯೀ ದೇವಸ್ಥಾನದ ಪ್ರಧಾನ ಅರ್ಚಕ ಆದಿತ್ಯ ಹೆಗ್ಡೆ, ಸಾಮಾಜಿಕ ಕಾರ್ಯಕರ್ತ ಅಬ್ದುಲ್ ಮಜೀದ್ ವಕರ್ಾಡಿ, ಮೀಂಜ ಗ್ರಾಮ ಪಂಚಾಯತಿ ಸದಸ್ಯೆ ಸುಂದರಿ .ಆರ್ ಶೆಟ್ಟಿ, 1245ನೇ ಮಧ್ಯವರ್ಜನ ಶಿಬಿರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಶೆಟ್ಟಿ ಕಡಂಬಾರ್, ಸಾಮಾಜಿಕ ಕಾರ್ಯಕರ್ತ ಹರೀಶ್ ಶೆಟ್ಟಿ ಮಾಡ, ಐಲ ಶ್ರೀ ದುಗರ್ಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಕೋಡಿಬೈಲು ನಾರಾಯಣ ಹೆಗ್ಡೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾಸರಗೋಡು ಜಿಲ್ಲಾ ಯೋಜನಾಧಿಕಾರಿ ಚೇತನಾ ಎಮ್., ಸತ್ಯ ಮೇವ ಜಯತೇ ಚಾರಿಟೇಬಲ್ ಟ್ರಸ್ಟ್ ಮಂಗಳೂರಿನ ಅಧ್ಯಕ್ಷ ಅಶ್ವಥ್ ಪೂಜಾರಿ ಲಾಲ್ಬಾಗ್, ವಿವಿಧ ಧಾಮರ್ಿಕ ಸಾಮಾಜಿಕ ಮುಖಂಡರುಗಳಾದ ಉಮೇಶ್, ದಿನಕರ್ ಬಿ.ಎಮ್. ಹೊಸಂಗಡಿ, ಪುಷ್ಪರಾಜ್ ಐಲ ನ್ಯಾಯವಾದಿ ಗಂಗಾಧರ ಕೊಂಡೆವೂರು ಮೊದಲಾದವರು  ಉಪಸ್ಥಿತರಿದ್ದು ಶುಭಾಶಂಸನೆಗೈದರು.
   ಯೋಜನೆಯ ಮಂಜೇಶ್ವರ ಒಕ್ಕೂಟದ ಉಮಾಮಹೇಶ್ವರಿ ಸಂಘದ ರೇಣುಕಾ ಪ್ರಾರ್ಥನೆ ಹಾಡಿದರು. ಶಿಬಿರದ ವ್ಯವಸ್ಥಾಪನ ಸಮಿತಿಯ ಕೋಶಾಧಿಕಾರಿ ನ್ಯಾಯವಾದಿ ಗಂಗಾಧರ ಕೊಂಡೆವೂರು ಸ್ವಾಗತಿಸಿ, ಯೋಜನೆಯ ಕಾಸರಗೋಡು ವಲಯ ಮೇಲ್ವೀಚಾರಕಿ ಮಧುರಾ ವಸಂತ್ ಕಾರ್ಯಕ್ರಮ ನಿರೂಪಿಸಿದರು. ಶಿಬಿರಾಧಿಕಾರಿ ದೇವೀಪ್ರಸಾದ್ ಮೂಡಬಿದ್ರೆ ಪ್ರಾಸ್ತಾವಿಕ ಮಾತುಗಳನ್ನಾಡಿ, ಯೋಜನೆಯ ತಲಪಾಡಿ ವಲಯದ ಮೇಲ್ವೀಚಾರಕ ಮೋಹನ್ ಎಸ್. ವಂದಿಸಿದರು. ಶಿಬಿರದಲ್ಲಿ ಸುಮಾರು 76ರಷ್ಟು ಮಂದಿ ಶಿಬಿರಾಥರ್ಿಗಳು ಭಾಗವಹಿಸುತ್ತಿದ್ದಾರೆ. ಬಳಿಕ ಶಿಬಿರಾಥರ್ಿಗಳ ಆರೋಗ್ಯ ತಪಾಸಣೆ, ಸಂಜೆ ಶ್ರೀ ಅಯ್ಯಪ್ಪ ಮಹಿಳಾ ಭಜನಾ ಮಂಡಳಿ ಹೊಸಂಗಡಿ, ಬಂಗ್ರಮಂಜೇಶ್ವರ ಶ್ರೀ ವೀರಭದ್ರ ಮಹಾಮ್ಮಾಯೀ ಭಜನಾ ಮಂಡಳಿಯವರಿಂದ  ಭಜನಾ ಕಾರ್ಯಕ್ರಮ ನಡೆಯಿತು.ಶಿಬಿರ ಆ.14 ರಂದು ಸಮಾರೋಪಗೊಳ್ಳಲಿದೆ.
  

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries