ನೀಚರ್ಾಲು ಪೇಟೆ ಅಭಿವೃದ್ದಿಗೆ ಮನವಿ
ಬದಿಯಡ್ಕ : ಬದಿಯಡ್ಕ ಗ್ರಾಮಪಂಚಾಯತ್ನ ನೀಚರ್ಾಲು ಪೇಟೆಯು ದಿನೇ ದಿನೇ ಅಭಿವೃದ್ಧಿಯನ್ನು ಹೊಂದುತ್ತಿದ್ದು, ಮೂಲಭೂತ ಸೌಕರ್ಯಗಳ ಕೊರತೆಯನ್ನು ನೀಗಿಸಬೇಕು ಎಂಬ ಮನವಿಯನ್ನು ನೀಚರ್ಾಲು ನಿವೇದಿತಾ ಸೇವಾ ಮಿಶನ್ನ ವತಿಯಿಂದ ಬದಿಯಡ್ಕ ಗ್ರಾಮಪಂಚಾಯತ್ ಅಧ್ಯಕ್ಷರಿಗೆ ನೀಡಲಾಯಿತು.
ಗ್ರಾಮೀಣ ಪ್ರದೇಶದ ಜನರು ಈ ಪೇಟೆಯನ್ನು ಹೆಚ್ಚಾಗಿ ಅವಲಂಬಿಸುತ್ತಿದ್ದಾರೆ. ಇಲ್ಲಿ ಭಜನಾ ಮಂದಿರ, ಮಸೀದಿ, ಮದುವೆ ಸಮಾರಂಭಗಳು ನಡೆಯುವಂತಹ ಸಭಾಭವನಗಳು, ನೂರಾರು ವ್ಯಾಪಾರ ಸಂಸ್ಥೆಗಳು ಇಲ್ಲಿವೆ. ಮುಂಡಿತ್ತಡ್ಕ, ಮಾನ್ಯ, ಕೊಲ್ಲಂಗಾನ ಮೊದಲಾದೆಡೆಗಳ ಪ್ರಯಾಣಿಕರು ವಿವಿಧೆಡೆ ತೆರಳಲು ಇಲ್ಲಿಗೆ ಆಗಮಿಸುತ್ತಾರೆ. ವಿದ್ಯಾಸಂಸ್ಥೆಗಳೂ, ಅಕ್ಷಯ ಕೇಂದ್ರವೂ ಇರುವ ಈ ಪೇಟೆಯು ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿರುವುದು ಖೇದಕರವಾಗಿದೆ. ಮನವಿಯಲ್ಲಿ ಸುಸಜ್ಜಿತವಾದ ಬಸ್ ನಿಲ್ದಾಣ, ಸಾರ್ವಜನಿಕ ಶೌಚಾಲಯ, ಅಗ್ನಿಶಾಮಕ ದಳದ ಕಚೇರಿ, ಮೀನು ಮಾರುಕಟ್ಟೆಗೆ ಸರಿಯಾದ ಸ್ಥಳ, ದಾರಿದೀಪದ ವ್ಯವಸ್ಥೆ, ಕುಡಿಯುವ ನೀರು ಮುಂತಾದ ಮೂಲಭೂತ ಸೌಕರ್ಯಗಳನ್ನು ವ್ಯವಸ್ಥೆಗೊಳಿಸಬೇಕು ಎಂದು ಕೇಳಿಕೊಳ್ಳಲಾಗಿದೆ.
ನೀಚರ್ಾಲು ನಿವೇದಿತಾ ಸೇವಾ ಮಿಶನ್ನ ಪದಾಧಿಕಾರಿಗಳಾದ ಗಣೇಶಕೃಷ್ಣ ಅಳಕ್ಕೆ, ಮಹೇಶ್ ಕುಮಾರ್ ವಳಕ್ಕುಂಜ, ಶ್ಯಾಮಪ್ರಸಾದ ಸರಳಿ, ಈಶ್ವರ ಚಂದ್ರ ಪ್ರಸಾದ್ ಮತ್ತಿತರರು ವಾಡರ್ುಸದಸ್ಯ ಡಿ.ಶಂಕರ ಅವರೊಂದಿಗೆ ಗ್ರಾಮಪಂಚಾಯತ್ ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ರಿಗೆ ಹಸ್ತಾಂತರಿಸಿದರು. ಮನವಿಯನ್ನು ಸ್ವೀಕರಿಸಿ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎಂಬ ಭರವಸೆಯನ್ನೂ ಅವರು ನೀಡಿದರು.