ಕಾಸರಗೋಡು ಸರಕಾರಿ ಕಾಲೇಜಿನಲ್ಲಿ ಸ್ಮೃತಿ ದಿನಾಚರಣೆ
ಕಾಸರಗೋಡು: ಹಿರಿಯರನ್ನು ಗೌರವಿಸುವುದು, ನೆನಪಿಸಿಕೊಳ್ಳುವುದೆಂದರೆ ಅವರು ನಮಗೆ ಹಾಕಿಕೊಟ್ಟಿರುವ ಆದರ್ಶಗಳನ್ನು ನಾವು ಪಾಲಿಸುತ್ತಿದ್ದೇವೆಯೋ ಇಲ್ಲವೋ ಎಂಬುದನ್ನು ಖಾತ್ರಿಪಡಿಸಿಕೊಳ್ಳುವುದಾಗಿರುತ್ತದೆ ಎಂದು ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ. ಪಿ. ಶ್ರೀಕೃಷ್ಣ ಭಟ್ ಅವರು ಅಭಿಪ್ರಾಯಪಟ್ಟರು.
ಅವರು ಸರಕಾರಿ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನ ವಿಭಾಗ ಹಾಗೂ ಕಾಸರಗೋಡು ಕನ್ನಡ ಬಳಗದ ಸಂಯುಕ್ತ ಆಶ್ರಯದಲ್ಲಿ ನಡೆದ ಸ್ಮೃತಿ ಕಾರ್ಯಕ್ರಮದಲ್ಲಿ ಸಂಸ್ಮರಣಾ ಭಾಷಣ ಮಾಡಿ ಮಾತನಾಡಿದರು.
ಕಾಸರಗೋಡಿನ ಕನ್ನಡ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದುಕೊಂಡು ವಿಭಾಗವನ್ನು ಕಟ್ಟಿ ಬೆಳೆಸುವಲ್ಲಿ ಪ್ರೊ. ಪಿ. ಸುಬ್ರಾಯ ಭಟ್, ಡಾ.ಬಿ.ಕೆ.ತಿಮ್ಮಪ್ಪ, ಪ್ರೊ.ಬಿ.ಪದ್ಮನಾಭ ಮತ್ತು ಪ್ರೊ.ವೇಣುಗೋಪಾಲ ಕಾಸರಗೋಡು ಅವರು ಪಟ್ಟಿರುವ ಶ್ರಮವನ್ನು ಅವರು ನೆನಪಿಸಿಕೊಂಡರು.
ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಆಶಾ ದಿಲೀಪ್ ಸುಳ್ಯಮೆ ಅವರು, ಕಲಿಕೆಯ ಉದ್ದೇಶದಿಂದ ಶಾಲಾ ಕಾಲೇಜುಗಳಿಗೆ ಬರುವ ವಿದ್ಯಾಥರ್ಿ-ವಿದ್ಯಾಥರ್ಿನಿಯರು ತಮ್ಮ ಉದ್ದೇಶವನ್ನೇ ಮರೆತು ಮಾದಕ ವ್ಯಸನಗಳಿಗೆ ಬಲಿಯಾಗುತ್ತಿರುವ ಇಂದಿನ ದುರಂತ ಪರಿಸ್ಥಿತಿಯನ್ನು ಚಿತ್ರಿಸಿಕೊಟ್ಟು ವಿದ್ಯಾಥರ್ಿಗಳು ಇಂತಹ ಆಮಿಷಗಳಿಂದ ಪಾರಾಗಿ ತಮ್ಮ ಬದುಕು-ಭವಿಷ್ಯವನ್ನು ತಾವೇ ಭದ್ರವಾಗಿ ರೂಪಿಸಿಕೊಳ್ಳಬೇಕಾಗಿದೆ ಎಂದು ಕರೆ ನೀಡಿದರು.
ವಿಭಾಗದ ಮುಖ್ಯಸ್ಥೆ ಶ್ರೀಮತಿ. ಸುಜಾತ ಎಸ್. ಅಧ್ಯಕ್ಷತೆ ವಹಿಸಿದ್ದರು. ಪ್ರಾಧ್ಯಾಪಕ ಡಾ. ರಾಧಾಕೃಷ್ಣ ಬೆಳ್ಳೂರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಪ್ರಾಧ್ಯಾಪಕ ಬಾಲಕೃಷ್ಣ ಹೊಸಂಗಡಿ ವಂದಿಸಿದರು. ಶ್ರದ್ಧಾ ನಾಯರ್ಪಳ್ಳ ಪ್ರಾಥರ್ಿಸಿದರು. ಇದೇ ಸಂದರ್ಭದಲ್ಲಿ ಪ್ರೊ. ಬಿ. ಪದ್ಮನಾಭ ಅವರ ಸ್ಮರಣಾರ್ಥ ಸ್ಥಾಪಿಸಲಾಗಿರುವ ದತ್ತಿನಿಧಿ ವಿದ್ಯಾಥರ್ಿ ವೇತನವನ್ನು ವಿತರಿಸಲಾಯಿತು.