HEALTH TIPS

No title

                 ಪಾಂಡಿ ಸರಕಾರಿ ಹಯರ್ ಸೆಕೆಂಡರಿ ಶಾಲೆಯಲ್ಲಿ ಜಾನಪದ ಸಂಸ್ಕೃತಿಯನ್ನು ಉದ್ದೀಪನಗೋಳಿಸಿದ "ಮಯರ್ಾಲೊ" ಆಟಿ ಆಚರಣೆ
   ಮುಳ್ಳೇರಿಯ: ತುಳುನಾಡಿನ ಜನರು ಮಳೆಗಾಲವನ್ನು ಮಯರ್ೋಲೊ ಎಂದು ಕರೆಯುತ್ತಾರೆ. ಅದರಲ್ಲೂ ಆಟಿ ತಿಂಗಳು ಮಳೆಗಾಲದ ಅತ್ಯಂತ ಪ್ರಧಾನವಾದ ತಿಂಗಳಾಗಿದ್ದು,  ಆಟಿ ತಿಂಗಳಿಗೆ ಜನರು ಕೊಡುತ್ತಿದ್ದ ಪ್ರಾಧಾನ್ಯವನ್ನು ಮಕ್ಕಳಿಗೆ ತಿಳಿಸುವುದರ ಜೊತೆಗೆ ಕೃಷಿ ಸಂಸ್ಕೃತಿಗೆ ಬೆನ್ನುಹಾಕಿ ತಾಂತ್ರಿಕ ಯಾಂತ್ರಿಕ ಜೀವನಡೆಡೆಗೆ ನಾಗಾಲೋಟದಿಂದ ದಾಪುಗಾಲಿಡುತ್ತಿರುವ ಹೊಸ ತಲೆಮಾರಿನ ಜನರಿಗೆ ನಮ್ಮ ತುಳುನಾಡಿನ ಮಣ್ಣಿನ ಸಂಸ್ಕೃತಿಯನ್ನು ಪರಿಚಯಿಸುವ ಉದ್ದೇಶದೊಂದಿಗೆ ಪಾಂಡಿ ಸರಕಾರಿ ಹಯರ್ ಸೆಕೆಂಡರಿ ಶಾಲೆಯಲ್ಲಿ ಶಾಲೆಯ ವಿವಿಧ ಕ್ಲಬ್ಬುಗಳ ಸಹಯೋಗದೊಂದಿಗೆ ಮಯರ್ಾಲೊ ಎಂಬ ಹೆಸರಿನಲ್ಲಿ ಆಟಿ ಆಚರಣೆಯನ್ನು ಇತ್ತೀಚೆಗೆ ಆಯೋಜಿಸಲಾಗಿತ್ತು.
    ಮಾನವನು ತನ್ನತನವನ್ನು ಮರೆತು ಬಳಕೆದಾರ ಸಂಸ್ಕೃತಿಯೆಡೆಗೆ ಸಾಗಿದಾಗ ಮಣ್ಣಿನ ವಾಸನೆಯೊಂದಿಗೆ ಬೆರಕೆಯಾಗಿದ್ದ ಅನೇಕ ಆಚಾರ ವಿಚಾರಗಳು ಮರೆತುಹೋದುವು. ಇಂತಹ ಸಂದರ್ಭದಲ್ಲಿ ಪಾಂಡಿಯಲ್ಲಿ ನಡೆದ ಈ ಕಾರ್ಯಕ್ರಮದ ಮೂಲಕ ಮಕ್ಕಳಿಗೆ ಹಿಂದಿನ ಕಾಲದಲ್ಲಿ ಉಪಯೋಗಿಸುತ್ತಿದ್ದ ಆಹಾರ ವಸ್ತುಗಳು, ಔಷಧ ಸಸ್ಯಗಳು, ಕೃಷಿ ಕೃಷಿಯೇತರ ಉಪಕರಣಗಳು, ಗೃಹೋಪಕರಣಗಳು ಮೊದಲಾದವುಗಳನ್ನು ಮಯರ್ಾಲೊದ ಮೂಲಕ ಪರಿಚಯಿಸಲಾಯಿತು.
  ಕಾರ್ಯಕ್ರಮದ ಪೂರ್ವ ತಯಾರಿ ಎಂಬ ನೆಲೆಯಲ್ಲಿ ಪ್ರಾಥಮಿಕ ಹಂತದಿಂದ ಹಯರ್ ಸೆಕೆಂಡರಿಯವರೆಗಿರುವ ಮಕ್ಕಳನ್ನು ಗಮ್ಮತ್ತ್, ನಾಟಿ, ತಿಮರೆ ಮತ್ತು ಮಾಂಬಳೊ ಎಂಬ ಗ್ರಾಮೀಣ ಹೆಸರನ್ನು ನೀಡಿ ನಾಲ್ಕು ಗುಂಪುಗಳನ್ನಾಗಿ ಮಾಡಲಾಯಿತು. ಪ್ರತಿಯೊಂದು ಗುಂಪು ಎಲೆ ಪದಾರ್ಥಗಳು, ಉಪ್ಪಿನ ಕಾಯಿಗಳು, ಹಲಸಿನ ಖಾದ್ಯಗಳು, ಚಟ್ನಿಗಳು, ಗ್ರಾಮೀಣ ತಿಂಡಿಗಳು, ಪಾಯಸ, ಪಾನೀಯಗಳು, ಚೇವು, ಕೇನೆ, ಸಜಂಕ್ ಮೊದಲಾದ ವಿವಿಧ ನಾಡ ತರಕಾರಿಗಳ ಭಕ್ಷ್ಯಗಳು, ಪಲ್ಯ, ಉಪ್ಪುಕರಿ, ಕಾಯಿಸಿದ ಮೆಣಸು, ಔಷಧ ಗಂಜಿ, ಜಾಮು, ಎಲೆಗಳನ್ನು ಉಪಯೋಗಿಸ ಮಾಡಿದ ಪತ್ರೊಡೆಯೇ ಮೊದಲಾದ ಒಟ್ಟು 501 ವಿಧದ ತಿಂಡಿ ತಿನಸುಗಳನ್ನು ಪ್ರದಶರ್ಿಸಲಾಗಿತ್ತು. 101 ಔಷಧ ಸಸ್ಯಗಳನ್ನೂ ಅವುಗಳ ಔಷಧೀಯ ಗುಣಗಳನ್ನು ವಿವರಿಸುವ ಚಾಟರ್ುಗಳನ್ನೂ 'ಮದರ್್' ಎಂದು ಹೆಸರಿಸಲಾದ ಸ್ಟಾಲಿನಲ್ಲಿ ಪ್ರದಶರ್ಿಸಲಾಗಿತ್ತು. 'ದೆಂಗ' ಎಂದು ಹೆಸರಿಸಲಾಗಿದ್ದ ಸ್ಟಾಲಿನಲ್ಲಿ ಹಿಂದಿನ ಕಾಲದ ಕೃಷಿ ಮತ್ತು ಕೃಷಿಯೇತರ ಉಪಕರಣಗಳನ್ನೂ ಗೃಹೋಪಕರಣಗಳನ್ನೂ ಪ್ರದಶರ್ಿಸಲಾಯಿತು. ಜೊತೆಗೆ ಬ್ರಿಟೀಷ್ ಈಸ್ಟ್ ಇಂಡಿಯಾ ಕಂಪೆನಿಯು 1818 ರಲ್ಲಿ ಹೊರತಂದ ನಾಣ್ಯದಿಂದ ತೊಡಗಿ ಆಧುನಿಕ ಕಾಲದ ವರೆಗಿನ ಸುಮಾರು 700ರಷ್ಟು ನಾಣ್ಯಗಳನ್ನೂ ಕರೆನ್ಸಿ ನೋಟುಗಳನ್ನೂ ಪ್ರದಶರ್ಿಸಲಾಗಿತ್ತು. ಮುಂದಿನ ವರ್ಷಗಳಲ್ಲಿ ತರಗತಿಗಳ ಶೈಕ್ಷಣಿಕ ಅಗತ್ಯಗಳಿಗೆ ಉಪಯೋಗಿಸುವ ಉದ್ದೇಶದೊಂದಿಗೆ ಈ ಕಾರ್ಯಕ್ರಮದ ಸಂಪೂರ್ಣ ದಾಖಲೀಕರಣವನ್ನೂ ಮಾಡಲಾಗಿತ್ತು. ಈ ಎಲ್ಲಾ ವಸ್ತುಗಳ ಪ್ರದರ್ಶನದ ಜೊತೆಗೆ ಅವುಗಳ ತಯಾರಿಗೆ ಉಪಯೋಗಿಸಿದ ಕಚ್ಚಾ ವಸ್ತುಗಳನ್ನೂ ಪ್ರದಶರ್ಿಸಲಾಗಿತ್ತು ಮತ್ತು ಅವುಗಳ ಕುರಿತಾದ ವಿವರಣೆಯನ್ನೂ ಮಕ್ಕಳೇ ಬರೆದು ತಯಾರಿಸಿದ್ದರು.
     ಪಾಂಡಿಯ ಕ್ಲಬ್ಬಿನ ಸದಸ್ಯರು ಹಿಮ್ಮೇಳಗಳಿಂದೊಡಗೂಡಿ ಜಾನಪದ ಹಾಡುಗಳನ್ನು ಹಾಡಿದರು. ಮಯರ್ಾಲೊದ ಉದ್ಘಾಟನೆಯನ್ನು ಕಾಸರಗೊಡು ಜಿಲ್ಲಾ ವಿದ್ಯಾಧಿಕಾರಿಗ  ನಂದಿಕೇಶನ್ ರವರು ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಸರಕಾರಿ ವೃತ್ತಿಪರ ಹೈಯರ್ ಸೆಕೆಂಡರಿ ಶಾಲೆ ಮುಳ್ಳೇರಿಯಾದ ಮುಖ್ಯೋಪಾಧ್ಯಾಯ  ಯತೀಶ್ ಕುಮಾರ್ ರೈ, ಪಾಂಡಿ ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ತೋಟ್ಟಂ ಅಬ್ದುಲ್ಲ, ಕಾರಡ್ಕ ಬ್ಲಾಕ್ ಪಂಚಾಯತಿ ಉಪಾಧ್ಯಕ್ಷ  ಸಿ. ಕೆ ಕುಮಾರನ್, ದೇಲಂಪಾಡಿ ಗ್ರಾಮ ಪಂಚಾಯತು ಸ್ಥಾಯೀ ಸಮಿತಿ ಅಧ್ಯಕ್ಷ ಮತ್ತು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ  ರತನ್ ಕುಮಾರ್, ಗ್ರಾಮ ಪಂಚಾಯತಿ ಸದಸ್ಯೆ  ಉಷಾ, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ದಿವಾಕರನ್, ಎಸ್. ಎಂ. ಡಿ. ಸಿ. ಯ ನಂದಕುಮಾರ್ ಇಂದ್ರಪ್ರಸ್ಥಂ, ಪಾಂಡಿ ವಿ. ಎಸ್. ಎಸ್ ಅಧ್ಯಕ್ಷ ರಮೇಶನ್ ಚೀನಪ್ಪಾಡಿ, ಹಳೆ ವಿದ್ಯಾಥರ್ಿಗಳು, ಮಕ್ಕಳು ರಕ್ಷಕರು, ಅಧ್ಯಾಪಕರು ಮತ್ತು ಊರವರು ಭಾಗವಹಿಸಿದ್ದರು.
   ಶಾಲಾ ಮುಖ್ಯೋಪಾಧ್ಯಾಯ ನಾರಾಯಣ ದೇಲಂಪಾಡಿ ಸ್ವಾಗತಿಸಿ, ಪ್ರಾಂಶುಪಾಲ ರಾಜು ವಿ. ವಂದಿಸಿದರು.


 
                                               

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries