HEALTH TIPS

No title

               ಆಲ್ವಾ ಶಿವಕ್ಷೇತ್ರ ಭಾಗಶಃ ಮುಳುಗಡೆ-ಶನಿವಾರದ ಆಷಾಢ ಉತ್ಸವ ಸಾಂಕೇತಿಕ ಆಚರಣೆ
   ಕುಂಬಳೆ: ಕೇರಳದ ದಕ್ಷಿಣ ಜಿಲ್ಲೆಗಳಲ್ಲಿ ಅವ್ಯಾಹತವಾಗಿ ಸುರಿಯುತ್ತಿರುವ ಭೀಕರ ವರುಣನ ಆರ್ಭಟ ಶುಕ್ರವಾರವೂ ಮುಂದುವರಿದಿದ್ದು, ಕೇಂದ್ರ ಪಡೆ ರಕ್ಷಣಾ ಕಾರ್ಯದಲ್ಲಿ ನಿರತವಾಗಿದೆ.
   ಎನರ್ಾಕುಳಂ ಜಿಲ್ಲೆಯ ಪೆರಿಯಾರ್ ನದೀ ತಟದಲ್ಲಿರುವ ವಿಶ್ವ ಪ್ರಸಿದ್ದ ಆಲ್ವಾ ಶಿವಕ್ಷೇತ್ರವು ಮಳೆಯ ಕಾರಣ ಶೇ.75ರಷ್ಟು ಮುಳುಗಡೆಯಾಗಿದ್ದು, ಶನಿವಾರ ಲಕ್ಷಾಂತರ ಜನರು ಪಾಲ್ಗೊಳ್ಳುವ ಆಷಾಢ ಉತ್ಸವವನ್ನು ಸಾಂಕೇತಿಕವಾಗಿ ನಡೆಸುವ ಬಗ್ಗೆ ಕ್ಷೇತ್ರ ಸಮಿತಿ ನಿಶ್ಚಯಿಸಿದೆ.
   ಆಲ್ವಾ ಶ್ರೀಶಿವ ಕ್ಷೇತ್ರವು ಕಾರಣಿಕ ಪ್ರಸಿದ್ದ ದೇವಾಲಯವಾಗಿದ್ದು, ದಿನನಿತ್ಯ ಸಾವಿರಾರು ಜನರು ಭೇಟಿ ನಿಡುತ್ತಾರೆ. ಆಷಾಢ ಮಾಸದ ಉತ್ಸವವು ಈ ಕ್ಷೇತ್ರದ ಪ್ರಧಾನ ಆಚರಣೆಯಾಗಿದ್ದು, ರಾಷ್ಟ್ರದ ಉದ್ದಗಲದ ಲಕ್ಷಾಂತರ ಮಂದಿ ಪಾಲ್ಗೊಳ್ಳುತ್ತಾರೆ. ಆದರೆ ಕಳೆದ ಎರಡು ವಾರಗಳಿಂದ ಸುರಿಯುತ್ತಿರುವ ಕುಂಭದ್ರೋಣ ಮಳೆಯ ಕಾರಣ ಪೆರಿಯಾರ್ ನದಿ ಉಕ್ಕಿಹರಿಯುತ್ತಿದ್ದು, ಕ್ಷೇತ್ರ ಪರಿಸರ ಮುಳುಗಡೆಯಾಗಿದೆ.
  ಪರಿಚಯ:
  ಆಲ್ವಾ ಶಿವ ಕ್ಷೇತ್ರವು ಇತಿಹಾಸ ಕಾರರ ನಿರ್ಣಯದಂತೆ ಕ್ರಿ.ಪೂ. 250 ರ ಕಾಲಘಟ್ಟದ್ದಾಗಿದ್ದು, 1341ರ ಬಳಿಕದ ಸ್ಪಷ್ಟ ದಾಖಲೆಗಳು ಲಭ್ಯವಿದೆ. ತಿರುವಾಂಕೂರು ರಾಜಕುಟುಂಬದ ಪ್ರಧಾನ ದೇವಾಲಯವಾಗಿ ಇದು ಪ್ರಸಿದ್ದಿಗೆ ಬಂದಿತು. ಶಿವ ಪರಮಾತ್ಮ ಜಗತ್ತಿನ ರಕ್ಷಣೆಗಾಗಿ ಸಮುದ್ರ ಮಥನದ ವೇಳೆ ಹುಟ್ಟಿದ ವಿಷವನ್ನು ಕುಡಿದುದರ ಹಿನ್ನೆಲೆಯಲ್ಲಿ ಈ ಕ್ಷೇತ್ರದ ಇತಿಹಾಸ ಗುರುತಿಸಲ್ಪಡುತ್ತಿದೆ.
      

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries