HEALTH TIPS

No title

                 ದೇಶ ಉದ್ದೇಶಿಸಿ ರಾಷ್ಟ್ರಪತಿ ಭಾಷಣ: 'ಮಹಿಳೆಗೆ ಮುಕ್ತ ಸ್ವಾತಂತ್ರ್ಯವಿಲ್ಲದಿದ್ದರೆ ಸ್ವಾತಂತ್ರ್ಯೋತ್ಸವ ಅಪೂರ್ಣ'
    ನವದೆಹಲಿ: ದೇಶದಲ್ಲಿ ಮಹಿಳೆಯರಿಗೆ ಮುಕ್ತ ಸ್ವಾತಂತ್ರ್ಯ ಇಲ್ಲದಿದ್ದರೆ ಸ್ವಾತಂತ್ರ್ಯೋತ್ಸವ ಅಪೂರ್ಣವಾಗಲಿದೆ ಎಂದು ಎಂದು ರಾಷ್ಟ್ರಪತಿ ರಾಮನಾಥ್ ಕೊವಿಂದ್ ಅವರು ಬುಧವಾರ ಹೇಳಿದ್ದಾರೆ.
   ಇಂದು 72ನೇ ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ಮಂಗಳವಾರ ದೇಶವನ್ನು ಉದ್ದೇಶಿಸಿ ಮಾತನಾಡಿದ ರಾಷ್ಟ್ರಪತಿಗಳು, ಸ್ವಾತಂತ್ರ್ಯ ದಿನಾಚರಣೆಯೂ ಪ್ರತಿ ಭಾರತೀಯನಿಗೂ ಅತ್ಯಂತ ಪವಿತ್ರವಾದ ದಿನ. ಈ ದಿನ ನಾವು ಸ್ವಾತಂತ್ರ್ಯಕ್ಕಾಗಿ ಹೋರಾಡಿದ ನಮ್ಮ ಪೂರ್ವಜರನ್ನು ಸ್ಮರಿಸುತ್ತೇವೆ ಎಂದರು.
   ನಮ್ಮ ತ್ರಿವಣ ಧ್ವಜ ದೇಶದ ಅಸ್ಮಿತೆಯ ಸಂಕೇತ. 72ನೇ ಸ್ವಾತಂತ್ರ್ಯೋತ್ಸವನ್ನ ನಾಳೆ ನಾವು ಸಂಭ್ರಮದಿಂದ ಆಚರಿಸುತ್ತಿದ್ದೇವೆ ಎಂದರು.
ಸ್ವಾತಂತ್ರ್ಯಕ್ಕಾಗಿ ನಮ್ಮ ಪೂರ್ವಜರು ಬಲಿದಾನ ಮಾಡಿದ್ದಾರೆ. ಅವರ ತ್ಯಾಗ, ಬಲಿದಾನದಿಂದಾಗಿ ನಮಗೆ ಇಂದು ಸ್ವಾತಂತ್ರ್ಯ ಸಿಕ್ಕಿದೆ. ಹೀಗಾಗಿ ಅವರ ಬಲಿದಾನವನ್ನು ನಾವು ಸ್ಮರಿಸಿಕೊಳ್ಳುತ್ತಿದ್ದೇವೆ. ಪೂರ್ವಜರು ಹಾಕಿಕೊಟ್ಟ ಮಾರ್ಗದಲ್ಲಿ ಇಂದು ಸಾಗಬೇಕಿದೆ. ರಾಷ್ಟ್ರದ ಅಭಿವೃದ್ಧಿಗಾಗಿ ಎಲ್ಲರೂ ಪಣ ತೊಡಬೇಕಿದೆ. ದೇಶದಲ್ಲಿ ನಿರುದ್ಯೋಗ ತೊಲಗಿಸಿ, ಬಡತನ ನಿವಾರಣೆ ಆಗಬೇಕಿ ಎಂದರು.
   ನಮ್ಮ ರೈತರು ಲಕ್ಷಾಂತರ ಕೋಟಿ ಜನರಿಗೆ ಆಹಾರವನ್ನು ಉತ್ಪಾದಿಸುತ್ತಾರೆ. ರೈತರ ಆದಾಯ ದ್ವಿಗುಣಗೊಳ್ಳಬೇಕಿದೆ. ಅನ್ನದಾತರ ಏಳಿಗಾಗಿ ನಾವು ಇಂದು ಶ್ರಮಿಸುವ ಮೂಲಕ ಸ್ವಾತಂತ್ರ್ಯ ಯೋಧರ ಭಾರತದ ಕನಸುಗಳು ನನಸು ಮಾಡಬೇಕಾಗಿದೆ ಎಂದು ರಾಷ್ಟ್ರಪತಿಗಳು ಹೇಳಿದ್ದಾರೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries