ಕ್ರಿಯಾತ್ಮಕತೆಯೆಡೆಗೆ ಸಾಗುವ ಶಕ್ತಿ ತುಳುನಾಡ ಆಚರಣೆಗಳ ಯುಕ್ತಿ-ಪ್ರದೀಪ್ ಕುಮಾರ್ ಕಲ್ಕೂರ
ಬದಿಯಡ್ಕ: ಭೋಗ ಜೀವನದಿಂದ ತ್ಯಾಗದತ್ತ ಬದುಕು-ಜೀವನವನ್ನು ಎತ್ತರಕ್ಕೇರಿಸುವ ಆಚರಣೆ ಈ ಮಣ್ಣಿನ ಸತ್ವದ ಸಂಕೇತ. ಇಂದು ನಮ್ಮನ್ನು ಆವರಿಸಿರುವ ಜಡತ್ವವನ್ನು ನಿವಾರಿಸಿ, ಕ್ರಿಯಾತ್ಮಕತೆಯೆಡೆಗೆ ಕೊಂಡೊಯ್ಯುವ ಶಕ್ತಿ ತುಳುನಾಡಿನ ಆಚರಣೆಗಳಲ್ಲಿ ಅಡಕವಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪ್ರದೀಪಕುಮಾರ ಕಲ್ಕೂರ ಅಭಿಪ್ರಾಯ ವ್ಯಕ್ತಪಡಿಸಿದರು.
ಜಿ.ಕೆ.ಚಾರಿಟೇಬಲ್ ಟ್ರಸ್ಟ್ ಬದಿಯಡ್ಕ ಹಾಗೂ ಕನರ್ಾಟಕ ಜಾನಪದ ಪರಿಷತ್ತು ಕೇರಳ ಘಟಕ ಹಾಗೂ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ , ತುಳುವೆರೆ ಆಯನೊ ಕೂಟ ಬದಿಯಡ್ಕ ಇವುಗಳ ಸಂಯುಕ್ತ ಆಶ್ರಯದಲ್ಲಿ ಕುಂಟಾಲುಮೂಲೆ ವಾಂತಿಚ್ಚಾಲು ನಲ್ಲಿ ಭಾನುವಾರ ಆಯೋಜಿಸಲಾದ ಆಟಿದ ಆಯನೊ ದ 50ನೇ ವರ್ಷದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
ಸಂಸ್ಕೃತಿಯೊಳಗಿನ ಬದುಕು ಸೌಖ್ಯ ನೆಮ್ಮದಿ ನೀಡುತ್ತದೆ. ಜಾನಪದ, ಆಚರಣೆಗಳೊಂದಿಗೆ ಒಂದಾಗಿ ಬದುಕಿದಾಗ ಜೀವ ಚೈತನ್ಯ ಮೂಡಿಬಂದು ನೆಮ್ಮದಿ ಮೂಡಿಸುತ್ತದೆ ಎಂದು ಅವರು ತಿಳಿಸಿದರು.
ಸಮಾರಂಭದಲ್ಲಿ ಇನ್ನೋರ್ವ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಜಿಲ್ಲಾ ಪಂಚಾಯತು ಸದಸ್ಯ ನ್ಯಾಯವಾದಿ ಕೆ.ಶ್ರೀಕಾಂತ್ ಅವರು ಮಾತನಾಡಿ, ಭಾರತೀಯ ಸಂಸ್ಕೃತಿಯಲ್ಲಿ ಹರಿದು ಬಂದ ಸಾಂಸ್ಕೃತಿಕ ಆಚರಣೆಗಳು ಪ್ರಕೃತಿಯೊಂದಿಗೆ ಜೀವ ಭಾವ ಸಂಬಂಧಗಳೊಂದಿಗೆ ನಿಕಟತೆಯನ್ನು ಹೊಂದಿದೆ ಎಂದು ತಿಳಿಸಿದರು. ಆಟಿಮಾಸದ ಸಂಕಷ್ಟಗಳನ್ನು ಜಾನಪದೀಯ ಚಿಂತನೆಗಳೊಂದಿಗೆ ಜೋಡಿಸಿ ಬದುಕಿನ ನೆಮ್ಮದಿಗೆ ಕಾರಣವಾದ ಆಚರಣೆಗಳನ್ನು ಮರೆಯಾಗದಂತೆ ಕಾಪಿಡಬೇಕಾದ ಅನಿವಾರ್ಯತೆ ಇದೆ ಎಂದು ಅವರು ತಿಳಿಸಿದರು.
ಬದಿಯಡ್ಕ ಗ್ರಾ.ಪಂ. ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಅಧ್ಯಕ್ಷತೆ ವಹಿಸಿದ್ದ ಸಮಾರಂಭವನ್ನು ಮಲಾರ್ ಮೂಲಬ್ರಹ್ಮಸ್ಥಾನದ ಆಡಳಿತ ಮೊಕ್ತೇಸರ ಸಂತೋಷ್ ಕುಮಾರ್ ಶೆಟ್ಟಿ ಬಾಕ್ರಬೈಲು ಧರ್ಮಚಾವಡಿ ದೀಪ ಬೆಳಗಿಸಿ ಉದ್ಘಾಟಿಸಿದರು. ಅವರು ಮಾತನಾಡಿ, ತುಳುನಾಡಿನ ಆಚರಣೆಗಳನ್ನು ಯುವ ಸಮಾಜಕ್ಕೆ ತಿಳಿಯಪಡಿಸುವ ಚಟುವಟಿಕೆಗಳು ಅಗತ್ಯವಿದೆ ಎಂದು ತಿಳಿಸಿದರು.
ಶಾಸಕ ಎನ್.ಎ. ನೆಲ್ಲಿಕುನ್ನು, ಕನರ್ಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕಾಧ್ಯಕ್ಷ ಅಬ್ದುಲ್ ರಹಮಾನ್ ಸುಬ್ಬಯ್ಯಕಟ್ಟೆ, ಗಡಿನಾಡು ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಕಾರ್ಯದಶರ್ಿ ಅಖಿಲೇಶ್ ನಗುಮುಗಂ ಉಪಸ್ಥಿತರಿದ್ದು ಶುಭಹಾರೈಸಿದರು. ಟೈಮ್ಸ್ ಆಫ್ ಕುಡ್ಳ ಪತ್ರಿಕೆಯ ಸಂಪಾದಕ ಎಸ್.ಆರ್.ಬಂಡಿಮಾರ್, ಬದಿಯಡ್ಕ ಗ್ರಾ.ಪಂ.ಮಾಜೀ ಅಧ್ಯಕ್ಷ ಮಾಹಿನ್ ಕೇಳೋಟ್, ಸಾಮಾಜಿಕ ಕಾರ್ಯಕರ್ತ ಅಶೋಕ ಭಂಡಾರಿ ಸುಬ್ಬಯ್ಯಕಟ್ಟೆ ಮೊದಲಾದವರು ಉಪಸ್ಥಿತರಿದ್ದರು.
ಸಮಾರಂಭದಲ್ಲಿ ನ್ಯಾಯವಾದಿ ಕೆ.ಶ್ರೀಕಾಂತ್ ಹಾಗೂ ಪ್ರದೀಪಕುಮಾರ್ ಕಲ್ಕೂರ ಆಟಿ ಆಯನೊವನ್ನು ಚೆನ್ನೆಮಣೆ ಆಟವಾಡುವ ಮೂಲಕ ಜಂಟಿಯಾಗಿ ವಿಶಿಷ್ಟ ಚಾಲನೆ ನೀಡಿದರು. ಹರಿದಾಸ ಜಯಾನಂದಕುಮಾರ್ ಹೊಸದುರ್ಗ ಅವರಿಗೆ ಕಾರ್ಯಕ್ರಮದ ವೇದಿಕೆಯಲ್ಲಿ ಕೀರ್ತನ ಕೇಸರಿ ಪ್ರಶಸ್ತಿ ಪ್ರಧಾನಗೈದು ಗೌರವಿಸಲಾಯಿತು.
ಸಮಾರಂಭದಲ್ಲಿ ಗೋಪಾಲಕೃಷ್ಣಕುಲಾಲ್ ವಾಂತಿಚ್ಚಾಲ್ ಸ್ವಾಗತಿಸಿ, ಯತೀಶ್ ಕುಮಾರ್ ವಂದಿಸಿದರು. ರಂಗ ನಿದರ್ೇಶಕ ಹರ್ಷ ರೈ ಪುತ್ರಕಳ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಮಕ್ಕಳಿಗೆ ಆಯೋಜಿಸಲಾದ ವಿವಿಧ ಜಾನಪದ ಕ್ರೀಡಾ ಸ್ಪಧರ್ೆಗಳನ್ನು ಕುಂಬಾರ ಜನಾಂಗ ಸಂಶೋಧಕ ಸೋಮಪ್ಪ ಸಾಲಿಯಾನ್ ಕಟ್ಟೆ ಮೈಸೂರು ಉದ್ಘಾಟಿಸಿದರು. ಶಶಿಪ್ರಭಾ ಮಂಡೆಕಾವು ನಿರ್ವಹಿಸಿದರು.