ಮೊಂತಿ ಫೆಸ್ತ್ : ಒಂಭತ್ತು ದಿನಗಳ ನೊವೆನಾ ಪ್ರಾರ್ಥನೆಗೆ ಚಾಲನೆ
ಕುಂಬಳೆ: ಕರಾವಳಿ ಕ್ರೈಸ್ತರ ಪವಿತ್ರ ಹಬ್ಬವಾದ ಕನ್ಯಾ ಮರಿಯಮ್ಮನ ಜನ್ಮದಿನ (ಮೊಂತಿ ಫೆಸ್ತ್, ತೆನೆಹಬ್ಬ) ಪ್ರಯುಕ್ತ ಪೂರ್ವ ತಯಾರಿಯಾಗಿ ಒಂಬತ್ತು ದಿನಗಳ ನೊವೆನಾ ಪ್ರಾರ್ಥನೆಗೆ ಕಾಸರಗೋಡು ಸಹಿತ ಕರಾವಳಿಯಲ್ಲಿ ಗುರುವಾರ ಚಾಲನೆ ನೀಡಲಾಯಿತು.
ಬೆಳಿಗ್ಗೆ ಎದ್ದು ಪುಟ್ಟ ಮಕ್ಕಳು ಹಾಗೂ ಹಿರಿಯರು ಮನೆಯ ತೋಟದಲ್ಲಿನ ಹೂವುಗಳನ್ನು ಸಂಗ್ರಹಿಸಿ ಚಚರ್್ನಲ್ಲಿ ನಡೆಯುವ ಪ್ರಾರ್ಥನಾ ವಿಧಿಗಳಲ್ಲಿ ಭಾಗವಹಿಸಿ ಕನ್ಯಾಮರಿಯಮ್ಮರಿಗೆ ತಾವು ತಂದ ಹೂಗಳನ್ನು ಶ್ರದ್ದಾ ಭಕ್ತಿಗಳಿಂದ ಸಮಪರ್ಿಸಿದರು.
ಕರಾವಳಿಯ ಕ್ರೈಸ್ತರು ಕನ್ಯಾ ಮರಿಯಮ್ಮನವರ ಜನ್ಮದಿನವನ್ನು ಹೊಸ ಬೆಳೆಯ ಹಬ್ಬವನ್ನಾಗಿ ಆಚರಿಸುವ ರೂಡಿಯಿದೆ. ಅಂದು ತಮ್ಮ ಗದ್ದೆಗಳಲ್ಲಿ ಬೆಳೆಸಿದ ಹೊಸ ಪೈರನ್ನು ದೇವರಿಗೆ ಸಮಪರ್ಿಸಿ ಹೊಸ ಅಕ್ಕಿಯ ಊಟ ಮಾಡುವುದು ಇವರ ವಾಡಿಕೆ. ಅದಕ್ಕೆ ಪೂರ್ವಭಾವಿಯಾಗಿ ಎಲ್ಲಾ ಚಚರ್ುಗಳಲ್ಲಿ ಕನ್ಯಾಮರಿಯಮ್ಮನವರಿಗೆ ನೊವೆನಾ ಪ್ರಾರ್ಥನೆಯೊಂದಿಗೆ ತೆನೆ ಹಬ್ಬಕ್ಕೆ ವಿಶೇಷ ತಯಾರಿ ಆರಂಭಿಸಲಾಗುತ್ತದೆ. ಸೆಪ್ಟಂಬರ್ 8ರಂದು ಕರಾವಳಿಯ ಕ್ರೈಸ್ತ ಸಮುದಾಯ ತೆನೆ ಹಬ್ಬ ಆಚರಿಸುತ್ತಾರೆ. ಅಂದು ಸಂಪೂರ್ಣ ಸಸ್ಯಹಾರದಿಂದ ಕೂಡಿದ ವಿವಿಧ ಬಗೆಯ ಖಾದ್ಯಗಳನ್ನು ತಯಾರಿಸಿ ಕುಟುಂಬವರ್ಗ ಹಾಗೂ ನೆರೆಯವರೊಂದಿಗೆ ಕೂಡಿ ಸವಿಯುವುದು ವಿಶೇಷವಾಗಿದೆ.