ಎಲ್ಲಾ ಸಸ್ಯವರ್ಗಗಳಿಗೆ ಔಷಧೀಯ ಗುಣವಿದೆ-ಕೊಂಡೆವೂರು ಶ್ರೀ
ಔಷಧಿ ಗಂಜಿ ವಿತರಣೆ
ಉಪ್ಪಳ: ನಮ್ಮ ಆರೋಗ್ಯ ಉತ್ತಮವಾಗಿದ್ದರೆ ನಾವು ನೆಮ್ಮದಿಯಿಂದ ಜೀವಿಸಲು ಸಾಧ್ಯ, ಇಂದು ಕಲುಶಿತ, ಕಲಬೆರಕೆ ಆಹಾರ-ವಿಹಾರಗಳಿಂದ ವ್ಯಾಪಕ ಆರೋಗ್ಯ ಸಮಸ್ಯೆಗಳು ಕಂಡುಬಂದು ದುಖಃದ ಜೀವನಕ್ಕೆ ಕಾರಣವಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಮ್ಮ ಸುತ್ತಮುತ್ತಲು ಸಿಗುವ ಗಿಡ,ಬಳ್ಳಿ ಸೊಪ್ಪುಗಳನ್ನು ಬಳಸಿ ತಯಾರಿಸಿದ ಆಹಾರ ಸೇವಿಸಿದಾಗ ದೇಹದ ರೋಗನಿರೋಧಕ ಶಕ್ತಿ ವೃದ್ಧಿಯಾಗುತ್ತದೆ ಎಂದು ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮದ ಶ್ರೀಯೋಗಾನಂದ ಸರಸ್ವತೀ ಶ್ರೀಗಳು ಆಶೀರ್ವಚನದಲ್ಲಿ ತಿಳಿಸಿದರು.
ಕೊಂಡೆವೂರಿನ ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ಗುರುವಾರ "ಕಕರ್ಾಟಕ ಮಾಸದ ಔಷಧೀಯ ಗಂಜಿ" ಅನ್ನುವ ವಿಶಿಷ್ಟ ಕಾರ್ಯಕ್ರಮದಲ್ಲಿ ಅವರು ದಿವ್ಯ ಉಪಸ್ಥಿತರಿದ್ದು ಮಾತನಾಡಿದರು.
ಹಿಂದಿನ ತಲೆಮಾರು ಸಾಗಿಬಂದ ಪರಂಪರೆಯನ್ನು ನಾವು ಮನನ ಮಾಡಬೇಕು. ಪ್ರಕೃತಿಯೊಂದಿಗಿನ ಸಂಬಂಧಗಳಿಂದ ದೂರ ಬಂದಿರುವುದು ಸಮಸ್ಯೆಗೆ ಕಾರಣವಾಗುತ್ತಿದೆ. ಭಾರತೀಯ ಧರ್ಮ, ಸಂಸ್ಕೃತಿ ಪ್ರಕೃತಿಯ ಮಡಿಲಿನೊಂದಿಗೆ ಅನುಸಂಧಾನ ಗೊಮಡಿರುವಂತದ್ದು ಎಂದು ಅವರು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದ ಡಾ. ಸಜೀವನ್ ಪೊನ್ನಾಣಿಯವರು ಅನ್ನದ ಮಹತ್ವವನ್ನು ಹೇಳುತ್ತಾ ಎಲ್ಲಾ ಸಸ್ಯವರ್ಗಗಳಿಗೆ ಔಷಧೀಯ ಗುಣವಿದೆ, ಅವುಗಳನ್ನು ನಮ್ಮ ಆಹಾರದಲ್ಲಿ ಸರಿಯಾಗಿ ಬಳಸಿಕೊಂಡರೆ ನಾವು ಮಾತ್ರವಲ್ಲ, ನಮ್ಮ ಮಕ್ಕಳೂ ಆರೋಗ್ಯವಂತರಾಗಿ ಬಾಳಲು ಸಾಧ್ಯ ಎಂದು ತಿಳಿಸಿದರು.
ವೇದಿಕೆಯಲ್ಲಿ ಆಶ್ರಮದ ಆರೋಗ್ಯ ವಿಭಾಗ ಶ್ರೀನಿತ್ಯಾನಂದ ಆಯುವರ್ೇದ ಸಂರಕ್ಷಣಾ ಸಮಿತಿಯ ಚಂದ್ರ ವೈದ್ಯರ್ ಕಣ್ಣೂರು, ಅಚ್ಯುತನ್ ವೈದ್ಯರ್ ಕಾಞಂಗಾಡ್, ವಲ್ಸನ್ ಗುರುಕ್ಕಳ್ ಕಣ್ಣೂರು, ತಾಂಬನ್ ವೈದ್ಯರ್ ಚಿಮೇನಿ ಮತ್ತು ಶ್ರೀವತ್ಸ ಅಲುವಾ ರವರು ಉಪಸ್ಥಿತರಿದ್ದರು.ಸುನೀಶ್ ವೈದ್ಯರ್ ಸ್ವಾಗತಿಸಿ, ಸಂದೀಪ್ ವೈದ್ಯರ್ ವಂದಿಸಿದರು.
ಈ ಸಂದರ್ಭ ಸೇರಿದ ಭಕ್ತರು, ಸದ್ಗುರು ಶ್ರೀ ನಿತ್ಯಾನಂದ ವಿದ್ಯಾಪೀಠದ ವಿದ್ಯಾಥರ್ಿಗಳು ಔಷಧೀಯ ಗಂಜಿಯನ್ನು ವಿವಿಧ ಗಿಡಬಳ್ಳಿಗಳಿಂದ ತಯಾರಿಸಿದ ಆಹಾರ ವಸ್ತುಗಳನ್ನು ವಿತರಿಸಲಾಯಿತು.