ಪ್ರಳಯ ಬಾಧಿತ ಪ್ರದೇಶದಲ್ಲಿ ರಕ್ಷಣಾ ಕಾರ್ಯ ಕೈಗೊಂಡ ಮೀನುಗಾರರಿಗೆ ಗೌರವಾದರ
ಮುಳ್ಳೇರಿಯ: ಕೇರಳ ಜಲಪ್ರಳಯದಲ್ಲಿ ಸತತ ಎರಡು ವಾರಗಳ ಕಾಲ ರಕ್ಷಣಾ ಕಾರ್ಯದಲ್ಲಿ ಕೈ ಜೋಡಿಸಿದ ಜಿಲ್ಲೆಯ ಅಜನೂರು ಕಡಪ್ಪುರದ ಮೀನುಗಾರರಿಗೆ ಬೇಕಲ ಲಯನ್ಸ್ ಕ್ಲಬ್ ವತಿಯಿಂದ ಗೌರವಿಸಲಾಯಿತು. ಕಾಞಂಗಾಡು ಲಯನ್ಸ್ ಕ್ಲಬ್ ಸಮುಚ್ಚಯದಲ್ಲಿ ಭಾನುವಾರ ನಡೆದ ಕಾರ್ಯಕ್ರಮವನ್ನು ತ್ರಿಕರಿಪುರ ಶಾಸಕ ಎಂ.ರಾಜಗೋಪಾಲನ್ ಉದ್ಘಾಟಿಸಿದರು. ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಜೀವದ ಹಂಗು ತೊರೆದು ರಕ್ಷಣಾ ಕಾರ್ಯದಲ್ಲಿ ತೊಡಗಿದ ಜಿಲ್ಲೆಯ ಮೀನುಗಾರರ ಶ್ರಮ ಶ್ಲಾಘನೀಯ ಎಂದು ಹೇಳಿದರು. ಪ್ರವಾಹ ಪೀಡಿತ ವಿವಿಧ ಜಿಲ್ಲೆಗಳಲ್ಲಿ ಮೀನುಗಾರರು ತಮ್ಮ ಅಮೂಲ್ಯ ಸಮಯವನ್ನು ವ್ಯಯಿಸಿ ರಕ್ಷಣಾ ಕಾರ್ಯದಲ್ಲಿ ಕೈ ಜೋಡಿಸಿದ್ದು ಅತ್ಯಪೂರ್ವವಾದ ಘಟನೆ. ಕಾಞಂಗಾಡಿನ ಮೀನುಗಾರರ ನಡೆಸಿದ ಅಪೂರ್ವ ಕೆಲಸವನ್ನು ಕೇರಳದ ಚರಿತ್ರೆ ಸ್ಮರಿಸಲಿದೆ ಎಂದರು. ರಕ್ಷಣಾ ಕಾರ್ಯದಲ್ಲಿ ತೊಡಗಿದ ಮೀನುಗಾರರನ್ನು ಗೌರವಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡ ಬೇಕಲ ಲಯನ್ಸ್ ಕ್ಲಬ್ ಮಾದರಿ ಕಾರ್ಯವಾಗಿದೆ ಎಂದು ಶಾಸಕರು ಹೇಳಿದರು.
ಒಟ್ಟು 32 ಮಂದಿ ಮೀನುಗಾರರನ್ನು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಿದರು. ಲಯನ್ಸ್ ಕ್ಲಬ್ ಅಧ್ಯಕ್ಷ ಸುಕುಮಾರನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅಜನೂರು ಗ್ರಾ.ಪಂ ಅಧ್ಯಕ್ಷ ಪಿ.ದಾಮೋದರನ್, ಪಂಚಾಯತ್ ಸದಸ್ಯ ಶಿಬಾ ಕೊಳವಯಲ್, ಶಾರುಲ್ ಚಿತ್ತಾರಿ, ಮುಹಾಜಿರ್ ಕೆ.ಎಸ್, ಫೈಸಲ್, ಅಬುಬಕರ್ ಖಾಜಾ, ಕಣ್ಣನ್ ಕರವಕ್ಕೋಡು, ಮುಹಮ್ಮದ್, ಸಿ.ಪಿ ಸುಬೈರ್ ಮೊದಲಾದವರು ಮಾತನಾಡಿದರು. ರಕ್ಷಣಾ ಕಾರ್ಯದಲ್ಲಿ ಮುಂಚೂಣಿಯ ನಾಯಕತ್ವ ವಹಿಸಿದ ತಂಡ ನಾಯಕ ತಮ್ಮ ಅನುಭವವನ್ನು ಹಂಚಿಕೊಂಡರು.