ಬದಿಯಡ್ಕದಲ್ಲಿ ಅಯ್ಯಂಗಾಳಿ ಜನ್ಮದಿನೋತ್ಸವ
ಬದಿಯಡ್ಕ: ಆದಿವಾಸಿ ದಲಿತ ವಿಭಾಗದವರಿಗೆ ಸರಕಾರದ ಸವಲತ್ತುಗಳು ಸಕಾಲದಲ್ಲಿ ಸಿಗಬೇಕು. ಸರಕಾರದಿಂದ ಸಿಗುವ ಸವಲತ್ತುಗಳ ಕುರಿತು ಜನರಲ್ಲಿ ಅರಿವುಮೂಡಿಸುವಲ್ಲಿ ಸಂಘಟನೆಗಳು ಪ್ರಧಾನ ಪಾತ್ರವಹಿಸಬೇಕು. ಸಂಕಷ್ಟದ ಜೀವನ ಸಾಗಿಸುತ್ತಿರುವವರನ್ನು ಪತ್ತೆಹಚ್ಚಿ ಅವರಿಗೆ ಸಾಂತ್ವನ ಮತ್ತು ಸಹಕಾರವನ್ನು ನೀಡಬೇಕು ಎಂದು ಎ.ಡಿ.ಎಂ.ಎಸ್. ರಾಜ್ಯ ಪ್ರಧಾನ ಕಾರ್ಯದಶರ್ಿ ಸಿ.ಎಚ್. ಗೋಪಾಲ ಹೇಳಿದರು.
ಮಂಗಳವಾರ ಬದಿಯಡ್ಕ ಗಣೇಶ ಮಂದಿರದಲ್ಲಿ ಆದಿ ದಲಿತ್ ಮುನ್ನಡೆ ಜಿಲ್ಲಾ ಸಮಿತಿಯ ಆಶ್ರಯದಲ್ಲಿ ನಡೆದ ಅಯ್ಯಂಗಾಳಿ ಜನ್ಮದಿನೋತ್ಸವ ಮತ್ತು ವಾಷರ್ಿಕ ದಿನಾಚರಣೆಯನ್ನು ದೀಪಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ಎ.ಡಿ.ಎಂ.ಎಸ್. ಜಿಲ್ಲಾ ಅಧ್ಯಕ್ಷ ಚಂದ್ರಶೇಖರ ಕುಂಬಳೆ ಸಮಾರಂಭಧ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ದೀನದಲಿತರಿಗೆ ಸ್ಥಳ, ಮನೆ, ಚಿಕಿತ್ಸಾ ಸೌಲಭ್ಯಗಳನ್ನು ಸಕಾಲಕ್ಕೆ ಒದಗಿಸಿಕೊಡುವಲ್ಲಿ ಎ.ಡಿ.ಎಂ.ಎಸ್. ಪ್ರಯತ್ನ ನಡೆಸುತ್ತಾ ಬಂದಿದ್ದು, ಹಲವರು ಫಲಾನುಭವಿಗಳಾಗಿದ್ದಾರೆ. ಮುಂದೆಯೂ ಎಲ್ಲರ ಸಹಕಾರದಿಂದ ಇನ್ನಷ್ಟು ಯೋಜನೆಗಳನ್ನು ವಿಸ್ತರಿಸಿ ಶೋಷಣೆಗೊಳಗಾದವರನ್ನು ಪೋಷಿಸುವ ಕಾರ್ಯಕ್ಕೆ ಮುಂದಾಗಲಿದೆ ಎಂದರು.
ಮುಖ್ಯ ಅತಿಥಿಗಳಾಗಿ ಗಡಿನಾಡ ಕವಿ, ಪತ್ರಕರ್ತ ರಾಧಾಕೃಷ್ಣ ಕೆ. ಉಳಿಯತ್ತಡ್ಕ ಮಾತನಾಡಿ, ಆದಿವಾಸಿ ದಲಿತರ ಸಾಂಸ್ಕೃತಿಕ ಬದುಕನ್ನು ಕಟ್ಟಿಕೊಡುವ ಪ್ರಯತ್ನ ನಡೆಯಬೇಕು. ಪರಂಪರಾಗತ ಆರಾಧನೆ, ಆಚರಣೆಗಳಿಗೆ ಚ್ಯುತಿಬಾರದಂತೆ ಕಾಯಕಲ್ಪ ನೀಡಬೇಕು. ವಿದ್ಯಾಥರ್ಿಗಳ ಮತ್ತು ಯುವಜನರ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ವಿವಿಧ ಯೋಜನೆಗಳನ್ನು ರೂಪಿಸಬೇಕು. ಅಯ್ಯಂಗಾಳಿಯವರು ತಮ್ಮ ಜೀವನದುದ್ದಕ್ಕೂ ಶೋಷಣೆಗೆ ಒಳಗಾದವರನ್ನು ಮೇಲೆತ್ತುವಲ್ಲಿ ಪ್ರಧಾನ ಪಾತ್ರವಹಿಸಿದ್ದರು. ಶಿಕ್ಷಣ ಮತ್ತು ಸಾಮಾಜಿಕ ಕಾರ್ಯಗಳಿಗೆ ಒತ್ತು ನೀಡಿ ಜನಮಾನಸದಲ್ಲಿ ಅಚ್ಚಳಿಯದೇ ಉಳಿದರು ಎಂದರು.
ಎ.ಡಿ.ಎಂ.ಎಸ್. ರಾಜ್ಯ ಕೋಶಾಧಿಕಾರಿ ಐತ್ತಪ್ಪ ಅಮ್ಮಂಗೋಡು, ಬದಿಯಡ್ಕ ಗ್ರಾಮಪಂಚಾಯತ್ ಸದಸ್ಯ ಶಂಕರ ಡಿ., ಚೆಂಗಳ ಗ್ರಾಮಪಂಚಾಯತ್ ಸದಸ್ಯ ಸದಾನಂದ, ಎ.ಡಿ.ಎಂ.ಎಸ್. ರಾಜ್ಯ ಸಮಿತಿ ಸದಸ್ಯೆ ಸೀತ ಬಂಬ್ರಾಣ, ಅಂಬೇಡ್ಕರ್ ಪ್ರಶಸ್ತಿ ವಿಜೇತ ಸಾಮಾಜಿಕ ಕಾರ್ಯಕರ್ತ ರಾಮಪ್ಪ ಮಂಜೇಶ್ವರ, ಅಂಬೇಡ್ಕರ್ ವಿಚಾರ ವೇದಿಕೆಯ ಅಧ್ಯಕ್ಷ ರಾಮಪಟ್ಟಾಜೆ ಶುಭಾಶಂಸನೆಗೈದರು.
ಎಸ್.ಎಸ್.ಎಲ್.ಸಿ.ಯಲ್ಲಿ 2017-18ರಲ್ಲಿ ಎಲ್ಲಾ ವಿಷಯಗಳಲ್ಲಿ ಎ ಪ್ಲಸ್ ಪಡೆದ ವಿದ್ಯಾಥರ್ಿಗಳಾದ ನಮಿತ, ಸುಶ್ಮಿತರಿಗೆ ಪ್ರತಿಭಾಪುರಸ್ಕಾರ ನೀಡಲಾಯಿತು. ಹಿರಿಯರಾದ ಕುಂಬಳೆ ಪಡುಮನೆ ಶ್ರೀಕುಂಞಿ ನಾಗರಕೊಟ್ಯ ದೈವದ ಪಾತ್ರಿ ಶ್ರೀನಿವಾಸ ಕೆ., ನಾಡವೈದ್ಯೆ ಸುಶೀಲ ಕುತ್ತಾಜೆ ವಾಣಿನಗರ ಅವರನ್ನು ಸನ್ಮಾನಿಸಲಾಯಿತು. ಕಬಡ್ಡಿ ಆಟಗಾರ ಪ್ರದೀಪ್ ಮಲ್ಲ ಹಾಗೂ ಭರತನಾಟ್ಯದಲ್ಲಿ ಪ್ರಾವೀಣ್ಯತೆಯನ್ನು ಪಡೆದ ಶ್ವೇತ ಸೀತಾರಾಮ್, ಶ್ರೀವಿದ್ಯಾ ಸೀತಾರಾಂ ಅರ್ಲಡ್ಕ ಇವರುಗಳನ್ನು ಗುರುತಿಸಿ ಪುರಸ್ಕಾರವನ್ನು ನೀಡಲಾಯಿತು. ಎ.ಡಿ.ಎಂ.ಎಸ್.ನ ಮಾಧವ ಅರ್ಲಡ್ಕ ಸ್ವಾಗತಿಸಿ, ಜಿಲ್ಲಾ ಕಾರ್ಯದಶರ್ಿ ಸುಂದರ ಕೆ.ಎಂ. ಧನ್ಯವಾದವನ್ನಿತ್ತರು. ಪ್ರಳಯ ಕಾಲದಲ್ಲಿ ದುರಂತಕ್ಕೀಡಾದವರಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು. ಮುಖ್ಯಮಂತ್ರಿಯವರ ಪರಿಹಾರ ನಿಧಿಗೆ ಆಥರ್ಿಕ ಸಹಾಯ ನೀಡಲು ಎ.ಡಿ.ಎಂ.ಎಸ್.ಜಿಲ್ಲಾ ಸಮಿತಿ ತೀಮರ್ಾನ ಕೈಗೊಂಡಿತು. ಅಪರಾಹ್ನ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.