ಮುಲ್ಲಪೆರಿಯಾರ್ನಿಂದ ತಮಿಳುನಾಡು ನೀರು ಬಿಟ್ಟಿದ್ದು ರಾಜ್ಯದಲ್ಲಿ ಪ್ರವಾಹಕ್ಕೆ ಕಾರಣ: ಕೇರಳ
ಹೊಸದಿಲ್ಲಿ: ತಮಿಳುನಾಡಿನ ಮುಲ್ಲಪೆರಿಯಾರ್ ಅಣೆಕಟ್ಟಿನಿಂದ ತಮಿಳುನಾಡು ಅತಿ ಹೆಚ್ಚು ಮತ್ತು ಕ್ಷಿಪ್ರಗತಿಯಲ್ಲಿ ನೀರು ಬಿಟ್ಟಿರುವುದೇ ರಾಜ್ಯದ ತೀವ್ರ ಪ್ರವಾಹಕ್ಕೆ ಕಾರಣವೆಂದು ಸುಪ್ರೀಂ ಕೋಟರ್್ನಲ್ಲಿ ಕೇರಳ ಸರಕಾರ ವರದಿ ಸಲ್ಲಿಸಿದೆ.
ಇಡುಕ್ಕಿ ಜಿಲ್ಲೆಯ ತೇಕ್ಕಡಿ ಸಮೀಪದ ಪಶ್ಚಿಮ ಘಟ್ಟದಲ್ಲಿರುವ ಮುಲ್ಲ ಪೆರಿಯಾರ್ ಅಣೆಕಟ್ಟೆಯಿಂದ ಭಾರಿ ನೀರು ಹೊರಬಿಡಲಾಯಿತು. ಇದರಿಂದಾಗಿ ತುಂಬಿ ಹೋದ ಇಡುಕ್ಕಿ ಜಲಾಶಯದಿಂದ ನೀರು ಬಿಡಬೇಕಾಯಿತು. ಇದು ಎಂದೂ ಕಂಡರಿಯದ ದುರಂತಕ್ಕೆ ಸಾಕ್ಷಿಯಾಗಿದೆ ಎಂದು ಕೇರಳ ಸರಕಾರ ಅಫಿಡವಿಟ್ ಸಲ್ಲಿಸಿದೆ.
ಅಣೆಕಟ್ಟೆಯಿಂದ ನೀರು ಬಿಡುವಾಗ ಮುನ್ನೆಚ್ಚರಿಕೆ ವಹಿಸಬೇಕೆಂದು ಈ ಹಿಂದೆ ಹಲವು ಬಾರಿ ತಮಿಳುನಾಡಿಗೆ ಮನವಿ ಸಲ್ಲಿಸಲಾಗಿತ್ತು. ಆದರೆ ತಮಿಳುನಾಡಿನ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ತಿಳಿಸಲಾಗಿದೆ.
ಕೇರಳದಲ್ಲಿ ನೈಸಗರ್ಿಕ ವಿಕೋಪ ಸಂದರ್ಭದಲ್ಲಿ ಕೈಗೊಂಡಿರುವ ರಕ್ಷಣಾ ಹಾಗೂ ಪರಿಹಾರ ಕಾಯರ್ಾಚರಣೆಗಳು, ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ವರದಿ ಸಲ್ಲಿಸುವಂತೆ ಆಗ್ಟ್ 18ರಂದು ಸುಪ್ರೀಂ ಕೋಟರ್್ ಸೂಚನೆ ನೀಡಿದ್ದ ಹಿನ್ನೆಲೆಯಲ್ಲಿ ಕೇರಳ ಸರಕಾರ ಅಫಿಡವಿಟ್ ಸಲ್ಲಿಸಿದೆ.