ಬದಿಯಡ್ಕದಲ್ಲಿ ಸರ್ವಪಕ್ಷ ಸಂತಾಪ
ಬದಿಯಡ್ಕ: ಕೇವಲ ರಾಜಕಾರಣವನ್ನು ಮಾಡದೆ ದೇಶದ ಬಗ್ಗೆ ಸತ್ ಚಿಂತನೆಯನ್ನು ಹೊಂದಿದ ಧೀಮಂತ ನಾಯಕರಾಗಿ ಆದರ್ಶಪ್ರಾಯರಾಗಿ ಮೆರೆದವರು. ಜಗತ್ತಿನಲ್ಲೇ ಇವರಂತಹ ಶ್ರೇಷ್ಠವ್ಯಕ್ತಿತ್ವಕ್ಕೆ ಪಯರ್ಾಯವಿಲ್ಲ. ಇವರ ವ್ಯಕ್ತಿತ್ವವು ಮುಂದಿನ ಪೀಳಿಗೆಗೆ ಮಾದರಿ ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ಕೆ.ಶ್ರೀಕಾಂತ್ ಹೇಳಿದರು.
ಗುರುವಾರ ಬದಿಯಡ್ಕ ಸಂಸ್ಕೃತಿ ಭವನದಲ್ಲಿ ಮಾಜಿಪ್ರಧಾನಿ, ಭಾರತರತ್ನ ಅಟಲ್ಬಿಹಾರಿ ವಾಜಪೇಯಿಯವರಿಗೆ ಕಾಸರಗೋಡು ವಿಧಾನಸಭಾ ಕ್ಷೇತ್ರದ ಸರ್ವಪಕ್ಷ ನಿಯೋಗದಿಂದ ನಡೆದ ಶ್ರದ್ಧಾಂಜಲಿ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಅಪ್ಪಟ ದೇಶಭಕ್ತರಾಗಿದ್ದ ವಾಜಪೇಯಿಯವರು ಓರ್ವ ದೇಶಪ್ರೇಮಿ ಪತ್ರಕರ್ತರೂ ಆಗಿದ್ದರು. ದೇಶಭಕ್ತಿಯನ್ನು ಸಾರುವಂತಹ ಅವರ ಅನೇಕ ಲೇಖನಗಳು ಯುವತಲೆಮಾರಿಗೆ ಮಾರ್ಗದರ್ಶಕ. ಜೀವನದುದ್ದಕ್ಕೂ ದೇಶದ ಹಿತಾಸಕ್ತಿಯ ಬಗ್ಗೆ ಚಿಂತಿಸಿ ತನ್ನ ವಿರೋಧಪಕ್ಷದಿದ್ದಾಗಲೂ ಮೆಚ್ಚುಗೆ ವ್ಯಕ್ತಪಡಿಸುವಂತಹ ಮಹಾನ್ ನಾಯಕರಾಗಿದ್ದರು ಎಂದರು.
ಬದಿಯಡ್ಕ ಗ್ರಾಮಪಂಚಾಯತಿ ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್, ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಿವಶಂಕರ ಭಟ್ ಗುಣಾಜೆ, ಬಿಜೆಪಿ ರಾಜ್ಯಸಮಿತಿ ಸದಸ್ಯ ಸುರೇಶ್ ಕುಮಾರ್ ಶೆಟ್ಟಿ, ಬಿಜೆಪಿ ರಾಜ್ಯ ಕೌನ್ಸಿಲ್ ಸದಸ್ಯ ಶಿವಕೃಷ್ಣ ಭಟ್, ಮುಸ್ಲಿಂಲೀಗಿನ ನೇತಾರ ಮಾಹಿನ್ ಕೇಳೋಟ್, ಬಿಜೆಪಿ ಕಾಸರಗೋಡು ಮಂಡಲ ಅಧ್ಯಕ್ಷ ಸುಧಾಮ ಗೋಸಾಡ, ಜನತಾದಳ (ಯು)ದ ಎಂ.ಎಚ್.ಜನಾರ್ಧನ, ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿಯ ಕಾಸರಗೋಡು ಜಿಲ್ಲಾ ಉಪಾಧ್ಯಕ್ಷ ಶಂಕರನಾರಾಯಣ ಮಯ್ಯ, ಹಿಂದೂ ಐಕ್ಯವೇದಿಯ ಮಂಜುನಾಥ ಉಡುಪ, ವಿಶ್ವಹಿಂದೂಪರಿಷತ್ನ ಲಕ್ಷ್ಮಣಪ್ರಭು ಕರಿಂಬಿಲ, ಹರೀಶ್ ನಾರಂಪಾಡಿ ಮತ್ತಿತರರು ಮಾತನಾಡಿದರು.