HEALTH TIPS

No title

              ಸಾಮಾಜಿಕ ವಿಷಬೀಜಗಳ ಬಗ್ಗೆ ಜಾಗೃತಿ ಅಗತ್ಯ-ಬಿ.ರಮಾನಾಥ ರೈ
   ಬದಿಯಡ್ಕ: ಇಂದು ವಿಶ್ವದಾತ್ಯಂತ ಹರಡಿರುವ ತುಳುವರ ಭಾಷೆ, ಸಂಸ್ಕೃತಿಯ ವಿಶಾಲ ಹರಡುವಿಕೆ ಭಾಷೆಯ ಬೆಳವಣಿಗೆಗೆ ಪೂರಕವಾಗಿ ಬೆಳೆಯಬೇಕು. ತುಳುನಾಡಿನ ಪ್ರಾಚೀನ ಸಂಸ್ಕೃತಿಯ ಸಂವರ್ಧನೆಗೆ ಯುವ ಸಮೂಹ ಕ್ರಿಯಾತ್ಮಕವಾಗಿ ತೊಡಗಿಸಿಕೊಳ್ಳಬೇಕು ಎಂದು ಎಣ್ಮಕಜೆ ಗ್ರಾ.ಪಂ. ಸ್ಥಾಯೀ ಸಮಿತಿ ಅಧ್ಯಕ್ಷೆ, ಕನರ್ಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯೆ ಆಯಿಷಾ ಎ.ಎ.ಪೆರ್ಲ ಅವರು ಕರೆನೀಡಿದರು.
    ಜಿ.ಕೆ.ಚಾರಿಟೇಬಲ್ ಟ್ರಸ್ಟ್ ಬದಿಯಡ್ಕ ಹಾಗೂ ಕನರ್ಾಟಕ ಜಾನಪದ ಪರಿಷತ್ತು ಕೇರಳ ಘಟಕ ಹಾಗೂ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ , ತುಳುವೆರೆ ಆಯನೊ ಕೂಟ ಬದಿಯಡ್ಕ ಇವುಗಳ ಸಂಯುಕ್ತ ಆಶ್ರಯದಲ್ಲಿ ಕುಂಟಾಲುಮೂಲೆ ವಾಂತಿಚ್ಚಾಲು ನಲ್ಲಿ ಭಾನುವಾರ ಆಯೋಜಿಸಲಾದ ಆಟಿದ ಆಯನೊ ದ 50ನೇ ವರ್ಷದ ಸಮಾರಂಭದಲ್ಲಿ ಅಪರಾಹ್ನ ನಡೆದ "ಆಟಿ ಸಂಪ್ರದಾಯ ಆಚರಣೆಯ ಉಳಿವಿನಲ್ಲಿ ಮಹಿಳೆಯರ ಪಾತ್ರ"ದ ಬಗ್ಗೆ ಆಯೋಜಿಸಿದ "ಕಟ್ಟೆಪಟ್ಟಾಂಗ" ವಿಶೇಷ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
   ಸಂಧಿ-ಪಾಡ್ದನಗಳು ತೌಳವ ಜನಜೀವನ, ಸಂಸ್ಕೃತಿಗಳ ಪರಂಪರೆಯ ಬಗ್ಗೆ ಬೆಳಕು ಚೆಲ್ಲಿದ್ದು, ಆಚರಣೆಗಳನ್ನು ಸಂಪ್ರದಾಯಕ್ಕೆ ತೊಡಕಾಗದಂತೆ ವರ್ತಮಾನಕ್ಕೆ ಹೊಂದಿಕೆಯಾಗಿಸಿ ಮುನ್ನಡೆಸುವ ಅಗತ್ಯ ಇದೆ ಎಂದು ಅವರು ತಿಳಿಸಿದರು. 
   ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಕನರ್ಾಟಕದ ಮಾಜೀ ಸಚಿವ ಬಿ.ರಮಾನಾಥ ರೈ ಮಾತನಾಡಿ, ತುಳುನಾಡ ಸಂಸ್ಕೃತಿ ಬೆಳೆದುಬಂದಿರುವುದು ಸಹೋದರತೆ, ಸಹಬಾಳ್ವೆ ಹಾಗೂ ಸಾಮರಸ್ಯದ ಏಕತೆಯಿಂದ. ಆದರೆ ಇಂದು ಜಾತಿ ಧರ್ಮಗಳ ಮಧ್ಯೆ ವಿಷಬೀಜ ಬಿತ್ತುವ ಮೂಲಕ ಸಮಾಜವನ್ನು ಒಡೆಯುವ ಹುನ್ನಾರಗಳು ನಡೆಯುತ್ತಿರುವುದು ತುಳುನಾಡಿಗೆ ಕಪ್ಪು ಚುಕ್ಕೆಯಾಗುವ ಭೀತಿಯಿದೆ. ಈ ಹಿನ್ನೆಲೆಯಲ್ಲಿ ಪರಂಪರೆಯ ಬಗ್ಗೆ ಅವಲೋಕನ ನಡೆಸಿ ಮತ್ತೆ ಸುಂದರ ಸಮಾಜ ನಿಮರ್ಾಣಕ್ಕೆ ಮುಂದಾಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
   ಸಾಮಾಜಿಕ ಸಾಮರಸ್ಯ, ನ್ಯಾಯ ನಿರ್ಣಯದಲ್ಲಿ ತುಳುನಾಡ ಜನಪದ ಆಚರಣೆ ಸಂಪ್ರದಾಯ ಮಹತ್ವಪೂರ್ಣ ಕೊಡುಗೆ ನೀಡಿದೆ. ಸಮಾಜದ ಎಲ್ಲಾ ವರ್ಗದ ಜನರೂ ಸುದೃಢರಾಗುವುದರಿಂದ ಮಾತ್ರ ಸಂತೃಪ್ತ, ಭಾವೈಕ್ಯತೆಯ ಸಮಾಜ ನಿಮರ್ಾಣ ಸಾಧ್ಯ ಎಂದು ಅವರು ತಿಳಿಸಿದರು. ತುಳು ಭಾಷೆ ಸಂಸ್ಕೃತಿಯು ಸಮಗ್ರ ಶ್ರೇಯಸ್ಸನ್ನು ಬಯಸುವ ಸಮಾಜವಾಗಿದ್ದು, ಯಾವುದೇ ವಶೀಲಿಗೊಳಗಾಗದೆ ಭಾಷೆ, ಸಂಸ್ಕೃತಿಯ ಬೆಳವಣಿಗೆಗೆ ಪ್ರತಿಯೊಬ್ಬರೂ ಕಾರ್ಯಪ್ರವೃತ್ತರಾಗಬೇಕೆಂದು ಕರೆನೀಡಿದರು.
  ತುಳು ಲೇಖಕಿ, ಕಾದಂಬರಿಕಾರೆ ರಾಜಶ್ರೀ ತಾರಾನಾಥ ರೈ ಪೆರ್ಲ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಕನರ್ಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯೆ ವಿದ್ಯಾಶ್ರೀ ಎಸ್.ಉಳ್ಳಾಲ್, ಪೆರ್ಮನ್ನೂರು ಸರಕಾರಿ ಶಾಲಾ ಶಿಕ್ಷಕಿ ವಿಜಯಲಕ್ಷ್ಮೀ, ಬಹುಮುಖ ಪ್ರತಿಭೆ ಸನ್ನಿಧಿ ಟಿ. ರೈ ಉಪಸ್ಥಿತರಿದ್ದು ಮಾತನಾಡಿದರು. ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಕಾರ್ಯದಶರ್ಿ ಅಖೀಲೇಶ್ ನಗುಮುಗಂ, ಕಾರ್ಯಕ್ರಮ ಸಂಯೋಜಕ ಗೋಪಾಲಕೃಷ್ಣ ಕುಲಾಲ್ ವಾಂತಿಚ್ಚಾಲ್ ಉಪಸ್ಥಿತರಿದ್ದರು. ಶ್ಯಾಮಲಾ ವಾಂತಿಚ್ಚಾಲ್ ಸ್ವಾಗತಿಸಿ, ಚೈತ್ರಾ ವಾಣೀನಗರ ವಂದಿಸಿದರು. ಅಕ್ಷತಾರಾಜ್ ಪೆರ್ಲ ಕಾರ್ಯಕ್ರಮ ನಿರೂಪಿಸಿದರು.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries