ಜಿಲ್ಲೆಯ ಅವಗಣನೆಗೆ ಶಾಸಕರ ಪ್ರತಿಭಟನೆ ಹಾಸ್ಯಾಸ್ಪದ-ಸುಧಾಮ ಗೋಸಾಡ
ಬದಿಯಡ್ಕ : ಜಿಲ್ಲೆಯ ಸಮಗ್ರ ಅಭಿವೃದ್ದಿಯ ಯೋಜನೆಗಳನ್ಗನು ಅನುಷ್ಠಾನಗೊಳಿಸುವಲ್ಲಿ ಎಡ ಬಲ ರಂಗಗಳು ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ. ಬಡ ಮಧ್ಯಮ ವರ್ಗದ ಜನಸಾಮಾನ್ಯರು ತಮ್ಮ ಪ್ರಾಥಮಿಕ ಆವಶ್ಯಕತೆಗಳಿಗೆ ಪಡಿಪಾಟಲು ಅನುಭವಿಸುತ್ತಿರುವಾಗ ಬದಿಯಡ್ಕ ಸಮುದಾಯ ಆರೋಗ್ಯಕೇಂದ್ರವನ್ನು ಹಿಂಬಡ್ತಿಗೊಳಿಸುವ ಖಾರಸ್ಥಾನದ ರಾಜಕೀಯ ಆಟಗಳು ಮತ್ತಷ್ಟು ಸಂಕಷ್ಟಕ್ಕೆ ತಳ್ಳಿದೆ. ತಾಲೂಕು ಆಸ್ಪತ್ರೆಯಾಗಿ ಪರಿವತರ್ಿಸಿಯೂ ಇದೀಗ ಅದನ್ನು ಬೇರೆಡೆಗೆ ಸ್ಥಳಾಂತರಿಸುವ ಆದೇಶವನ್ನು ಹೊರಡಿಸಿರುವುದನ್ನು ಹಿಂಪಡೆದು ಬದಿಯಡ್ಕದ ಜನತೆಗೆ ನ್ಯಾಯ ಒದಗಿಸಬೇಕು ಎಂದು ಬಿಜೆಪಿ ಕಾಸರಗೋಡು ಮಂಡಲ ಅಧ್ಯಕ್ಷ ಎಂ. ಸುಧಾಮ ಗೋಸಾಡ ಆಗ್ರಹಿಸಿದ್ದಾರೆ.
ಬುಧವಾರ ತಾಲೂಕು ಆಸ್ಪತ್ರೆಯಾಗಿ ಬದಲಾದ ಬದಿಯಡ್ಕ ಸಮುದಾಯ ಆರೋಗ್ಯಕೇಂದ್ರಕ್ಕೆ ಹಿಂಭಡ್ತಿ ನೀಡಿದ ಸರಕಾರದ ಸುತ್ತೋಲೆಗೆದುರಾಗಿ ಭಾರತೀಯ ಜನತಾಪಕ್ಷದ ನೇತೃತ್ವದಲ್ಲಿ ಆರೋಗ್ಯಕೇಂದ್ರದ ಮುಂಭಾಗದಲ್ಲಿ ಹಮ್ಮಿಕೊಂಡ ಪ್ರತಿಭಟನೆಯನ್ನು ಅವರು ಉದ್ಘಾಟಿಸಿ ಮಾತನಾಡಿದರು.
ಕಾಸರಗೋಡು ಜಿಲ್ಲೆಯ ನಿರಂತರ ಅವಗಣನೆ ನಡೆಯುತ್ತಿದ್ದರೂ ಮೌನವಹಿಸುತ್ತಿರುವ ಶಾಸಕರು ಹಾಗೂ ಸಂಸದರ ನೇತೃತ್ವದ ಪಕ್ಷಗಳ ನಾಯಕರು ಕ್ರೀಯಾಸಮಿತಿ ಎಂಬ ಹೆಸರಿನಲ್ಲಿ ಅನಿಧರ್ಿಷ್ಟಾವಧಿ ಪ್ರತಿಭಟನೆ ನಡೆಸುತ್ತಿರುವುದು ಹಾಸ್ಯಾಸ್ಪದವಾಗಿದೆ. ಜನರ ಕಣ್ಣಿಗೆ ಮಣ್ಣೆರಚುವ ನಾಟಕ ಇದಾಗಿದೆ. ಕಮ್ಯೂನಿಸ್ಟ್ ಪಕ್ಷವು ಅಧಿಕಾರಕ್ಕೆ ಬಂದಮೇಲೆ ಕಾಸರಗೋಡು ಜಿಲ್ಲೆಗೆ ಯಾವುದೇ ಅನುದಾನವನ್ನು ನೀಡಿಲ್ಲ. ಎಡಪಕ್ಷಗಳು ಹಾಗೂ ಮುಸ್ಲಿಂಲೀಗ್ ಒಂದೇ ನಾಟ್ಯದ ಎರಡುಮುಖಗಳಾಗಿವೆ. ಎರಡು ಪಕ್ಷಗಳು ಜನತೆಯ ಕ್ಷಮೆ ಯಾಚಿಸುವುದಲ್ಲದೆ ಶಾಸಕ ಹಾಗೂ ಸಂಸದರು ರಾಜೀನಾಮೆಯನ್ನು ನೀಡಬೇಕು ಎಂದರು.
ಕಾಸರಗೋಡು ಮಂಡಲ ಸಮಿತಿ ಸದಸ್ಯ ಎಂ. ನಾರಾಯಣ ಭಟ್ ಮೈರ್ಕಳ ಪ್ರತಿಭಟನೆಯ ನೇತೃತ್ವವನ್ನು ವಹಿಸಿ ಮಾತನಾಡಿದರು.
ಯುವಮೋಚರ್ಾ ರಾಜ್ಯ ಸಮಿತಿ ಸದಸ್ಯ ಸುನಿಲ್ ಪಿ.ಆರ್. ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡುತ್ತಾ ಜನರ ಕಣ್ಣಿಗೆ ಮಣ್ಣೆರಚುವ ಎಡಬಲರಂಗಗಳ ತಂತ್ರವನ್ನು ಬಿಜೆಪಿ ವಿರೋಧಿಸುತ್ತದೆ. ಅಧಿಕಾರವು ಕೈಯಲ್ಲಿದ್ದುಕೊಂಡು ಜನರನ್ನು ವಂಚಿಸುತ್ತಿರುವುದು ಖಂಡನೀಯ ಎಂದರು. ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರಾಮಪ್ಪ ಮಂಜೇಶ್ವರ ಮಾತನಾಡುತ್ತಾ ಎಂಡೋಪೀಡಿತ ರೋಗಿಗಳಿಗೆ ಸಹಾಯವಾಗಿದ್ದ ಈ ಆಸ್ಪತ್ರೆಗೆ ಹಿಂಭಡ್ತಿ ನೀಡಿದ ಸರಕಾರದ ನಡೆಯನ್ನು ಬಿಜೆಪಿ ವಿರೋಧಿಸುವುದಲ್ಲದೆ ಜನತೆಯೊಂದಿಗೆ ನಿರಂತರ ಹೋರಾಟವನ್ನು ನಡೆಸಲಿದೆ ಎಂದರು.
ನೇತಾರರಾದ ಅವಿನಾಶ್ ರೈ, ರಾಮ ಬೆಳ್ಳೂರು, ಕೃಷ್ಣಮಣಿಯಾಣಿ ಮೊಳೆಯಾರು, ಹರೀಶ್ ಗೋಸಾಡ, ಈಶ್ವರ ಮಾಸ್ಟರ್ ಪೆರಡಾಲ, ಮಹಿಳಾ ಮೋಛರ್ಾ ಅಧ್ಯಕ್ಷೆ ರಜನಿ ಸಂದೀಪ್, ಜಯಂತಿ, ರಾಜೇಶ್ವರಿ, ಪ್ರೇಮ ಕುಮಾರಿ, ಪುಷ್ಪ ಭಾಸ್ಕರ್, ಲಕ್ಷ್ಮೀನಾರಾಯಣ ಪೈ, ವಿಶ್ವನಾಥ ಪ್ರಭು, ಭಾಸ್ಕರ ಬದಿಯಡ್ಕ, ದಾಮೋದರ ಚೆಟ್ಟಿಯಾರ್ ಬದಿಯಡ್ಕ, ಗಣೇಶ ಕೃಷ್ಣ ನೀಚರ್ಾಲು, ರಮೇಶ್ ಆಳ್ವ ಕಡಾರು ಮೊದಲಾದವರು ಪಾಲ್ಗೊಂಡರು. ಬಾಲಕೃಷ್ಣ ಶೆಟ್ಟಿ ಕಡಾರು ಸ್ವಾಗತಿಸಿ, ಡಿ.ಶಂಕರ ಧನ್ಯವಾದವನ್ನಿತ್ತರು. ಸರಕಾರವು ಬದಿಯಡ್ಕ ಆರೋಗ್ಯಕೇಂದ್ರವನ್ನು ತಾಲೂಕು ಆಸ್ಪತ್ರೆಯಾಗಿ ಮುಂದುವರಿಸಲು ಅಗತ್ಯಕ್ರಮಗಳನ್ನು ಕೈಗೊಳ್ಳಬೇಕೆಂಬ ಮನವಿಯನ್ನು ವೈದ್ಯಾಧಿಕಾರಿ ಡಾ. ಸತ್ಯಶಂಕರ ಭಟ್ ಅವರಿಗೆ ನೀಡಲಾಯಿತು.