ಕಾಂಚನ ಗಂಗಾ ಕಲಾಗ್ರಾಮದಲ್ಲಿ ಕವಿ ಕಾವ್ಯ ಚಿತ್ತಾರ
ಮುಳ್ಳೇರಿಯ: ಅಂತರಾಷ್ಟ್ರೀಯ ಮಟ್ಟದ ಖ್ಯಾತ ಚಿತ್ರ ಕಲಾವಿದ ಪಿ.ಎಸ್.ಪುಣಿಂಚಿತ್ತಾಯರ ಕಾರಡ್ಕದ ಕಾಂಚನ ಗಂಗಾ ಕಲಾ ಗ್ರಾಮದಲ್ಲಿ ಯುವ ಬರಹಗಾರರ ವೇದಿಕೆ ಕಾಸರಗೋಡು ಇದರ ಸದಸ್ಯರ ಸಹಭಾಗಿತ್ವದಲ್ಲಿ ಕಲಾವಿದ ಪುಣಿಂಚಿತ್ತಾಯರ ವೈವಾಹಿಕ ಬದುಕಿನ ಸುವರ್ಣ ಮಹೋತ್ಸವದ ಅಂಗವಾಗಿ ನಡೆದ ಅಭಿನಂದನಾ ಸಮಾರಂಭ ಕವಿಗಳ ಕಾವ್ಯ ವಾಚನ ಹಾಗೂ ಪ್ರಾಕೃತಿಕ ವೈಭವದ ಜಲವರ್ಣ ಚಿತ್ರ ರಚನೆಯ ವೇದಿಕೆಯಾಗಿ ಇತ್ತೀಚೆಗೆ ಸಂಪನ್ನಗೊಂಡಿತು.
ಯುವ ಬರಹಗಾರರ ವೇದಿಕೆಯ ಜಿಲ್ಲಾಧ್ಯಕ್ಷೆ ಪ್ರಭಾವತಿ ಕೆದಿಲಾಯ ಪುಂಡೂರು ಅಧ್ಯಕ್ಷತೆ ವಹಿಸಿದ್ದರು. ಪಿ.ಎಸ್.ಪುಣಿಂಚಿತ್ತಾಯ-ಭಾರತಿ ಪುಣಿಂಚಿತ್ತಾಯ ದಂಪತಿಗಳನ್ನು ಅಭಿನಂದಿಸಲಾಯಿತು.
ಹಿರಿಯ ಪತ್ರಕರ್ತ,ಕವಿ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಅಭಿನಂದನಾ ಭಾಷಣಗೈದರು.ಕೇರಳ ಪ್ರಾಂತ್ಯ ಅಧ್ಯಾಪಕರ ಸಂಘದ ಕುಂಬಳೆ ಉಪಜಿಲ್ಲಾ ಅಧ್ಯಕ್ಷ ಶ್ರೀಧರ ಮಾಸ್ತರ್ ಕುಕ್ಕಿಲ,ಧಾಮರ್ಿಕ ಮುಂದಾಳು ನಾರಾಯಣ ಆಳ್ವ ,ಮಾಧವ ಚೆಟ್ಟಿಯಾರ್ ಪೆರ್ಲ,ಪ್ರಗತಿಪರ ಕೃಷಿಕ ನಾರಾಯಣ ಪಾಟಾಳಿ ನಡುಬೈಲು, ಕಲಾವಿದ ಪ್ರವೀಣ್ ಪುಣಿಂಚಿತ್ತಾಯ,ನಾರಾಯಣ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ದಯಾನಂದ ರೈ ಕಳ್ವಾಜೆ ಚಿತ್ರಕಲಾವಿದ ಪುಣಿಂಚಿತ್ತಾಯರ ಬಗ್ಗೆ ರಚಿಸಿದ ಕವನ ಹಾಗೂ ಜ್ಯೋತ್ಸಾ ಕಡಂದೇಲು,ಚೇತನಾ ಕುಂಬಳೆ,ಚಿತ್ತರಂಜನ್ ಕಡಂದೇಲು,ರಾಧಾಕೃಷ್ಣ ಕೆ.ಉಳಿಯತ್ತಡ್ಕ, ಪ್ರಭಾವತಿ ಕೆದಿಲಾಯ ಸ್ವರಚಿತ ಕವನ ವಾಚನಗೈದರು.ಪಿ.ಎಸ್.ಪುಣಿಂಚಿತ್ತಾಯರು ಸ್ಥಳದಲ್ಲಿಯೇ ಪ್ರಕೃತಿ ರಮಣೀಯತೆಯ ಜಲವರ್ಣ ಚಿತ್ರವನ್ನು ರಚಿಸಿ ನೆರೆದವರ ಮನ ಮುದಗೊಳಿಸಿದರು. ಯುವ ಬರಹಗಾರರ ವೇದಿಕೆಯ ಕಾರ್ಯಧ್ಯಕ್ಷ ಜಯ ಮಣಿಯಂಪಾರೆ ಕಾರ್ಯಕ್ರಮ ನಿರೂಪಿಸಿದರು.