HEALTH TIPS

No title

            ವಿವೇಕಾನಂದ ಶಿಶು ಮಂದಿರದಲ್ಲಿ ರಾಮಾಯಣ ಮಾಸಾಚರಣೆ ಸಂಪನ್ನ
           ಶ್ರೇಷ್ಠ ಸಮಾಜ ನಿಮರ್ಾಣಕ್ಕೆ ಮಹಾ ಗ್ರಂಥಗಳ ಅಧ್ಯಯನ, ಅನುಸರಣೆ ಅನಿವಾರ್ಯ: ವಾಸುದೇವ ಭಟ್
      ಪೆರ್ಲ:ನಾಲಂದ ಮಹಾವಿದ್ಯಾಲಯದ ವಿವೇಕಾನಂದ ಶಿಶುಮಂದಿರದಲ್ಲಿ ರಾಮಾಯಣ ಮಾಸಾಚರಣೆ ಅಂಗವಾಗಿ ನಡೆಸಿ ಕೊಡಲಾದ ರಾಮಾಯಣ ಪಾರಾಯಣ ಸಂಪನ್ನಗೊಂಡಿತು.
     ಸಮಾರೋಪ ಕಾರ್ಯಕ್ರಮದಲ್ಲಿ ನಾಲಂದ ಮಹಾ ವಿದ್ಯಾಲಯದ ಆಡಳಿತಾಧಿಕಾರಿ ಶಿವಕುಮಾರ್ ಕೆ. ಅಧ್ಯಕ್ಷತೆ ವಹಿಸಿದರು. ಮುಖ್ಯ ಅತಿಥಿ ಸ್ವರ್ಗ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ವಾಸುದೇವ ಭಟ್ ಟಿ. ರಾಮಾಯಣ ಮಾಸಾಚರಣೆಯ ಮಹತ್ವದ ಕುರಿತು ತಿಳಿಸಿ, ಸಮಾಜದಲ್ಲಿ ಪರಸ್ಪರ ಸೌಹಾರ್ದತೆಯ  ಬದಲು ಸಂಘರ್ಷ ಏರ್ಪಡುತ್ತಿದೆ.ಆಸ್ತಿ, ಅಂತಸ್ತು ವಿಚಾರಗಳಲ್ಲಿ ಸಹೋದರತ್ವ, ಸಂಭಂಧಗಳಲ್ಲಿ ವೈ ಮನಸ್ಸು, ಬಿರುಕು ಮೂಡುತ್ತಿದೆ. ಶ್ರೇಷ್ಠ ಸಮಾಜ ನಿಮರ್ಾಣಕ್ಕೆ  ರಾಮಾಯಣ ಹಾಗೂ ಮಹಾಭಾರತದಂತಹ ಮಹಾ ಕೃತಿಗಳ ಅಧ್ಯಯನ ನಡೆಸಿ ಜೀವನದಲ್ಲಿ  ಅನುಸರಿಸುವ ಅಗತ್ಯವಿದೆ. ರಾಮಾಯಣದಲ್ಲಿ ಬರುವ ಕಥಾ ಪಾತ್ರಗಳು, ಭರತ, ಲಕ್ಷ್ಮಣರ ಸಹೋದರ ಪ್ರೇಮ, ದಶರಥ, ಕೈಕೇಯಿಯರ ಅಂಧ ಪ್ರೇಮ, ಸೀತಾ ಮಾತೆಯ ಪತಿವೃತಾ ಗುಣ, ವಿಭೀಷಣನ ನ್ಯಾಯ ನಿಷ್ಟೆ,  ಹನುಮಂತನ ಸ್ವಾಮಿ ನಿಷ್ಟೆ   ಹೀಗೆ ರಾಮಾಯಣದ ಪ್ರತಿಯೊಂದು ಕಥಾ ಪಾತ್ರಗಳೂ ಒಳ್ಳೆಯ  ಅಂಶಗಳನ್ನು ಸಾರುತ್ತವೆ   ಎಂದು ತಿಳಿಸಿದರು.
   ರಾಮಾಯಣ ಮಾಸಾಚರಣೆ ಸಲುವಾಗಿ ಪಾರಾಯಣ ನಡೆಸಿಕೊಟ್ಟ  ಡಾ.ರಾಮಚಂದ್ರ ಭಟ್ ಬೆಂಗ್ರೋಡಿ,  ಕಾತರ್ಿಕ್ ಶಾಸ್ತ್ರಿ ಖಂಡೇರಿ ಅವರಿಗೆ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು.
   ಜಯಶ್ರೀ ಪೆರ್ಲ ಪ್ರಾಥರ್ಿಸಿದರು. ಶ್ರೀಹರಿಭರಣೇಕರ್ ಸ್ವಾಗತಿಸಿ, ನಳಿನಿ ಸೈಪಂಗಲ್ಲು ವಂದಿಸಿದರು.ಶಿಶುಮಂದಿರದ ಮಾತಾಜಿ ಲಾವಣ್ಯ, ಸಹಾಯಕಿ ಹೇಮಲತ, ಪುಟಾಣಿಗಳು, ಪೋಷಕರು, ಸಮಿತಿ ಪದಾಧಿಕಾರಿಗಳು, ಊರವರು ಉಪಸ್ಥಿತರಿದ್ದರು.

       

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries