ಅಟಲ್ ಜೀ ಅವರದು ಮಾದರೀ ವ್ಯಕ್ತಿತ್ವ - ರೂಪವಾಣಿ ಆರ್.ಭಟ್.
ಪೆರ್ಲ:ಎಣ್ಮಕಜೆ ಗ್ರಾ.ಪಂ. ಬಿಜೆಪಿ ಸಮಿತಿ ವತಿಯಿಂದ ಶನಿವಾರ ಮಾಜಿ ಪ್ರಧಾನಿ ಅಪ್ರತಿಮ ವಾಗ್ಮಿ, ಅಜಾತ ಶತ್ರು, ಧೀಮಂತ ನಾಯಕ, ಸಜ್ಜನ ರಾಜಕಾರಣಿ, ಕವಿ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿಯವರ ನಿಧನಕ್ಕೆ ಸಂತಾಪ ಸೂಚಕ ಸಭೆ ನಡೆಯಿತು.
ವಾಜಪೇಯಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವುದರ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು. ನಿಕಟಪೂರ್ವ ಪಂಚಾಯಿತಿ ಅಧ್ಯಕ್ಷೆ ರೂಪವಾಣಿ ಆರ್.ಭಟ್ ವಾಜಪೇಯಿ ಅವರನ್ನು ಸ್ಮರಿಸಿ ಪಕ್ಷಕ್ಕಿಂತಲೂ ಮಿಗಿಲಾದ ದೇಶಪ್ರೇಮ ಅಟಲ್ ಜೀ ಅವರದ್ದಾಗಿದ್ದು, ರಾಜಕೀಯ ವಿರೋಧಿಗಳೂ ಒಪ್ಪುವ, ಕಾಯಾ ವಾಚಾ ಮನಸಾ ಪರಿಶುದ್ಧ ವ್ಯಕ್ತಿತ್ವವನ್ನು ಹೊಂದಿದ್ದರು. ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಅವರು ಸಾಮಾನ್ಯ ಕಾರ್ಯಕರ್ತರಾಗಿ ಸೇವೆಯಲ್ಲಿ ತೊಡಗಿ ಪಕ್ಷವನ್ನು ರಾಷ್ಟ್ರ ಮಟ್ಟಕ್ಕೆ ಏರುವಂತೆ ಕಟ್ಟಿ ಬೆಳೆಸಲು ಕಾರಣೀಕರ್ತರಾಗಿದ್ದರು. ರಾಜಕೀಯ ಅಸ್ಥಿರತೆಯ ನಡುವೆಯೂ ವಿಪ್ಲವಕಾರಿ ಆಥರ್ಿಕ ನೀತಿಯಿಂದ ದೇಶವನ್ನು ಉನ್ನತಿಗೆ ಏರುವಂತೆ ಮಾಡಿದ್ದರು. ರಸ್ತೆ ನಿಮರ್ಾಣ, ದೂರವಾಣಿ ಸೇವೆಗಳನ್ನು ಮುಖ್ಯವಾಗಿರಿಸಿ ಅವರು ನಡೆಸಿದ ಆಥರ್ಿಕ, ಸಾಮಾಜಿಕ ಕ್ರಾಂತಿ ದೇಶವನ್ನು ಉನ್ನತಿಯ ಕಡೆಗೆ ಸಾಗುವಂತೆ ಮಾಡಿತು.ಪೋಖ್ರಾನ್ ಅಣು ಪರೀಕ್ಷೆಯ ಮೂಲಕ ರಕ್ಷಣಾ ಕ್ಷೇತ್ರದಲ್ಲೂ ವಿಶ್ವದೆದುರು ಸೆಟೆದುನಿಲ್ಲುವಂತೆ ಸಶಕ್ತಗೊಳಿಸಿದರು.ಸ್ವಹಿತವನ್ನು ನೋಡದೆ ಸರ್ವಸ್ವವನ್ನೂ ದೇಶದ ಹಿತಕ್ಕಾಗಿ ಅಪರ್ಿಸಿದ ಅಟಲ್ ಜೀ ಕೇವಲ ಸ್ವಪಕ್ಷೀಯರು ಮಾತ್ರವಲ್ಲದೆ ವಿಪಕ್ಷ ನೇತಾರರೂ ಗೌರವಿಸುವ ವ್ಯಕ್ತಿತ್ವವನ್ನು ಹೊಂದಿದ್ದ ಅವರು ರಾಜಕೀಯ ನೇತಾರರಿಗೆಲ್ಲಾ ಮಾದರಿ ಎಂದರು.
ಪಂಚಾಯಿತಿ ಸಮಿತಿ ಕಾರ್ಯದಶರ್ಿ ಪದ್ಮಶೇಖರ ನೇರೋಳು ಪ್ರಾಸ್ತಾವಿಕ ಮಾತುಗಳನ್ನಾಡಿದರು.ಪ್ರಾಕೃತಿಕ ದುರಂತಕ್ಕೀಡಾಗಿ ನಿರ್ಗತಿಕರಾದ ಸಂತ್ರಸ್ತ ಕುಟುಂಬಗಳಿಗೆ ಸಹಾಯ ಒದಗಿಸಲು ಪಂಚಾಯಿತಿ ಸಮಿತಿ ವತಿಯಿಂದ ವಸ್ತು, ಧನರೂಪ ಸಂಗ್ರಹಕ್ಕೆ ವಿನಯ ಕೃಷ್ಣ ಖಂಡಿಗೆ ಚಾಲನೆ ನೀಡಿದರು.
ಹಿರಿಯ ಕಾರ್ಯಕರ್ತ ಹರೀಶ್ಚಂದ್ರ ಆಚಾರ್ಯ ನಲ್ಕ, ನಾರಾಯಣ ನಾಯ್ಕ್ ಅಡ್ಕಸ್ಥಳ, ಬಟ್ಟು ಶೆಟ್ಟಿ, ಯುವ ಮೋಚರ್ಾ ನೇತಾರರಾದ ಸುಮಿತ್ ರಾಜ್, ಶಶಿಕಾಂತ್ ಕಲ್ಯಾಟೆ, ಜನ ಪ್ರತಿನಿಧಿಗಳಾದ ಸವಿತಾ ಬಾಳಿಕೆ, ಉದಯ ಚೆಟ್ಟಿಯಾರ್ ಬಜಕೂಡ್ಲು,ಪುಟ್ಟಪ್ಪ ಖಂಡಿಗೆ, ಮಲ್ಲಿಕಾ ಜೆ.ರೈ, ಸತೀಶ್ ಕುಲಾಲ್, ಮಮತಾ ಯು ರೈ, ಶಶಿಕಲಾ ವೈ, ಮಹಿಳಾ ಮೋರ್ಚ, ಪರಿವಾರ ಸಂಘಟನೆ, ಬಿ ಎಂ ಎಸ್ ಪದಾಧಿಕಾರಿಗಳು, ಉಪಸ್ಥಿತರಿದ್ದರು.