HEALTH TIPS

No title

              ಸಂತಡ್ಕದಲ್ಲಿ ವರಮಹಾಲಕ್ಷ್ಮೀ ಪೂಜೆ-ಕಣ್ಣು ಮುಚ್ಚಿ ನೆನೆದರೂ ಒಲಿಯುವ ಧರ್ಮವೇ ಹಿಂದೂ ಧರ್ಮ- ವಿದ್ಯಾಶ್ರೀ.ಎಸ್
   ಮಂಜೇಶ್ವರ: ವಿಶ್ವ ಹಿಂದೂ ಪರಿಷತ್ ಮಾತೃಮಂಡಳಿ ಉಪಖಂಡ ಸಮಿತಿ ಸಂತಡ್ಕ ಇದರ ನೇತೃತ್ವದಲ್ಲಿ 15ನೇ ವರ್ಷದ ಶ್ರೀವರಮಹಾಲಕ್ಷ್ಮಿ ಪೂಜೆಯು ಅರಸು ಸಂಕಲ ದೈವಕ್ಷೇತ್ರ ಸಂತಡ್ಕದಲ್ಲಿ ಶುಕ್ರವಾರ ಜರಗಿತು.
  ಕಾರ್ಯಕ್ರಮದ ಅಂಗವಾಗಿ ನಡೆದ ಧಾಮರ್ಿಕ ಸಭೆಯಲ್ಲಿ ಶ್ರೀಅರಸು ಸಂಕಲ ದೈವಕ್ಷೇತ್ರ ಸಂತಡ್ಕ ಇದರ ಅಧ್ಯಕ್ಷ ಡಾ.ಎಂ.ಶ್ರೀಧರ ಭಟ್ ಅಧ್ಯಕ್ಷತೆ ವಹಿಸಿದ್ದರು. ಧಾಮರ್ಿಕ ಭಾಷಣ ಮಾಡಿದ ಕನರ್ಾಟಕ ತುಳು ಅಕಾಡೆಮಿ ಸದಸ್ಯೆ ವಿದ್ಯಾಶ್ರೀ.ಎಸ್ ಮಾತನಾಡಿ ಧರ್ಮ ಮತ್ತು ಸಂಸ್ಕೃತಿಗಳು ಸುದೃಢ ಸಮಾಜವನ್ನು ಬೆಳೆಸಿದೆ. ಹಿಂದು ಧರ್ಮವು ವಿಶಾಲ ತಳಹದಿಯಲ್ಲಿ ಬೆಳೆದು ಬಂದುದಾಗಿದ್ದು,  ಕಣ್ಣು ಮುಚ್ಚಿ ನೆನೆದರೂ ಒಲಿಯುವ ಧರ್ಮವೇ ಹಿಂದೂ ಧರ್ಮವಾಗಿದೆ ಎಂದು ತಿಳಿಸಿದರು. ಎಲ್ಲಾ ಧರ್ಮಗಳು ಪ್ರಾರಂಭವಾದ ಹಿನ್ನೆಲೆ ಇದೆ. ಆದರೆ ಹಿಂದೂ ಧರ್ಮ ಪ್ರಾರಂಭಗೊಂಡ ವರ್ಷ ಇತಿಹಾಸ ಯಾರಿಗೂ ತಿಳಿದಿಲ್ಲ. ಮಡದಿ, ಮನೆ ,ಮಕ್ಕಳು ,ಆಸ್ತಿ ಐಶ್ವರ್ಯ ಎಲ್ಲವೂ ದೇವರದು. ಆದರೆ ದೇವರು ಮಾತ್ರ ತನ್ನವನು  ಎಂದು ತಿಳಿದ ಮನುಷ್ಯನನ್ನು ದೇವರು ಯಾವಾಗಲೂ ಎತ್ತಿ ಹಿಡಿಯುವನು ಎಂದರು. ಹಣ ಆಸ್ತಿ ಒಡವೆ ಕೇಳಿದರೆ ಲಕ್ಷ್ಮಿ ಹೊಸಿಲು ದಾಟುವಳು. ಪ್ರೀತಿ,ಶಾಂತಿ ನೆಮ್ಮದಿ ಬೇಡಿದರೆ ಲಕ್ಷ್ಮಿ ಸ್ಥಿರವಾಗಿ ನಮ್ಮ ಮನೆಯಲ್ಲಿಯೇ ನೆಲೆಸುವಳು ಎಂದರು.
   ವೇದಿಕೆಯಲ್ಲಿ  ಆಮರ್ಿ ಕಮಾಂಡರ್ ಸನೀಶ್ ಹನುಮಾನ್ ನಗರ ಉಪ್ಪಳ ಮತ್ತು ಹಿರಿಯ ನಾಟಿ ವೈದ್ಯೆ ಚೋಮು ಬೆಳ್ಚಾಡ್ತಿ ಮಜಿಬೈಲು ಇವರನ್ನು ಸನ್ಮಾನಿಸಲಾಯಿತು. ಮೀಂಜ ಗ್ರಾ.ಪಂ. ಸದಸ್ಯರುಗಳಾದ ಚಂದ್ರಶೇಖರ.ಕೋಡಿ ಹಾಗೂ ಸುಂದರಿ ಆರ್.ಶೆಟ್ಟಿ ಉಪಸ್ಥಿತರಿದ್ದು ಶುಭ ಹಾರೈಸಿದರು.  ಕಮಲಾಕ್ಷಿ ಸಂತಡ್ಕ ಉಪಸ್ಥಿತರಿದ್ದರು. ಆಶಾಲತಾ ಬಿ.ಎಮ್ ಸ್ವಾಗತಿಸಿ, ಪೂಣರ್ಿಮಾ ರಾಮಕೃಷ್ಣ ವಂದಿಸಿದರು.ಅರವಿಂದಾಕ್ಷ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು. ವೇದಮೂತರ್ಿ ಕುರಿಯ ರಾಮಮೂತರ್ಿ ಭಟ್ ರವರ ಪೌರೋಹಿತ್ಯದಲ್ಲಿ ಶ್ರೀ ವರಮಹಾಲಕ್ಷ್ಮೀ ಪೂಜೆ ನಡೆಯಿತು. ಬಳಿಕ ಅನ್ನಸಂತರ್ಪಣೆ ಜರಗಿತು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries