ಅಟಲ್ : ಸರ್ವಪಕ್ಷ ಶ್ರದ್ದಾಂಜಲಿನ ಸಭೆ
ಬದಿಯಡ್ಕ: ಮಾಜಿ ಪ್ರಧಾನಿ ಭಾರತರತ್ನ ಅಟಲ್ ಬಿಹಾರಿ ವಾಜಪೇಯಿಯವರಿಗೆ ಸರ್ವಪಕ್ಷ ಶ್ರಧ್ಧಾಂಜಲಿ ಸಭೆಯು ಬುಧವಾರ ಮಾರ್ಪನಡ್ಕದಲ್ಲಿ ನಡೆಯಿತು. ಬಿಜೆಪಿ ಕುಂಬ್ಡಾಜೆ ಪಂಚಾಯತು ಸಮಿತಿ ಅಧ್ಯಕ್ಷರಾದ ಬಿ. ರಾಜೇಶ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಬಿಜೆಪಿ ಕಾಸರಗೋಡು ಮಂಡಲಾಧ್ಯಕ್ಷರಾದ ಸುಧಾಮ ಗೋಸಾಡರವರು ಪ್ರಧಾನ ಭಾಷಣ ಮಾಡಿದರು. ಪಕ್ಷ ಜಾತಿ, ಭೇದ ಮರೆತು ಅಟಲ್ಜೀಯವರ ಅಧಿಕಾರವನ್ನು ಯುವಜನತೆ ಮೈಗೂಡಿಸಿದ್ದಲ್ಲಿ ಭಾರತ ವಿಶ್ವ ಗುರುವಿನ ಸ್ಥಾನಕ್ಕೆ ತಲುಪುವುದರಲ್ಲಿ ಸಂಶಯವೇ ಇಲ್ಲವೆಂದು ಸುಧಾಮ ಗೋಸಾಡರವರು ಹೇಳಿದರು.
ಕುಂಬ್ಡಾಜೆ ಗ್ರಾಮ ಪಂಚಾಯತಿನ ಉಪಾಧ್ಯಕ್ಷರು, ಕಾಂಗ್ರೇಸ್ ನೇತಾರರೂ ಆದ ಆನಂದ ಕೆ. ಮವ್ವಾರು ಮಾತನಾಡಿಡಿ ಆಟಲ್ಜೀಯವರು ಅಜಾತ ಶತ್ರು, ವಿರೋಧ ಪಕ್ಷದವರೂ ಅವರ ಆದರ್ಶವನ್ನು ಒಪ್ಪುವಂತಾಗಿದೆ. ರಾಜೀವ ಗಾಂಧೀಯವರು ಪ್ರಧಾನಿಯಾಗಿದ್ದಾಗ ವಿದೇಶ ಪ್ರಯಾಣಕ್ಕೆ ಅಟಲ್ಜೀಯವರನ್ನು ಕಳುಹಿಸುತ್ತಿದ್ದರು. ಅಷ್ಟೂ ವಿಶ್ವಸನೀಯ ವ್ಯಕ್ತಿಯಾಗಿ ಅಟಲ್ಜೀ ಮೆರೆದವರು ಎಂದು ಅವರು ಹೇಳಿದರು. ಮುಸ್ಲಿಂ ಲೀಗ್ ಪಂಚಾಯತು ಸಮಿತಿ ಅಧ್ಯಕ್ಷರಾದ ಅಬೂಬಕ್ಕರ್ ಮಾರ್ಪನಡ್ಕ ಮಾತಾಡಿ ಅಟಲ್ಜೀಯವರ ನಿಧನ ಬಿಜೆಪಿಗೆ ಮಾತ್ರವಲ್ಲ ದೇಶಕ್ಕೇ ತುಂಬಲಾರದ ನಷ್ಟವಾಗಿದೆಯೆಂದು ನುಡಿದರು. ಸಿ.ಪಿ.ಐ.ಎಂ. ನ ಕುಂಬ್ಡಾಜೆ ಲೋಕಲ್ ಸೆಕ್ರಟರಿ ನಾರಾಯಣ ನಂಬ್ಯಾರ್ ಮಾತಾಡಿ ಅಟಲ್ಜೀಯವರ ದೂರೃಷ್ಟಿ, ಚಿಂತನೆ, ರಾಜಕೀಯ ಆದರ್ಶ ಜನಮೆಚ್ಚುಗೆಗಳಿಸುವಂತಾಗಿದೆಯೆಂದೂ ನುಡಿದರು. ಸಿ.ಪಿ.ಐ.ಯ ಹಿರಿಯ ನೇತಾರರಾದ ಪಿ.ಎನ್.ಆರ್ ಅಮ್ಮಣ್ಣಾಯರವರು ಮಾತಾಡಿ ಮಾಹಿತಿ ಹಕ್ಕು ನಿಯಮದಂತಹ ಜನರಿಗೆ ನೇರವಾಗಿ ಎಲ್ಲಾ ವಿಚಾರಗಳನ್ನು ತಿಳಿಯುವ ನಿಯಮವನ್ನು ತಂದವರು ಅಟಲ್ಜೀ ಅವರನ್ನು ಹತ್ತಿರದಿಂದ ಮಾತಾಡಿಸುವ ಭಾಗ್ಯ ನನಗೊದಗಿ ಬಂದಿದೆಯೆಂದು ನುಡಿದರು. ಶತ್ರು ರಾಜ್ಯವಾದ ಪಾಕಿಸ್ಥಾನದೊಂದಿಗೆ ಬಾಂಧವ್ಯವನ್ನು ರೂಪಿಸುವ ಉದ್ದೇಶದಿಂದ ಪಾಕಿಸ್ಥಾನಕ್ಕೆ ಬಸ್ ಸಂಚಾರವನ್ನು ಪ್ರಾರಂಭಿಸಿ ಬಸ್ಸ್ನಲ್ಲಿ ತಾನೇ ಸಂಚರಿಸಿದ ಅಪ್ರತಿಮ ವ್ಯಕ್ತಿ ಅಟಲ್ ಬಿಹಾರಿ ವಾಜಪೇಯಿಯೆಂದು ಸಾಮಾಜಿಕ, ಧಾಮರ್ಿಕ ಮುಂದಾಳು ಲತೀಫ್ ಹಾಜಿ ಮಾರ್ಪನಡ್ಕರವರು ಹೇಳಿದರು.
ಕಾರ್ಯಕ್ರಮದಲ್ಲಿ ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಮಾರ್ಪನಡ್ಕ ಘಟಕದ ಪ್ರಧಾನ ಕಾರ್ಯದಶರ್ಿ ಶ್ರೀಧರ ಪದ್ಮಾರ್, ಕಾಂಗ್ರೇಸಿನ ಕುಂಬ್ಡಾಜೆ ಮಂಡಲಾಧ್ಯಕ್ಷ ಕೇಶವ ಬೆಳ್ಳಿಗೆ, ಬಿಜೆಪಿ ಯುವಮೋಛರ್ಾ ಕಾಸರಗೋಡು ಜಿಲ್ಲಾ ಕೋಶಾಧಿಕಾರಿ ಎಂ. ಪ್ರಭಾಕರ ರೈ, ಬಿಜೆಪಿ ಮಂಡಲಾ ಪ್ರಧಾನ ಕಾರ್ಯದಶರ್ಿ ಹರೀಶ್ ನಾರಂಪಾಡಿ, ಮಾರ್ಪನಡ್ಕ ಹಿರಿಯ ವ್ಯಾಪಾರಿ ಗೋಪಾಲಕೃಷ್ಣ ಸಿ.ಎಚ್, ಬಿಜೆಪಿ ಕುಂಬ್ಡಾಜೆ ಪಂಚಾಯತು ಪ್ರಧಾನ ಕಾರ್ಯದಶರ್ಿ ರವಿಂದ್ರ ರೈ ಗೋಸಾಡ, ಸಂತೋಷ್ ರೈ ಪುತ್ರಕಳ, ವಾಸುದೇವ ಭಟ್, ಸದಾಶಿವ ರೈ ಗೋಸಾಡ, ಶಶಿಧರ ತೆಕ್ಕೆಮೂಲೆ, ಜಯಪ್ರಕಾಶ್ ಶೆಟ್ಟಿ ಮುಂಡ್ರಕೊಳಂಬೆ, ಶಶಿಧರ ಪಡಿಕ್ಕಲ್, ಜನಪ್ರತಿನಿಧಿಗಳಾದ ಶೈಲಜಾ ಭಟ್, ಯಶೋದಾ ಎನ್, ನಳಿನಿ, ಶಾಂತಾ ಎಸ್.ಭಟ್ ಮೊದಲಾದವರು ಉಪಸ್ಥಿತರಿದ್ದು ಮಾತನಾಡಿದರು. ರವೀಂದ್ರ ರೈ ಗೋಸಾಡ ಸ್ವಾಗತಿಸಿ, ಸಂತೋಷ್ ರೈ ಪುತ್ರಕಳ ವಂದಿಸಿದರು.