ಜಿಲ್ಲೆಯ ಗಡಿಭಾಗದಲ್ಲಿ ಹೆಚ್ಚಿದ ಕಾಡಾನೆಗಳ ಹಾವಳಿ
ಕೃಷಿ ಭೂಮಿಗೂ ಕಾಡಾನೆಗಳು ಲಗ್ಗೆ ಇಡುವ ಭೀತಿ
ಬದಿಯಡ್ಕ: ಕನರ್ಾಟಕ ಕೇರಳ ರಾಜ್ಯ ಗಡಿಭಾಗವಾದ ಮುಳ್ಳೇರಿಯಾ, ಅಡೂರು, ಪಾಂಡಿ, ಬಂದಡ್ಕ ಪ್ರದೇಶಗಳಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗುವ ಸಾಧ್ಯತೆಗಳು ದಟ್ಟವಾಗಿದೆ. ಸಮೀಪದ ಕೊಡಗು ಜಿಲ್ಲೆಯಲ್ಲಿ ಮಳೆ ಪರಿಣಾಮ ನಾಶ ನಷ್ಟ ಸಂಭವಿಸಿದ ಹಿನ್ನೆಲೆಯಲ್ಲಿ ಗಡಿಭಾಗದ ಅರಣ್ಯ ಪ್ರದೇಶದ ಸಮೀಪದಲ್ಲಿರುವ ಕೃಷಿ ಭೂಮಿಗೆ ಕಾಡಾನೆ ಹಿಂಡು ಲಗ್ಗೆ ಇಡಲಿವೆ ಎಂಬ ಆತಂಕ ಹೆಚ್ಚಿದೆ. ಕನರ್ಾಟಕದ ರಕ್ಷಿತಾರಣ್ಯಗಳಿಂದ ಕಾಸರಗೋಡಿನ ಗಡಿಭಾಗದ ಕೃಷಿ ಭೂಮಿಗೆ ಆನೆ ಹಿಂಡು ಲಗ್ಗೆ ಇಡುವ ಸಾಧ್ಯತೆಗಳು ಹೆಚ್ಚಿವೆ ಎಂಬ ಅಂಶವನ್ನು ಅಧಿಕಾರಿಗಳು ತಿಳಿಸಿದ್ದಾರೆ.
ಗಡಿಭಾಗದ ಸಮೀಪವತರ್ಿ ಪ್ರದೇಶಗಳಲ್ಲಿ ಕಾಡಾನೆಗಳ ಹಿಂಡು ಬೀಡುಬಿಟ್ಟಿರುವ ಬಗ್ಗೆ ನಾಗರಿಕರು ಅರಣ್ಯ ಇಲಾಖೆಯ ಗಮನಕ್ಕೆ ತಂದಿದ್ದಾರೆ. ಅರಣ್ಯ ಪ್ರದೇಶದ ಸುತ್ತ ಸೂಕ್ತ ರಕ್ಷಣಾ ವ್ಯವಸ್ಥೆ ಇದ್ದರೂ, ಅಡೂರು ಭಾಗದ ಕೃಷಿ ತೋಟಕ್ಕೆ ಆನೆಗಳು ನುಗ್ಗಿ ಕೃಷಿ ನಾಶಕ್ಕೆ ನಾಂದಿ ಹಾಡಿವೆ. ಇತ್ತೀಚೆಗೆ ನಾಲ್ಕು ಆನೆಗಳಿರುವ ಹಿಂಡು ಪುಲಿಪರಂಬು ಪ್ರದೇಶದ ಹೊಳೆಯಲ್ಲಿ ನೀರಾಟದಲ್ಲಿ ತೊಡಗಿದ್ದವು ಎಂದು ಪ್ರತ್ಯಕ್ಷದಶರ್ಿಗಳು ತಿಳಿಸಿದ್ದಾರೆ. ಅರಣ್ಯ ಪ್ರದೇಶದ ಸುತ್ತ ಹಾಕಿರುವ ಸೌರಬೇಲಿಯನ್ನು ಬೇಧಿಸಿ, ಆನೆ ಹಿಂಡು ನಾಡಿಗೆ ತಲುಪಿದೆ ಎನ್ನಲಾಗಿದೆ. ಮಳೆಗಾಲದ ವೇಳೆ ರಕ್ಷಣಾ ಬೇಲಿಯಲ್ಲಿ ಸೌರ ವಿದ್ಯುತ್ ಹರಿವು ಕಡಿಮೆಯಾದ ಕಾರಣ ಬೇಲಿಯನ್ನು ಮುರಿದು ನಾಡಿಗೆ ಪ್ರವೇಶಿಸುವುದು ಕಾಡಾನೆಗಳಿಗೆ ಸುಲಭಸಾಧ್ಯವಾಗಿದ್ದು, ಸ್ಥಳೀಯ ನಾಗರಿಕರು ಸಹಿತ ಅರಣ್ಯ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ.
ಕೊಡಗು ಜಿಲ್ಲೆಯಲ್ಲಿ ತೀವ್ರ ಮಳೆಯಾದ ಕಾರಣ ಆನೆಗಳ ಹಿಂಡು ಕೇರಳ ಗಡಿಪ್ರದೇಶವನ್ನು ಪ್ರವೇಶಿಸಿದೆ ಎಂದು ಅಂದಾಜಿಸಲಾಗಿದೆ. ಆನೆಗಳ ಹಿಂಡು ದೇಲಂಪಾಡಿ ಗ್ರಾ.ಪಂ ಭಾಗದ ಅತಿ ಹೆಚ್ಚು ಕೃಷಿ ಭೂಮಿಯನ್ನು ನಾಶ ಪಡಿಸುವ ಆತಂಕ ಜನಸಾಮಾನ್ಯರದ್ದಾಗಿದೆ. ಕಳೆದ ಒಂದು ವಾರದಿಂದ ದೇಲಂಪಾಡಿ ಸಮೀಪ ಪ್ರದೇಶಗಳಲ್ಲಿ ಬೀಡುಬಿಟ್ಟಿರುವ ಕಾಡಾನೆ ಹಿಂಡಿನಿಂದ ಅತೀವ ನಾಶನಷ್ಟವಾಗಲಿದೆ ಎಂಬ ಆತಂಕ ಇಲ್ಲಿನ ಕೃಷಿಕರದ್ದಾಗಿದೆ. ಅರಣ್ಯ ಇಲಾಖೆ ಕಚೇರಿಯಲ್ಲಿ ನಿಯಮಿತ ಸಿಬ್ಬಂದಿ ಸಹಿತ ಆನೆಗಳನ್ನು ಮರಳಿ ಕಾಡಿಗೆ ಓಡಿಸಲು ಸಹಕಾರಿಯಾಗುವ ಅಗತ್ಯ ಉಪಕರಣಗಳು ಇಲ್ಲವಾದ ಹಿನ್ನೆಲೆಯಲ್ಲಿ ಸಿಬ್ಬಂದಿಗಳ ಜೀವಕ್ಕೂ ಅಪಾಯವಿದೆ. ಆನೆಗಳನ್ನು ಓಡಿಸಲು ಉಪಯೋಗಿಸುವ ಶಬ್ದ ಗುಂಡುಗಳು ಮಳೆಗಾಲದಲ್ಲಿ ನಿಷ್ಪ್ರಯೋಜಕವೆನ್ನುವಂತಾಗಿವೆ.
ದೇಲಂಪಾಡಿ ಗ್ರಾ.ಪಂ ಪಂಚಾಯತು ಸಮೀಪವತರ್ಿ ಪ್ರದೇಶಗಳಲ್ಲಿ ಬೀಡು ಬಿಟ್ಟಿರುವ ಆನೆ ಹಿಂಡುಗಳನ್ನು ಮರಳಿ ಕಾಡಿಗೆ ಅಟ್ಟಬೇಕೆಂದು ಶಾಸಕ ಕೆ.ಕುಞರಾಮನ್ ಅರಣ್ಯ ಇಲಾಖೆ ಅಧಿಕಾರಿಗಳಲ್ಲಿ ಈ ಹಿಂದೆ ವಿನಂತಿಸಿದ್ದರು. ಸೂಕ್ತ ಕ್ರಮಗಳನ್ನು ಅನುಸರಿಸಿ ಆನೆ ಹಾವಳಿಯಿಂದ ಕೃಷಿ ನಾಶವನ್ನು ತಪ್ಪಿಸಬೇಕು ಎಂದು ಶಾಸಕರು ತಿಳಿಸಿದ್ದಾರೆ. ಒಂದು ವಾರದ ನಂತರವೂ ಕಾಡಾನೆ ಹಾವಳಿ ಇಲ್ಲಿ ಮುಂದುವರಿಯುತ್ತಿದ್ದು ಸಂಬಂಧಪಟ್ಟ ಸ್ಥಳೀಯ ಅರಣ್ಯ ಪಾಲಕರು ಯಾವುದೇ ಕ್ರಮ ವಹಿಸಿಲ್ಲ ಎಂದು ಅವರು ಆರೋಪಿಸಿದ್ದು, ಆರಣ್ಯ ಇಲಾಖೆ ಸಚಿವರ ಗಮನಕ್ಕೆ ತರಲಾಗುವುದೆಂದು ಕುಞರಾಮನ್ ಹೇಳಿದ್ದಾರೆ.
ಹೆಚ್ಚಿದ ಕಾಡು ಪ್ರಾಣಿಗಳ ಉಪಟಳ:
ಮಳೆಗಾಲ ಕಡಿಮೆಯಾಗುತ್ತಿದ್ದಂತೆ ಆನೆ ಹಾವಳಿ ಸಹಿತ ಕಾಡು ಹಂದಿ, ಮಂಗ, ಹಾವುಗಳು ಸಹಿತ ಗದ್ದೆಗಳಲ್ಲಿ ಚಿಗುರಿದ ಭತ್ತ ಎಳೆಗಳನ್ನು ತಿನ್ನುವ ನವಿಲಿನ ಉಪಟಳವೂ ಹಲವಡೆ ಹೆಚ್ಚಾಗುತ್ತಿದೆ. ಕಾಡು ಪ್ರಾಣಿಗಳ ಉಪಟಳದಿಂದ ಜನ ಸಾಮಾನ್ಯರು ಸಂಕಷ್ಟ ಅನುಭವಿಸುವಂತಾಗಿದೆ. ಕಾಡು ಪ್ರಾಣಿ ಹಾವಳಿ ತಪ್ಪಿಸಿ ಕೃಷಿ ಹಾನಿ ತಡೆಯಲು ಸಹಾಯಕವಾಗುವ ನಿಟ್ಟಿನಲ್ಲಿ ಆರು ವರ್ಷಗಳ ಹಿಂದೆ ಜ್ಯಾರಿಗೆ ಬಂದ ರ್ಯಾಪಿಡ್ ರೆಸ್ಪಾನ್ಸ್ ಟೀಂ(ಆರ್.ಆರ್.ಟಿ) ಇನ್ನೂ ಕಾರ್ಯರೂಪಕ್ಕೆ ಬಾರದಿರುವುದು ಕೃಷಿಕರನ್ನು ಸಂಕಷ್ಟಕ್ಕೀಡು ಮಾಡಿದೆ. ಇತ್ತೀಚೆಗೆ ಮಹಿಳೆಯೋವರ್ೆ ಕಾಡು ಹಂದಿ ತಿವಿದ ಕಾರಣ ಸಾವನ್ನಪ್ಪಿದ ಘಟನೆಯು ನಡೆದಿತ್ತು. 2012ರಲ್ಲಿ ವನ್ಯಜೀವಿ ಇಲಾಖೆ ಮಂತ್ರಿಯಾಗಿದ್ದ ಕೆ.ಬಿ ಗಣೇಶ್ ಕುಮಾರ್ ಜಿಲ್ಲೆಯಲ್ಲಿ ಆರ್.ಆರ್.ಟಿ ಕೇಂದ್ರ ಸ್ಥಾಪನೆಗೆ ಕಾರಣರಾಗಿದ್ದರು. ಆದರೆ ಆರು ವರ್ಷ ಕಳೆದರೂ ಕಾಡು ಪ್ರಾಣಿಗಳ ಹಾವಳಿಯಿಂದಾಗುವ ಸಮಸ್ಯೆ ತಡೆ ಸಹಿತ ಜನಸಾಮಾನ್ಯರ ರಕ್ಷಣೆಯ ಕಾರ್ಯ ನಡೆಯುತ್ತಿಲ್ಲ.