HEALTH TIPS

No title

ಸ್ವಾವಲಂಬಿ ಬದುಕಿಗೆ- ಸ್ವ ಉದ್ಯೋಗ-ಅಶೊಕ್.ಎನ್                   
    ಪೆರ್ಲ: ಮಾನವನು ಸ್ವಾವಲಂಬಿಯಾಗಿ ಬದುಕಬೇಕಾದರೆ ಸ್ವ- ಉದ್ಯೋಗಿಯಾಗಿರಬೇಕು ಎಂದು  ಕೈಗಾರಿಕಾ ವಿಸ್ತರಣಾಧಿಕಾರಿ ಅಶೊಕ್.ಎನ್ ತಿಳಿಸಿದರು.
   ಅವರು ಪೆರ್ಲ ನಾಲಂದ ಮಹಾವಿದ್ಯಾಲಯದ ಅರ್ಥಶಾಸ್ತ್ರ ವಿಭಾಗವು ನಡೆಸುವ "ಸ್ವ- ಉದ್ಯೋಗ" ಎಂಬ ಸಟರ್ಿಫಿಕೇಟ್ ಕೋರ್ಸನ್ನು ಇತ್ತೀಚೆಗೆ ಉದ್ಘಾಟಿಸಿ ಮಾತನಾಡಿದರು. 
  ಭಾರತೀಯ ಸಂಸ್ಕೃತಿಯಲ್ಲಿ ಗುಡಿಕೈಗಾರಿಕೆಗಳಿಗೆ ಪ್ರಧಾನ ಸ್ಥಾನವಿತ್ತು. ಆ ಕಾಲದಲ್ಲಿ ಜನರು ಉದ್ಯೋಗಕ್ಕಾಗಿ ಊರೂರು ಅಲೆಯುತ್ತಿರಲಿಲ್ಲ. ಸ್ವಾವಲಂಬಿಗಳಾಗಿದ್ದರು. ಇಂದು ಅದನ್ನು  ಮರೆತುದರಿಂದ ದೇಶದಲ್ಲಿ ನಿರುದ್ಯೋಗಿಗಳು ಸೃಷ್ಟಿಯಾಗುತ್ತಿದ್ದಾರೆ. ಇದಕ್ಕೆ ಸ್ವ-ಉದ್ಯೋಗ ಒಂದೇ ಪರಿಹಾರ ಮಾರ್ಗ. ಸ್ವ ಉದ್ಯೋಗಕ್ಕೆ ಸಾಕಷ್ಟು ಅವಕಾಶಗಳು ಮತ್ತು ಸಾಧ್ಯತೆಗಳಿವೆ. ಸರಕಾರ ಅಗತ್ಯ ನೆರವು ನೀಡುತ್ತಿದೆ. ಆದರೆ ಅದನ್ನು  ಅರಿತುಕೊಂಡು ಮುನ್ನಡೆಯುವ ಧೈರ್ಯ ಜನರಲ್ಲಿ ಇಲ್ಲವಾಗಿ ಇಂದಿನ ವಿದ್ಯಾಥರ್ಿಗಳಿಗೆ ಆ ನಿಟ್ಟಿನಲ್ಲಿ ಧೈರ್ಯ ತುಂಬಲು ಮತ್ತು ಸ್ವ-ಉದ್ಯೋಗ ಸಾಧ್ಯತೆಗಳನ್ನು ತಿಳಿದುಕೊಳ್ಳಲು ತರಬೇತಿ  ಸಹಕಾರಿಯಾಗುತ್ತದೆ ಎಮದು ಅವರು ತಿಳಿಸಿದರು. 
   ಕಾಲೇಜು  ಪ್ರಾಂಶುಪಾಲ ಡಾ.ವಿಘ್ನೇಶ್ವರ ವಮರ್ುಡಿ ಅಧ್ಯಕ್ಷತೆವಹಿಸಿ ಮಾತನಾಡಿ, ವಿದ್ಯಾವಂತರಿಗೆಲ್ಲ ಸರಕಾರಿ ಉದ್ಯೋಗ ದೊರಕಲಾರದು. ಅದನ್ನು ನಿರೀಕ್ಷಿಸಿ ಕುಳಿತರೆ ನಿರುದ್ಯೋಗ ಸಮಸ್ಯೆ ತೀವ್ರಗೊಳ್ಳುತ್ತದೆ.ಆ ಕಾರಣದಿಂದ ಗ್ರಾಮೀಣ ಪ್ರದೇಶದಲ್ಲಿ  ಇಂದು ನಿರುದ್ಯೋಗ ಸಮಸ್ಯೆ ಕಂಡುಬಂದಿದೆ. ಈ ನಿಟ್ಟಿನಲ್ಲಿ ಸ್ವ ಉದ್ಯೋಗದ ಕಡೆಗೆ ಮನ ಮಾಡಿದರೆ ದೇಶದ ಸಮಸ್ಯೆಗಳಿಗೆ ಪರಿಹಾರ ಕಂಡಂತಾಗುತ್ತದೆ, ಜೊತೆಗೆ ನಮ್ಮ ಬದುಕು ಸುಗಮವಾಗುತ್ತದೆ ಎಂದರು.
   ಕಾಲೇಜಿನ  ಕಾರ್ಯನಿರ್ವಹಣಾಧಿಕಾರಿ  ಕೆ.ಶಿವಕುಮಾರ್,  ನೌಕರ ಸಂಘದ ಕಾರ್ಯದಶರ್ಿ ಪ್ರೊ. ಕೇಶವ ಶರ್ಮ ಕಾರ್ಯಕ್ರಮಕ್ಕೆ ಶುಭಹಾರೈಸಿದರು.ಅರ್ಥಶಾಸ್ತ್ರ ವಿಭಾಗ ಮುಖ್ಯಸ್ಥ ಪ್ರೊ.ಶಂಕರ ಖಂಡಿಗೆ ಉಪಸ್ಥಿತರಿದ್ದರು. ವಿದ್ಯಾಥರ್ಿನಿ ಪಾತಿಮ್ಮತ್ ಶಾಹಿರ ಸ್ವಾಗತಿಸಿ, ಸೋನಲ್ ರಾವ್ ವಂದಿಸಿದರು. ತಪ್ಸೀರ ಕಾರ್ಯಕ್ರಮ ನಿರೂಪಿಸಿದರು.
   ಹೇಳಿದ್ದೇನು:
  ದೇಶದಲ್ಲಿ ವಾಷರ್ಿಕವಾಗಿ ಪದವಿಗಳಿಸಿ ಹೊರಬರುತ್ತಿರುವ ಯುವಕರಲ್ಲಿ ಶೇಕಡಾ 59 ಮತ್ತು ಯುವತಿಯರಲ್ಲಿ ಶೇಕಡಾ 24 ಗ್ರಾಮೀಣ ಭಾಗದಲ್ಲಿ ಕಾಮರ್ಿಕರಾಗಿದ್ದು, ಇವರೊಂದಿಗೆ ಶೇಕಡಾ 16 ರಷ್ಟು ಪದವಿ ಪಡೆದ ಯುವಕರು ಮತ್ತು ಶೇಕಡಾ 28ರಷ್ಟು ಯುವತಿಯರು ನಿರುದ್ಯೋಗಿಗಳಾಗಿದ್ದಾರೆ. ಇವರೆಲ್ಲ ಸ್ವಾಲಂಬಿಗಳಾಗಬೇಕಿದ್ದರೆ ಸ್ವ-ಉದ್ಯೋಗದ ಬಗ್ಗೆ ಆಸಕ್ತಿ ತೋರಬೇಕು. ಸ್ವ- ಉದ್ಯೋಗಕ್ಕಾಗಿ ಧಾರಾಳ ಅವಕಾಶಗಳಿದ್ದು ಅವನ್ನು ಯುವ ಜನಾಂಗ ತನ್ನದಾಗಿಸಕೊಳ್ಳಬೇಕು.
ಡಾ. ವಿಘ್ನೇಶ್ವರ ವಮರ್ುಡಿ.
                                   ನಾಲಂದಾ ಕಾಲೇಜಿನ ಪ್ರಾಂಶುಪಾಲ ಹಾಗೂ ಆಥರ್ಿಕ ತಜ್ಞ
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries