HEALTH TIPS

No title

           ಕೇರಳ ಕನರ್ಾಟಕ ಸರಕಾರಗಳು ಭೂತಾರಾಧನೆಯ ಅಕಾಡೆಮಿ ರೂಪಿಸಬೇಕು-ಬಾಳೆಕೋಡಿ ಶ್ರೀ
   ಬದಿಯಡ್ಕ: ತುಳುನಾಡಿನ ಪ್ರಾಚೀನ ಶ್ರೀಮಂತಿಕೆಯನ್ನು ಉಳಿಸಿ ಬೆಳೆಸಬೇಕಾದ ಅನಿವಾರ್ಯತೆ ಇದೆ. ಇಲ್ಲಿಯ ಆಚಾರ ವಿಚಾರಗಳು ವಿಶಿಷ್ಟವಾಗಿದ್ದು, ಪ್ರಕೃತಿಯೊಂದಿಗೆ ಸಮ್ಮಿಳಿತಗೊಂಡಿರುವ ನಂಬಿಕೆ-ನಡವಳಿಕೆಗಳು ಅಪೂರ್ವವಾದ್ದು. ಆಧುನಿಕ ಬದಲಾವಣೆಗಳೊಂದಿಗೆ ನಾಗಾಲೋಟದಲ್ಲಿದ್ದರೂ ಪರಂಪರೆಯ ಬಗ್ಗೆ ನೆನಪುಮಾಡಿಕೊಳ್ಳುವುದು ಸಂತಸ-ಸಮೃದ್ದಿಗೆ ಕಾರಣವಾಗುತ್ತದೆ ಎಂದು ಕನರ್ಾಟಕ ವಿಧಾನ ಪರಿಷತ್ತು ಸದಸ್ಯ ಹರೀಶ್ ಕರೆನೀಡಿದರು.
   ಜಿ.ಕೆ.ಚಾರಿಟೇಬಲ್ ಟ್ರಸ್ಟ್ ಬದಿಯಡ್ಕ ಹಾಗೂ ಕನರ್ಾಟಕ ಜಾನಪದ ಪರಿಷತ್ತು ಕೇರಳ ಘಟಕ ಹಾಗೂ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ , ತುಳುವೆರೆ ಆಯನೊ ಕೂಟ ಬದಿಯಡ್ಕ ಇವುಗಳ ಸಂಯುಕ್ತ ಆಶ್ರಯದಲ್ಲಿ ಕುಂಟಾಲುಮೂಲೆ ವಾಂತಿಚ್ಚಾಲು ನಲ್ಲಿ ಭಾನುವಾರ ಆಯೋಜಿಸಲಾದ ಆಟಿದ ಆಯನೊ ದ 50ನೇ ವರ್ಷದ ಸಮಾರಂಭದಲ್ಲಿ ಅಪರಾಹ್ನ ನಡೆದ "ದೈವಾರಾಧನೆ:ಕೋಡೆ, ಇನಿ,ಎಲ್ಲೆ ಎಂಬ ವಿಶೇಷ ಗೋಷ್ಠಿಯಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
  ದೈವಾರಾಧಕರ ಸಮಗ್ರ ವಿಕಾಸಕ್ಕೆ ಸಂಘಟನೆ ಆವಶ್ಯವಿದ್ದು, ಕನರ್ಾಟಕ ಸರಕಾರದೊಂದಿಗೆ ಸಮಾಲೋಚಿಸಿ ದೈವಾರಾಧಕರ ಶ್ರೇಯೋಭಿವೃದ್ದಿಗೆ ಯೋಜನೆ ರೂಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಈ ಸಂದರ್ಭ ಭರವಸೆ ನೀಡಿದರು. ಪರಂಪರೆಗೆ ಧಕ್ಕೆಯಾಗದಂತೆ ದೈವಾರಾಧನಾ ಕಲೆಯನ್ನು ಬೆಳೆಸುವ ಯೋಜನೆಗಳು ರೂಪುಗೊಳ್ಳಬೇಕು ಎಂದು ತಿಳಿಸಿದರು.
  ಸಮಾರಂಭದಲ್ಲಿ ಉಪಸ್ಥಿತರಿದ್ದು ಆಶೀರ್ವಚನಗೈದು ಮಾತನಾಡಿದ ಕನ್ಯಾನ ಬಾಳೆಕೋಡಿಯ ಶ್ರೀಕಾಶೀ ಕಾಳಬೈರವೇಶ್ವರ ಶಿಲಾಂಜನ ಕ್ಷೇತ್ರದ ಶಶಿಕಾಂತ ಮಣಿ ಸ್ವಾಮೀಜಿ ಮಾತನಾಡಿ, ತುಳು ಸಂಸ್ಕೃತಿಯ ವಿಶಿಷ್ಟತೆಯಾದ ಭೂತಾರಾಧನೆಯ ಪರಂಪರೆಯನ್ನು ಉಳಿಸುವ ನಿಟ್ಟಿನಲ್ಲಿ ಕೇರಳ ಹಾಗೂ ಕನರ್ಾಟಕ ಸರಕಾರಗಳು ದೈವಾರಾಧನೆ ಅಕಾಡೆಮಿ ರಚಿಸಬೇಕು.ಈ ಮೂಲಕ ದೈವಾರಾಧನೆ ಕಲಾವಿದರಿಗೆ ನ್ಯಾಯದೊರಕಿಸುವಲ್ಲಿ ಕಾರ್ಯವೆಸಗಬೇಕು ಎಂದು ತಿಳಿಸಿದರು. ತುಳುನಾಡಿನ ಜನತೆ ಸಾಮರಸ್ಯ ಕಾಪಾಡುವ ನಿಟ್ಟಿನಲ್ಲಿ ಬೇಧ ರಹಿತ ಸಮಾಜ ನಿಮರ್ಾಣದಲ್ಲಿ ಒಗ್ಗಟ್ಟು ಕಾಪಿಡುವ ಮನಸ್ಸುಗಳು ಬೆಳೆದುಬರಬೇಕು ಎಂದು ತಿಳಿಸಿದರು.
  ಕುಕ್ಕಾಜೆ ಶ್ರೀಕಾಳಿಕಾಂಬಾ ಆಂಜನೇಯ ಕ್ಷೇತ್ರದ ಧರ್ಮದಶರ್ಿ ಕೃಷ್ಣ ಗುರೂಜಿ ಉಪಸ್ಥಿತರಿದ್ದು ಮಾತನಾಡಿ, ಪ್ರತಿಯೊಬ್ಬರ ಮನಸ್ಸು ಅರಳುವ ಆಚರಣೆಗಳನ್ನು ಬೆಳೆಸಬೇಕು. ಜಾಗತಿಕವಾಗಿ ಎಲ್ಲೆಡೆ ಹಬ್ಬಿರುವ ತುಳುವರು ಪರಂಪರೆಯ ಬೆಳವಣಿಗೆಗೆ ಪ್ರೋತ್ಸಾಹಿಸಬೇಕು ಎಂದು ತಿಳಿಸಿದರು.
  ಶ್ರೀಧೂಮಾವತಿ ದೈವದ ಪಾತ್ರಿ ನಾರಾಯಣ ಪೂಜಾರಿ ಬಂಬ್ರಾಣ ಕೊಟ್ಯದ ಮನೆ ಅಧ್ಯಕ್ಷತೆ ವಹಿಸಿದ್ದ ಗೋಷ್ಠಿಯಲ್ಲಿ ಪಣಂಬೂರು ಕುಕ್ಕಾಡಿಯ ಶ್ರೀಭಗವತೀ ಅರಸು ಮುಂಡತ್ತಾಯ ಕ್ಷೇತ್ರದ ಚಂದ್ರಶೇಖರ ಕಾರ್ನವರ್, ಕಾರಡ್ಕ ಚೀರುಂಬಾ ಭಗವತಿ ಕ್ಷೇತ್ರದ ಗೋಪಾಲ ಮೂತ ಚೆಟ್ಟಿಯಾರ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
  ಬೈರಡ್ಕ ಶ್ರೀಧೂಮಾವತಿ ಕ್ಷೇತ್ರದ ಚಂದ್ರಶೇಖರ ಸುವರ್ಣ ಚಿಪ್ಲುಕೋಟೆ, ಬದಿಯಡ್ಕ ಪೂಮಾಣಿ ಕಿನ್ನಿಮಾಣಿ ಕ್ಷೇತ್ರದ ಆನುವಂಶಿಕ ಮೊಕ್ತೇಸರ ಚಂದ್ರಹಾಸ ರೈ ಪೆರಡಾಲಗುತ್ತು, ಪೈವಳಿಕೆ ಗ್ರಾ.ಪಂ.ಸದಸ್ಯ ಹರೀಶ್ ಬೊಟ್ಟಾರಿ, ನಾಗಪ್ಪ ಪರವ ಪಡುಮಲೆ, ಗೋಪಾಲಕೃಷ್ಣ ಕಿನ್ವಾಲ್ ಕುಡಾಲು,ಐತ್ತಪ್ಪ ಆರಿಕ್ಕಾಡಿ, ಕುಟ್ಟಿನಲಿಕೆ ನಂದಾವರ ಬೆಟ್ಟು, ರಾಜೇಶ್ ಪಂಬದ ಚಿಪ್ಪಾರು, ತಾರಾನಾಥ ರೈ ಪೆರ್ಲ ಪಡ್ಡಂಬೈಲುಗುತ್ತು, ಎಂ.ಕೆ.ಕುಕ್ಕಾಜೆ, ಝಡ್.ಎ.ಕಯ್ಯಾರು ಮೊದಲಾದವರು ಉಪಸ್ಥಿತರಿದ್ದು ಮಾತನಾಡಿದರು. ಕಾರ್ಯಕ್ರಮ ಸಂಯೋಜಕ ಗೋಪಾಲಕೃಷ್ಣ ಕುಲಾಲ್ ವಾಂತಿಚ್ಚಾಲ್ ಉಪಸ್ಥಿತರಿದ್ದರು. ಲಕ್ಷ್ಮಣ ಅಡೂರು ಪ್ರಾರ್ಥನಾಗೀತೆ ಹಾಡಿದರು. ಚನ್ನಿಕುಡಾಲ್ ಮೂಲಸ್ಥಾನ ಸಮಿತಿಯ ಅಧ್ಯಕ್ಷ ಸುಂದರ ಕಟ್ನಡ್ಕ ಸ್ವಾಗತಿಸಿ, ಕಾರ್ಯದಶರ್ಿ ಕೃಷ್ಣ ಕುಲಾಲ್ ಕಳತ್ತೂರು ವಂದಿಸಿದರು.
   

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries