HEALTH TIPS

No title

                      ಹಾಲುಡಿಸುವ ಕೊಠಡಿ ಉದ್ಘಾಟನೆ
     ಬದಿಯಡ್ಕ : ಹಾಲುಡಿಸುವ ತಾಯಂದಿರ ಸಂಕಷ್ಟಗಳನ್ನು ಅಥರ್ೈಸಿ ಇದೀಗ ಸಾರ್ವಜನಿಕ ಪ್ರದೇಶಗಳಲ್ಲಿ ಕಂದಮ್ಮಗಳಿಗೆ ಹಾಲುಣಿಸಲು ವ್ಯವಸ್ಥೆಗಳನ್ನು ಏರ್ಪಡಿಸಲಾಗುತ್ತಿದ್ದು, ಸ್ಥಳೀಯ ಗ್ರಾ.ಪಂ.ಗಳ ಪೈಕಿ ಇದೀಗ ಬದಿಯಡ್ಕ ಗ್ರಾ.ಪಂ. ಮೊತ್ತಮೊದಲಾಗಿ ಗ್ರಾ.ಪಂ. ಕಾಯರ್ಾಲಯದೊಳಗಡೆ ಪ್ರತ್ಯೇಕ ಸ್ತನ್ಯಪಾನದ ಕೊಠಡಿಯ ವ್ಯವಸ್ಥೆಯ ಮೂಲಕ ಗಮನ ಸೆಳೆದಿದೆ.
   ಮಗುವಿಗೆ ಹಾಲಿನ ಅವಶ್ಯಕತೆಯಿರುವಾಗೆಲ್ಲ ಹಾಲುಣಿಸಬೇಕು ಎಂಬ ಉದ್ದೇಶದಿಂದ ಬದಿಯಡ್ಕ ಗ್ರಾಮ ಪಂಚಾಯತಿನಲ್ಲಿ "ಫೀಡಿಂಗ್ ರೂಮ್"ನ ವ್ಯವಸ್ಥೆ ಮಾಡಲಾಗಿದ್ದು, ಬದಿಯಡ್ಕ ಗ್ರಾಮ ಪಂಚಾಯತಿ ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಸೋಮವಾರ ಉದ್ಘಾಟಿಸಿದರು. ಆರೋಗ್ಯ ಸ್ಥಾಯೀ ಸಮಿತಿಯ ಅಧ್ಯಕ್ಷ ಶಾಮ್ ಪ್ರಸಾದ್ ಮಾನ್ಯ ಉಪಸ್ಥಿತರಿದ್ದರು. ಐಸಿಡಿಎಸ್ ಕಾಸರಗೋಡಿನ ಶಿಶು ಯೋಜನಾಧಿಕಾರಿ ಸುಧಾ ಕೆ., ಜ್ಯೋತಿ ಹಾಗೂ ವಿವಿಧ ಅಂಗನವಾಡಿ ಕಾರ್ಯಕರ್ತರು ಉಪಸ್ಥಿತರಿದ್ದರು.
   ಮುಂದಿನ ದಿನಗಳಲ್ಲಿ ಈ ಕೊಠಡಿಯೊಳಗೆ ತೊಟ್ಟಿಲಿನ ವ್ಯವಸ್ಥೆ ಮಾಡಲಾಗುವುದು ಎಂದು ಸಂಬಂಧಪಟ್ಟವರು ತಿಳಿಸಿರುವರು. ಗ್ರಾ.ಪಂ. ಕಾಯರ್ಾಲಯಗಳಿಗೆ ಅಗತ್ಯಗಳಿಗಾಗಿ ಆಗಮಿಸುವ ಮಾತೆಯರಿಗೆ, ಮಹಿಳಾ ಸಿಬ್ಬಂದಿಗಳಿಗೆ ನೂತನ ವ್ಯವಸ್ಥೆ ಪ್ರಯೋಜನಕಾರಿಯಾಗುವ ನಿರೀಕ್ಷೆ ಇರಿಸಲಾಗಿದೆ.
   

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries