ಮಲಯಾಳ ಶಿಕ್ಷಕ ನೇಮಕಾತಿ ವಿರುದ್ಧ ಹೋರಾಟ ತೀವ್ರಗೊಳಿಸಲು ತೀಮರ್ಾನ
ಕಾಸರಗೋಡು: ಕನ್ನಡ ಮಾಧ್ಯಮ ಶಾಲೆಯ ಗಣಿತ ವಿಭಾಗಕ್ಕೆ ಮಲಯಾಳ ಶಿಕ್ಷಕ ರಜೆ ಬಳಿಕ ಶಾಲೆಗೆ ಮರುಪ್ರವೇಶ ಮಾಡುವುದನ್ನು ತಡೆಗಟ್ಟಲು ಅಗತ್ಯ ಕ್ರಮ ಕೈಗೊಳ್ಳಬೇಕಿದ್ದು, ಈ ನಿಟ್ಟಿನಲ್ಲಿ ಹೆತ್ತವರು ನಡೆಸುವ ಹೋರಾಟಕ್ಕೆ ಕನ್ನಡ ಹೋರಾಟ ಸಮಿತಿ ಬೆಂಬಲ ನೀಡಲು ತೀಮರ್ಾನಿಸಿದೆ.
ಕಾಸರಗೋಡು ಬೀರಂತಬೈಲ್ನಲ್ಲಿರುವ ಕನ್ನಡ ಮಾಧ್ಯಮ ಅಧ್ಯಾಪಕ ಭವನದಲ್ಲಿ ನಡೆದ ಕನ್ನಡ ಹೋರಾಟ ಸಮಿತಿ ಸಭೆಯಲ್ಲಿ ಈ ಬಗ್ಗೆ ತೀಮರ್ಾನಿಸಲಾಯಿತು. ಎಂ.ವಿ.ಮಹಾಲಿಂಗೇಶ್ವರ ಭಟ್ ಅಧ್ಯಕ್ಷತೆ ವಹಿಸಿದರು. ಈಗಾಗಲೇ ಮಂಗಲ್ಪಾಡಿ ಹೈಯರ್ ಸೆಕೆಂಡರಿ ಪ್ರೌಢ ಶಾಲೆ ಕನ್ನಡ ಮಾಧ್ಯಮ ಗಣಿತ ವಿಭಾಗಕ್ಕೆ ಸೇರ್ಪಡೆಗೊಂಡಿರುವ ಮಲಯಾಳ ಶಿಕ್ಷಕ ಪ್ರತಿಭಟನೆಯ ನಡುವೆಯೂ ತರಗತಿಗೆ ಹಾಜರಾಗುತ್ತಿದ್ದು, ರಕ್ಷಕ ಶಿಕ್ಷಕ ಸಂಘದ ವತಿಯಿಂದ ಹೋರಾಟ ಕಾವು ಪಡೆದುಕೊಳ್ಳುತ್ತಿದ್ದಂತೆ ಶಿಕ್ಷಕ ರಜೆ ಪಡೆದು ತೆರಳಿದ್ದಾರೆ. ಇದೀಗ ಓಣಂ ರಜೆ ಕಳೆದು ಶಾಲೆ ಪುನರಾರಂಭಗೊಳ್ಳುವ ಸಂದರ್ಭ ಮತ್ತೆ ಶಾಲೆಗೆ ಹಾಜರಾದಲ್ಲಿ ಶಿಕ್ಷಕನನ್ನು ತಡೆಯುವುದಾಗಿ ರಕ್ಷಕ ಶಿಕ್ಷಕ ಸಂಘದ ಪದಾಧಿಕಾರಿಗಳು ಹಾಗೂ ವಿದ್ಯಾಥರ್ಿಗಳ ಹೆತ್ತವರು ತಿಳಿಸಿದ್ದಾರೆ. ಕನ್ನಡ ಶಿಕ್ಷಕನ ನೇಮಕಾತಿ ನಡೆಸುವಲ್ಲಿವರೆಗೆ ಹೋರಾಟ ನಡೆಸುವುದಾಗಿ ಹೆತ್ತವರು ತಿಳಿಸಿದ್ದಾರೆ.
ಉಪ್ಪಳ ಮಂಗಲ್ಪಾಡಿ(ಕುಕ್ಕಾರು) ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಬಾಲಕೃಷ್ಣ ಚೆರುಗೋಳಿ, ಕನ್ನಡ ಹೋರಾಟ ಸಮಿತಿ ಕಾರ್ಯದಶರ್ಿ ಕೆ.ಭಾಸ್ಕರ, ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಜಿಲ್ಲಾ ಅಧ್ಯಕ್ಷ ರವೀಂದ್ರನಾಥ್ ಬಲ್ಲಾಳ್ ಮೊದಲಾದವರು ಉಪಸ್ಥಿತರಿದ್ದರು.