HEALTH TIPS

No title

          ಕೊಂಡೆವೂರು ಯೋಗಾಶ್ರಮದ ಕಾರ್ಯಚಟುವಟಿಕೆಗಳು ರಾಷ್ಟ್ರಕ್ಕೆ ಮಾದರಿ-ಕೇಂದ್ರ ಸಚಿವ ಅಶ್ವಿನ್ ಕುಮಾರ್ ಚೌಬೆ
                  ಸಹಸ್ರಾಕ್ಷ ದಾನ ಸಂಕಲ್ಪಕ್ಕೆ ಚಾಲನೆ
   ಉಪ್ಪಳ: ರಾಷ್ಟ್ರದ ಪರಂಪರೆಯು ದಾನಗಳಿಗೆ ಮಹತ್ವ ನೀಡಿದ್ದು, ಈ ಪೈಕಿ ದೇಹ ದಾನವು ಶ್ರೇಷ್ಠದಾನವಾಗಿ ಮಹಾನ್ ದಾನವೆಂದೆನಿಸಿದೆ. ಎಲ್ಲಾ ಧರ್ಮ, ಮತಗಳೂ ದೇಹದಾನವನ್ನು ಪುಣ್ಯವೆಂದು ಪರಿಗಣಿಸಿದ್ದು, ಹೊಸ ತಲೆಮಾರಿಗೆ ದೇಹ, ಕಣ್ಣು ಮೊದಲಾದ ಅವಯವಗಳ ದಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಕೇಂದ್ರ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಅಶ್ವಿನ್ ಕುಮಾರ್ ಚೌಬೆ ಅಭಿಪ್ರಾಯ ವ್ಯಕ್ತಪಡಿಸಿದರು.
   ಕೊಂಡೆವೂರಿನ ಶ್ರೀನಿತ್ಯಾನಂದ ಯೋಗಾಶ್ರಮದಲಲಿ 2019 ಫೆ.18 ರಿಂದ 24ರ ವರೆಗೆ ನಡೆಯಲಿರುವ ಅತಿ ವಿಶಿಷ್ಟ "ವಿಶ್ವಜಿತ್ ಅತಿರಾತ್ರ ಸೋಮಯಾಗ"ದ ಪೂರ್ವಭಾವಿಯಾಗಿ ಹಮ್ಮಿಕೊಂಡ ಸಮಾಜಮುಖೀ ವಿವಿಧ ಕಾರ್ಯಯೋಜನೆಯ ಭಾಗವಾಗಿ ಭಾನುವಾರ ಶ್ರೀಮಠದಲ್ಲಿ ಸಹಸ್ರಾಕ್ಷ ದಾನ ಸಂಕಲ್ಪ ಅಭಿಯಾನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
   ದೇಶದಲ್ಲಿ ಪ್ರತಿವರ್ಷ 1 ಲಕ್ಷದಷ್ಟು ಕಣ್ಣಿನ ಕಾನರ್ಿಯಾದ ತುತರ್ು ಬೇಡಿಕೆಯಿದ್ದು, ಕೇವಲ 25 ಸಾವಿರ ಕಾನರ್ಿಯಾಗಳು ಮಾತ್ರ ಲಭ್ಯವಿದೆ. ಜೊತೆಗೆ 2 ಲಕ್ಷ ಕಿಡ್ನಿಯ ಅಗತ್ಯವಿರುವಲ್ಲಿ 10 ಸಾವಿರ ಕಿಡ್ನಿಗಳು ಮಾತ್ರ ಲಭ್ಯವಿರುವುದು ಆತಂಕಕಾರಿಯಾಗಿದ್ದು, ಈ ನಿಟ್ಟಿನಲ್ಲಿ ಜನಜಾಗೃತಿ ಹಾಗೂ ದೇಹ ದಾನದ ಕಾರ್ಯಚಟುವಟಿಕೆಗಳು ಆಗಬೇಕಿದೆ ಎಂದು ಅವರು ತಿಳಿಸಿದರು. ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ರಾಷ್ಟ್ರೀಯ ಅಂಗ ಕಸಿ ಯೋಜನೆಯು ಅಂಗಾಂಗಗಳ ಬೇಡಿಕೆಯನ್ನು ಪೂರೈಸುವಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಸಚಿವರು ತಿಳಿಸಿದರು. ಸ್ವಯಂಸೇವಾ ಸಂಘಟನೆಗಳು, ಧಾಮರ್ಿಕ ಮುಖಂಡರು, ರಾಜಕೀಯ ನೇತಾರರು ದೇಹ ದಾನದ ಮಹತ್ವವನ್ನು ಪ್ರಚುರಪಡಿಸುವಲ್ಲಿ ಕ್ರಿಯಾತ್ಮಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಅಗತ್ಯವಿದ್ದು, ರಾಷ್ಟ್ರದ ಮಹಾನ್ ದೇಶಸೇವಕರಾಗಿದ್ದ ನಾನಾಜಿ ದೇಶ್ಮುಖ್ ತಮ್ಮ ಮರಣದ ನಂತರ ದೇಹ ದಾನಮಾಡಿರುವುದು ಇತರರಿಗೆ ಮಾರ್ಗದಶರ್ಿ ಎಂದು ತಿಳಿಸಿದರು. ಇತ್ತೀಚೆಗೆ ನಿಧನರಾದ ಕೇಂದ್ರ ಸಚಿವರಾಗಿದ್ದ ಸೋಮನಾಥ ಚಟಜರ್ಿ, ಪ.ಬಂಗಾಳದ ಮಾಜಿ ಮುಖ್ಯಮಂತ್ರಿ ಜ್ಯೋತಿಬಸು ಮೊದಲಾದವರು ತಮ್ಮ ಮರಣಾನಂತರ ದೇಹದಾನ ಮಾಡುವ ಮೂಲಕ ಮೇಲಂಕ್ತಿ ಹಾಕಿಕೊಟ್ಟಿರುವರೆಂದು ಅವರು ನೆನಪಿಸಿದರು.
   ಸಚಿವರು ಮಾತನಾಡುತ್ತ, ಭಾರತದ ಪ್ರಾಚೀನ ಗ್ರಂಥಗಳು ದೇಹದಾನದ ಬಗ್ಗೆ ಬೆಳಕು ಚೆಲ್ಲಿವೆ. ಮಹಾಬಲಿ ಚಕ್ರವತರ್ಿ ದಾನಗಳಿಂದ ನಿತ್ಯ ಜನಮಾನಸದಲ್ಲಿ ಈಗಲೂ ಚಿರಪರಿಚಿತರಾಗಿದ್ದಾರೆ. ಮಹಾಭಾರತದ ಕರ್ಣನ ವ್ಯತ್ತಿತ್ವ ದಾನದಚ ಮೂಲಕ ಗುರುತಿಸಿಕೊಂಡಿದೆ ಎಂದು ನೆನಪಿಸಿದರು.
   ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೇಂದ್ರ ಸರಕಾರದ ಆಯುಷ್ ಖಾತೆಯ ಸಚಿವ ಶ್ರೀಪಾದ ಯಸ್ಸೋ ನಾಯಕ್ ಅವರು ಮಾತನಾಡಿ, ಸಮಾಜಕ್ಕೆ ನೀಡುವುದು ಭಾರತೀಯ ಸಂಸ್ಕ್ರತಿಯಾಗಿದೆ. ಯಜ್ಞ-ಯಾಗಗಳಿಂದ ಪರಿಸರ, ಮನುಷ್ಯನ ಮನೋಸ್ಥಿತಿಗಳು ಧನಾತ್ಮಕತೆಯೆಡೆಗೆ ಸಾಗುವುದರಿಂದ ನೆಮ್ಮದಿ ನೆಲಸುವುದು ಎಂದು ತಿಳಿಸಿದರು. ಕೊಂಡೆವೂರಿನ ಆಧ್ಯಾತ್ಮಿಕ ಸೇವೆಯ ಜೊತೆಗೆ ಅದು ಸಮಾಜಮುಖಿಯಾಗಿ ಕೈಗೊಳ್ಳುತ್ತಿರುವ ವಿಶಿಷ್ಟ ಯೋಜನೆಗಳು ರಾಷ್ಟ್ರಮಟ್ಟದಲ್ಲೇ ಗುರುತಿಸುವಂತೆ ಮಾಡಿದೆ ಎಂದು ಅವರು ಶ್ಲಾಘಿಸಿದರು. ಕೇಂದ್ರ ಸರಕಾರವು ಆಯುಷ್ಮಾನ್ ಭಾರತ ಯೋಜನೆಯನ್ನು ವಿಸ್ತರಿಸುತ್ತಿದ್ದು, ಜನ ಸಾಮಾನ್ಯರ ಗರಿಷ್ಠ ಆರೋಗ್ಯ ಸಂರಕ್ಷಣೆಯ ನಿಟ್ಟಿನಲ್ಲಿ ವಿಶಾಲ ಚಿಂತನೆಗಳೊಂದಿಗೆ ಯೋಜನೆ ರೂಪಿಸಲ್ಪಟ್ಟಿದ್ದು, ಎಲ್ಲರ ಸಹಕಾರ ಅಗತ್ಯ ಎಂದು ಕರೆನೀಡಿದರು.
   ಸಮಾರಂಭದಲ್ಲಿ ಉಪಸ್ಥಿತರಿದ್ದು ಆಶೀರ್ವಚನಗೈದ ಮಾಣಿಲ ಶ್ರೀಧಾಮದ ಮೋಹನದಾಸ ಪರಮಹಂಸ ಶ್ರೀಗಳು, ಪ್ರಕೃತಿಯಿಂದ ವಿಮುಖರಾಗಿ ಮನುಷ್ಯ ಜೀವಿಸಲು ಸಾಧ್ಯವಿಲ್ಲ. ಜೀವರಾಶಿಗಳನ್ನು ಪ್ರೀತಿಸುವುದನ್ನು ರೂಢಿಸಿಕೊಂಡಾಗ ಪ್ರಾಕೃತಿಕ ವಿಕೋಪಗಳಿಂದ ದೂರವಿರಬಹುದೆಂದು ತಿಳಿಸಿದ ಅವರು ಕೇರಳ ಹಾಗೂ ಕೊಡಗು ಜಿಲ್ಲೆಗಳ ಘಟನೆಗಳು ನಮಗೆ ಮುನ್ನೆಚ್ಚರಿಕೆಯಾಗಿದೆ ಎಂದು ತಿಳಿಸಿದರು. ಪಶ್ಚಿಮ ಘಟ್ಟವನ್ನು ಉಳಿಸಿಕೊಳ್ಳದೆ ವ್ಯಾವಹಾರಿಕವಾಗಿ ಬಳಸಿಕೊಳ್ಳುವುದರಿಂದ ದೊಡ್ಡ ವಿನಾಶ ಮುಂದಾಗುವುದು ಎಂದು ಹೇಳಿದ ಅವರು, ರಾಷ್ಟ್ರ ಮೂಲ ಪರಿಕಲ್ಪನೆಯಾದ ದಾನ ಪರಂಪರೆಯನ್ನು ಗೌರವಿಸಿ ಮುಂದುವರಿಸಬೇಕು ಎಂದು ಕರೆನೀಡಿದರು.
   ಕೊಂಡೆವೂರಿನ ಶ್ರೀಯೋಗಾನಂದ ಸರಸ್ವತೀ ಶ್ರೀಗಳು ಮಾತನಾಡಿ, ಸಹೃದಯರ ನೆರವಿನೊಂದಿಗೆ ಶ್ರೀಮಠದಲ್ಲಿ ಕೈಗೊಳ್ಳಲಾಗುವ ವಿವಿಧ ಯೋಜನೆಗಳು ಲೋಕಕಲ್ಯಾಣಾರ್ಥವಾಗಿದ್ದು, ಪ್ರತಿಯೊಬ್ಬರ ಸಹಕಾರದಿಂದ ಸಾಧ್ಯವಾಗಿದೆ. ಜಗತ್ತಿನ ಪ್ರತಿಯೊಂದು ಜೀವಜಾಲಕ್ಕೂ ಬದುಕುವ ಸ್ವಾತಂತ್ರ್ಯವಿದ್ದು ಎಲ್ಲವುಗಳೊಂದಿಗೆ ಒಂದಾಗಿ ಬದುಕುವುದನ್ನು ಮಾನವ ಮರೆಯಬಾರದು ಎಂದು ತಿಳಿಸಿದರು. ವರ್ತಮಾನದ ಆವಶ್ಯಕತೆಗಳಿಗೆ ಅನುಗುಣವಾಗಿ ನಮ್ಮ ಚಿಂತನೆಗಳು ಬದಲಾಗಬೇಕು. ಜಗತ್ತು ಹತ್ತಿರವೆಂದು ಬೀಗುವ ನಾವು ನಮ್ಮೊಡನಿರುವವರಿಗೂ ಧ್ವನಿಯಾಗಿ ಬದಲಾಗಬೇಕು. ಸಮಾಜದಲ್ಲಿ ಸಂಕಷ್ಟದಲ್ಲಿರುವ ಅಸಂಖ್ಯರ ಪೈಕಿ ಒಬ್ಬರಿಗಾದರೂ ನಾವು ಒದಗಿಸುವ ಕೈಲಾದ ಸಹಾಯ ಸಾರ್ಥಕತೆಗೆ ಕಾರಣವಾಗುತ್ತದೆ. ಈ ನಿಟ್ಟಿನಲ್ಲಿ ಸಹಸ್ರ ಅಕ್ಷ ದಾನ ಸಂಕಲ್ಪ ಯೋಜನೆ ಎಲ್ಲೆಡೆ ವ್ಯಾಪಿಸಿ ಕತ್ತಲಲ್ಲಿರುವವರಿಗೆ ಬೆಳಕು ನೀಡುವಲ್ಲಿ ಸಫಲವಾಗಲಿ ಎಂದು ತಿಳಿಸಿದರು. ಈ ಸಂದರ್ಭ 2019 ರ ಫೆ. 18 ರಿಂದ 24ರ ವರೆಗೆ ನಡೆಯಲಿರುವ ವಿಶ್ವಜಿತ್ ಅತಿರಾತ್ರ ಸೋಮಯಾಗದ ನಿರ್ವಹಣೆಗಾಗಿ ಸಮಿತಿಯನ್ನು ಶ್ರೀಗಳು ಘೋಷಿಸಿದರು. ಕೇಂದ್ರ ಸಚಿವ ಶ್ರೀಪಾದ ಯಸ್ಸೋ ನಾಯಕ್(ಗೌರವಾಧ್ಯಕ್ಷ), ಕೆ.ಡಿ ಶೆಟ್ಟಿ(ಅಧ್ಯಕ್ಷ), ಮಹಾಬಲೇಶ್ವರ ಭಟ್ ಎಡಕ್ಕಾನ ಹಾಗೂ ಸುಧೀರ್ ಕುಮಾರ್ ಶೆಟ್ಟಿ ಎಣ್ಮಕಜೆ(ಪ್ರಧಾನ ಕಾರ್ಯದಶರ್ಿ) ಯವರನ್ನು ಆಯ್ಕೆಗೊಳಿಸಿರುವುದಾಗಿ ಶ್ರೀಗಳು ತಿಳಿಸಿದರು.
   ವಿದ್ವಾನ್ ಸುಬ್ರಹ್ಮಣ್ಯ ಅವಧಾನಿ ಗುಂಡಿಬೈಲು ಉಪಸ್ಥಿತರಿದ್ದು ಮಾತನಾಡಿದರು. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ದಕ್ಷಿಣ ಕನ್ನಡ, ಕಾಸರಗೋಡು ವಲಯ ನಿದರ್ೇಶಕ ಚಂದ್ರಶೇಖರ ಕೆ, ಉದ್ಯಮಿ ಭಾಸ್ಕರ ಶೆಟ್ಟಿ, ಬೆಂಗಳೂರಿನ ಸ್ಪಾನ್ ಪ್ರಿಂಟರ್ಸ್ನ ಡಾ.ಕೆ.ನಾರಾಯಣ, ಉದ್ಯಮಿ ದಯಾನಂದ ಬಂಗೇರ, ಕಾಪಿಕ್ಕಾಡು ಉಮಾಮಹೇಶ್ವರ ಕ್ಷೇತ್ರದ ಆಡಳಿತ ಮೊಕ್ತೇಸರ ಎ.ಜೆ.ಶೇಖರ್, ಲಕ್ಷ್ಮಣರಾಮ್ ಬೆಂಗಳೂರು, ಸುನಿತಾ ಅಶ್ವಿನ್ ಕುಮಾರ್ ಚೌಬೆ, ಡಾ.ಮೋಹನ್ ರಾಜ್ ಬೆಂಗಳೂರು ಉಪಸ್ಥಿತರಿದ್ದು ಶುಭಹಾರೈಸಿದರು.
  ನಿಟ್ಟೆಯ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ಡಾ.ವಿಜ್ ಪೈ ನೇತ್ರದಾನದ ವೈದ್ಯಕೀಯ ಮಹತ್ವ ಮತ್ತು ಕ್ರಮಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು. ವೇದಿಕೆಯಲ್ಲಿ ಹಿರಿಯ ನೇತ್ರ ತಜ್ಞ ಡಾ.ಸಿ.ಆರ್ ಕಾಮತ್ ಅವರನ್ನು ತಮ್ಮ ಸುಧೀರ್ಘ ಕಾಲದ ನೇತ್ರ ಚಿಕಿತ್ಸಾ ಕ್ಷೇತ್ರದ ಸೇವೆಗಾಗಿ ಸನ್ಮಾನಿಸಿ ಗೌರವಾಭಿನಂದನೆ ಸಲ್ಲಿಸಲಾಯಿತು.
   ಸಹಸ್ರಾಕ್ಷ ದಾನ ಸಂಕಲ್ಪ ಅಭಿಯಾನದಲ್ಲಿ ಪ್ರೇರಣೆಯಾಗಿ ಮುಂದೆ ಬಂದ ಹಿರಿಯ ನಾಗರಿಕರಾದ ಕಮಲಾ ಶೆಟ್ಟಿ, ಮೋಹನದಾಸ್ ಕೊಂಡೆವೂರು, ಶಶಿಧರ ಶೆಟ್ಟಿ ಮುಟ್ಟ ದಂಪತಿಗಳು ಹಾಗೂ ಎಂ.ಭಾಸ್ಕರ ಆಚಾರ್ಯ ಕೊಂಡೆವೂರು ಅವರಿಗೆ ಸಚಿವರು ಸಾಂಕೇತಿಕವಾಗಿ ಪ್ರಮಾಣಪತ್ರ ವಿತರಿಸಿದರು.
  ಸಮಾರಂಭದಲ್ಲಿ ಸಂಪ್ರೀತಾ ಮಯ್ಯ ಪ್ರಾರ್ಥನೆ ಹಾಡಿದರು. ಮಾಜೀ ವಿಧಾನ ಪರಿಷತ್ತು ಸದಸ್ಯ ಮೋನಪ್ಪ ಭಂಡಾರಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಅರವಿಂದಾಕ್ಷ ಭಂಡಾರಿ ವಂದಿಸಿದರು. ನ್ಯಾಯವಾದಿ ಗಂಗಾಧರ ಆಚಾರ್ಯ ಕೊಂಡೆವೂರು ಕಾರ್ಯಕ್ರಮ ನಿರೂಪಿಸಿದರು. 
    ಗಾಯತ್ರೀ ಮಂಟಪ ಲೋಕಾರ್ಪಣೆ:
   ಕಾರ್ಯಕ್ರಮದಲ್ಲಿ ಮಾಣಿಲ ಶ್ರೀಧಾಮದ ಮೋಹನದಾಸ ಪರಮಹಂಸ ಶ್ರೀಗಳು ಕೊಂಡೆವೂರು ಆಶ್ರಮದ ನೂತನ ಗಾಯತ್ರೀ ಮಂಟಪ ಉದ್ಘಾಟಿಸಿದರು.
   ಕೇಂದ್ರ ಸಚಿವ ಅಶ್ವಿನ್ ಕುಮಾರ್ ಚೌಬೆ ದಂಪತಿಗಳನ್ನು ಆಶ್ರಮದ ವತಿಯಿಂದ ಗೌರವಿಸಲಾಯಿತು. ಈ ಸಂದರ್ಭ ಸಚಿವ ಚೌಬೆ ಅವರು ಮಾತನಾಡಿ ಕೇಂದ್ರ ಆಯುಷ್ ಸಚಿವ ಶ್ರೀಪಾದ್ ಎಸ್ಸೋ ನಾಯಕ್ ಅವರ ಸಲಹೆಯಂತೆ ತಾನು ಕೊಂಡೆವೂರು ಆಶ್ರಮಕ್ಕೆ ಆಗಮಿಸಿದ್ದು, ಇಲ್ಲಿಯ ವಾತಾವರಣ,ಕಾರ್ಯಚಟುವಟಿಕೆಗಳು ತನ್ನನ್ನು ಬೆರಗುಗೊಳಿಸಿದೆ. ಇಂತಹ ಕಾರ್ಯಕ್ರಮಗಳು ವಿಸ್ತರಿಸಲ್ಪಡಬೇಕು ಎಂದು ತಿಳಿಸಿದರು. ಜೊತೆಗೆ ತನಗೆ ನೀಡಲಾದ ಅಭಿನಂದನೆಯ ಹಾರವನ್ನು ಶ್ರೀಪಾದ ಎಸ್ಸೋ ನಾಯಕ್ ಅವರ ಕೊರಳಿಗೆ ಹಾಕಿ ಅಪ್ಪಿಕೊಂಡರು.
    ಸಚಿವ ಅಶ್ವಿನ್ ಕುಮಾರ್ ಅವರು ಕೇರಳದ ಪ್ರವಾಹದ ಬಗ್ಗೆ ಮಾತನಾಡಿ ಕೇಂದ್ರ ಸರಕಾರ ಕೇರಳವನ್ನು ಸಂಪೂರ್ಣ ಸಹಾಯ ಒದಗಿಸಲಿದೆ, ನಾಶ ನಷ್ಟದ ಬಗ್ಗೆ ಕಳವಳ ಬೇಡ ಎಂದು ಭರವಸೆ ನೀಡಿದರು.
   ಸಚಿವ ಅಶ್ವಿನ್ ಕುಮಾರ್ ಚೌಬೆ ತಮ್ಮ ಉದ್ಘಾಟನಾ ಭಾಷಣ ಆರಂಭಿಸುವ ಮೊದಲು ಶ್ರೀಗಾಯತ್ರೀ ಮಂತ್ರೋಚ್ಚಾರದ ಮೂಲಕ ಪ್ರೇಕ್ಷಕರ ಕರತಾಡವಕ್ಕೆ ಕಾರಣರಾದರು. ಜೊತೆಗೆ ಆರಂಭದಲ್ಲಿ ಮಲೆಯಾಳದಲ್ಲಿ ಮಾತನಾಡಿ ಓಣಂ ಹಬ್ಬದ ಶುಭಾಶಯ ಕೋರಿದರು. ಕನ್ನಡದಲ್ಲೂ ಅಭಿನಂದಿಸಿ ಮಾತನಾಡಿದರು.
    ಕೇಂದ್ರ ಸಚಿವ ಚೌಬೆ ದೇಹದಾನಗೈದ ಮಹಾನ್ ವ್ಯಕ್ತಿಗಳ ಬಗ್ಗೆ ಉಲ್ಲೇಖಿಸುತ್ತ ದಿ. ಸೋಮನಾಥ ಚಟಜರ್ಿ ಹಾಗೂ ಜ್ಯೋತಿಬಸು ಅವರ ಹೆಸರು ಉಲ್ಲೇಖಿಸಿ ಗಮನ ಸೆಳೆದರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries