ಎಣ್ಮಕಜೆ ಗ್ರಾ.ಪಂ. ಮಟ್ಟದ ವಿಶ್ವ ಹಾಲುಣಿಸುವ ಸಾಪ್ತಾಹ ಉದ್ಘಾಟನೆ
ಪೆರ್ಲ: ಎಣ್ಮಕಜೆ ಗ್ರಾ.ಪಂ.ಮಟ್ಟದ ವಿಶ್ವ ಹಾಲುಣಿಸುವ ಸಾಪ್ತಾಹಕ್ಕೆ ಶುಕ್ರವಾರ ಪಂಚಾಯಿತಿ ಸಭಾಂಗಣದಲ್ಲಿ ಚಾಲನೆ ನೀಡಲಾಯಿತು.
ಗ್ರಾ.ಪಂ.ಅಧ್ಯಕ್ಷೆ ರೂಪವಾಣಿ ಆರ್. ಭಟ್ ಉದ್ಘಾಟಿಸಿ, ಆ.1ರಿಂದ 7ರ ತನಕ ಪಂಚಾಯಿತಿಯ ಎಲ್ಲಾ 33 ಅಂಗನವಾಡಿಗಳಲ್ಲಿ ಮೊಲೆ ಹಾಲುಣಿಸುವ ವಾರಾಚರಣೆ, ಜಾಗೃತಿ ಮೂಡಿಸುವ ಮಾಹಿತಿ ಶಿಬಿರ ನಡೆಯುತ್ತಿದ್ದು ಪಂಚಾಯಿತಿ ವ್ಯಾಪ್ತಿಯ ಎಲ್ಲರೂ ಪ್ರಯೋಜನ ಪಡೆದುಕೊಳ್ಳುವಂತೆ ತಿಳಿಸಿದರು. ಅಂಗನವಾಡಿ ಮುಖಾಂತರ ಮಕ್ಕಳಿಗೆ, ಹದಿ ಹರೆಯದವರಿಗೆ, ಗಭರ್ಿಣಿಯರಿಗೆ ಅನೇಕ ಯೋಜನೆಗಳನ್ನು ಜಾರಿಗೆ ತರಲಾಗಿದ್ದು ಉತ್ತಮ ರೀತಿಯಲ್ಲಿ ಸದುಪಯೋಗ ಪಡಿಸಿಕೊಳ್ಳುವಂತೆ ವಿನಂತಿಸಿದರು.
ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷೆ ಜಯಶ್ರೀ ಕುಲಾಲ್, ಆರೋಗ್ಯ ವಿದ್ಯಾಭ್ಯಾಸ ಸ್ಥಾಯೀ ಸಮಿತಿ ಅಧ್ಯಕ್ಷೆ ಆಯಿಷಾ ಎ.ಎ., ಸದಸ್ಯೆಯರಾದ ಪ್ರೇಮಾ, ಚಂದ್ರಾವತಿ ಮತ್ತಿತರರು ಉಪಸ್ಥಿತರಿದ್ದರು. ಆರೋಗ್ಯ ಕೇಂದ್ರದ ಜೆ ಎಚ್ ಪಿ ಎನ್ ತರಗತಿ ನಡೆಸಿದರು.ಐಸಿಡಿಎಸ್ ಮೇಲ್ವಿಚಾರಕಿ ಬಿಂದು ಸ್ವಾಗತಿಸಿ, ವಂದಿಸಿದರು.