HEALTH TIPS

No title

                          ಯುವ ಬರಹಗಾರರ ಒಕ್ಕೂಟದ ಜಿಲ್ಲಾ ಘಟಕದ ಸಭೆ
     ಬದಿಯಡ್ಕ : ಕನ್ನಡಿಗರು ಜಿಲ್ಲೆಯಲ್ಲಿರುವ ಅನೇಕ ಕನ್ನಡ ಪರ ಸಂಘಟನೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಹಾಗೂ ಬೆಂಬಲಿಸುವ ಮೂಲಕ ಕನ್ನಡ ಉಳಿಸುವ ಕಾರ್ಯ ಮಾಡಬೇಕು. ಕನ್ನಡ ಭಾಷೆಯ ವಿರುದ್ಧ ನಡೆಯುವ ಶೋಷಣೆಯನ್ನು ನಿವಾರಿಸಲು ಕನ್ನಡಪರ ಸಂಘಟನೆಗಳೂ ಕೂಡಾ ಒಗ್ಗಟ್ಟಿನ ಮೂಲಕ ಪ್ರಯತ್ನಿಸಬೇಕು. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಪರ ಹೋರಾಟದಲ್ಲಿ ಕ್ರಿಯಾತ್ಮಕವಾಗಿ ಪಾಲ್ಗೊಳ್ಳಬೇಕು ಎಂದು ನಿವೃತ್ತ ಪ್ರಾಂಶುಪಾಲ ಡಾ. ಬೇ ಸಿ ಗೋಪಾಲಕೃಷ್ಣ ಭಟ್ ಹೇಳಿದರು.
    ಅವರು ಬದಿಯಡ್ಕದ ನವಜೀವನ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ನಡೆದ ಕನರ್ಾಟಕ ರಾಜ್ಯ ಯುವ ಬರಹಗಾರರ ಒಕ್ಕೂಟದ ಕಾಸರಗೋಡು ಘಟಕದ ಪದಾಧಿಕಾರಿಗಳ ವಿಶೇಷ ಸಭೆಯಲ್ಲಿ ಮಾತನಾಡಿದರು.
   ಸಭೆಯ ಅಧ್ಯಕ್ಷತೆಯನ್ನು ಸಂಘಟನೆಯ ಅಧ್ಯಕ್ಷೆ ಪುಂಡೂರು ಪ್ರಭಾವತಿ ಕೆದಿಲಾಯ ವಹಿಸಿ ಮಾತನಾಡಿ, ಬೆಂಗಳೂರಿನ ಕೆದಿಲಾಯ ಪ್ರತಿಷ್ಠಾನವು ಒಕ್ಕೂಟದ ಕಾಸರಗೋಡು ಘಟಕದ ಕಾರ್ಯಕ್ರಮಗಳಿಗೆ ಬೆಂಬಲ ಷೋಷಿಸಿದ್ದು, ಮುಂದಿನ ದಿನದಲ್ಲಿ ಅನೇಕ ಸಾಹಿತ್ಯಪರ ಕಾರ್ಯಕ್ರಮಗಳನ್ನು ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಲಾಗುವುದು ಎಂದರು.
   ಸಭೆಯಲ್ಲಿ ಸಂಘಟನೆಯ ಮುಖಂಡರಾದ ಜಯ ಮಣಿಯಂಪಾರೆ, ರಂಗಶರ್ಮ ಉಪ್ಪಂಗಳ, ಆನಂದ ರೈ ಅಡ್ಕಸ್ಥಳ, ಕೆ ನರಸಿಂಹ ಭಟ್ ಏತಡ್ಕ, ಚೇತನಾ ಕುಂಬಳೆ ಮೊದಲಾದವರು ಭಾಗವಹಿಸಿ ಸಲಹೆ ಸೂಚನೆಗಳನ್ನು ನೀಡಿದರು. ಸೆಪ್ಟೆಂಬರ್ ತಿಂಗಳಲ್ಲಿ ಸಂಘಟನೆಯ ಅಧಿಕೃತ ಉದ್ಘಾಟನೆಯು ಬದಿಯಡ್ಕದ ನವಜೀವನ ಪ್ರೌಢಶಾಲೆಯಲ್ಲಿ ಕನ್ನಡ ಕವಿಗೋಷ್ಠಿ ಜೊತೆ ನಡೆಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಶ್ಯಾಮಲಾ ರವಿರಾಜ್ ಪ್ರಾಥರ್ಿಸಿದರು. ಜ್ಯೋತ್ಸ್ನಾ ಎಸ್ ಕಡಂದೇಲು ಸ್ವಾಗತಿಸಿ, ಜಯ ಮಣಿಯಂಪಾರೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಸಂಘಟನೆಯ ಮುಂದಿನ ಸಭೆಯು ಆಗಸ್ಟ್ 11ರಂದು ಬೆಳಗ್ಗೆ 10 ಗಂಟೆಗೆ ಬದಿಯಡ್ಕದ ಮೇಲಿನಪೇಟೆಯಲ್ಲಿರುವ ಪರಮ್ ಕಂಪ್ಯೂಟರ್ ಶಿಕ್ಷಣ ಸಂಸ್ಥೆಯಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
   

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries