HEALTH TIPS

No title

             ಸಂಸ್ಕಾರ, ಸಂಸ್ಕೃತಿಗಳ ವಾರೀಸುದಾರರಾಗೋಣ-ಎ.ಸದಾನಂದ ಶೆಟ್ಟಿ
         ವಕರ್ಾಡಿ ಸುಂಕದಕಟ್ಟೆಯಲ್ಲಿ  ಹಮ್ಮಿಕೊಳ್ಳಲಾದ ಆಟಿಡೊಂಜಿ ಕೂಟ ಕಾರ್ಯಕ್ರಮ 
     ಮಂಜೇಶ್ವರ: ಬಂಟರ ಸಂಘ ವಕರ್ಾಡಿ ವಲಯ ಹಾಗೂ ಗ್ರಾಮ ಸಮಿತಿಗಳ ಜಂಟಿ ಆಶ್ರಯದಲ್ಲಿ  ವಕರ್ಾಡಿ ಸುಂಕದಕಟ್ಟೆ  ಕೋಳ್ಯೂರು ಆಡಿಟೋರಿಯಂನಲ್ಲಿ  ಭಾನುವಾರ ಜರಗಿದ ಆಟಿಡೊಂಜಿ ಕೂಟ ಕಾರ್ಯಕ್ರಮವು ಸಂಭ್ರಮ ಸಡಗರ ಹಾಗೂ ವಿಜೃಂಭಣೆಯಿಂದ ಜರಗಿತು.
    ಈ ಬಗ್ಗೆ  ನಡೆದ ಸಭಾ ಕಾರ್ಯಕ್ರಮದಲ್ಲಿ  ಇಂಟರ್ ನ್ಯಾಶನಲ್ ಬಂಟ್ಸ್  ವೆಲೇರ್ ಟ್ರಸ್ಟ್ನ ಅಧ್ಯಕ್ಷ  ಮತ್ತು  ಮಂಗಳೂರು ಶ್ರೀದೇವಿ ಎಜ್ಯುಕೇಶನಲ್ ಟ್ರಸ್ಟ್  ಸಮೂಹ ಸಂಸ್ಥೆಗಳ ಅಧ್ಯಕ್ಷ  ಎ.ಸದಾನಂದ ಶೆಟ್ಟಿ  ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ವರ್ತಮಾನವನ್ನು  ಕರೆಯುವಂತಾದ್ದು , ಕಾಯಕದಲ್ಲಿ  ಬರೆಯುವಂತಾದ್ದು  ನಿಜವಾದ ಆರೋಗ್ಯದ ಗುಟ್ಟು. ಕೆಸರುಗದ್ದೆಯ ಆಟಕೂಟಗಳು ಹಿಂದಿನ ವೈಭವವನ್ನು  ನೆನಪಿಸಿ ಇಂದಿನದನ್ನು  ಉಳಿಸಿ ಮುಂದಿನ ಪೀಳಿಗೆಗಾಗಿ ಸೇರಿಸಿಕೊಡುವಂತಹ ವ್ಯವಸ್ಥೆಯಾಗಿವೆ. ಆಟಿ ತಿಂಗಳು (ಕರ್ಕಟ ಮಾಸ) ಅತ್ಯಂತ ಮಹತ್ವದ್ದಾಗಿದೆ ಎಂದರು.
   ತಾಯ್ತಿನವು ಹಿಂದು ಧರ್ಮದ ಮೂಲಬೇರು. ಅದು ಗಟ್ಟಿಯಾಗದೆ ಧರ್ಮ ಕರ್ಮದಲ್ಲಿ  ಸತ್ವ ಉಳಿಯುವುದಿಲ್ಲ. ಅಲ್ಲದೆ ಗಟ್ಟಿತನ ಬೆಳೆಯುವುದಿಲ್ಲ. ಅದರ ಮಹತ್ವವನ್ನು  ಅರಿತು ಸಮಾಜಮುಖಿ ಕಾರ್ಯದಲ್ಲಿ  ತೊಡಗಿಸಿಕೊಳ್ಳೋಣ. ಇಲ್ಲಿ  ಮಾತೆಯರ ಮಹತ್ತರ ಪಾತ್ರವನ್ನು  ಮರೆಯದಿರೋಣ. ಸಂಸ್ಕಾರ, ಸಂಸ್ಕೃತಿಗಳನ್ನು  ಮುಂದಿನ ಪೀಳಿಗೆಗೆ ತಲುಪಿಸುವಂತಹ ಕಾರ್ಯದಲ್ಲಿ  ವಾರೀಸುದಾರರಾಗೋಣ. ಇಂತಹ ಕಾಯಕದಲ್ಲಿ  ನಾನು ಸದಾ ನಿಮ್ಮೊಂದಿಗಿದ್ದೇನೆ. ಅಲ್ಲದೆ ಮಾರ್ಗದರ್ಶನದಲ್ಲಿ , ಮಮಕಾರದಲ್ಲಿ , ಮುಖಂಡತ್ವದಲ್ಲಿ  ಎಂಬ ನಿಖರ ಮಾತಿನೊಂದಿಗೆ ಕಾರ್ಯಕ್ರಮಕ್ಕೆ ಶುಭಹಾರೈಸಿದರು.
 ವಿವಿಧ ಕ್ಷೇತ್ರಗಳ ಪ್ರಮುಖರಾದ ರಾಜ್ಗೋಪಾಲ ರೈ, ಪಿ.ಆರ್.ಶೆಟ್ಟಿ  ಕುಳೂರು ಪೊಯ್ಯೆಲು, ರಮಾನಾಥ ಶೆಟ್ಟಿ  ಮಂಗಳೂರು, ಮೀರಾ ಆಳ್ವ ಬೇಕೂರು, ಕಾಂತಾಡಿಗುತ್ತು  ಹರೀಶ್ ಪೆರ್ಗಡೆ, ನರೇಂದ್ರ ರೈ ನವದೆಹಲಿ, ದಿಲ್ರಾಜ್ ಆಳ್ವ ಮಂಗಳೂರು, ಸದಾನಂದ ಶೆಟ್ಟಿ  ತಲೇಕಳ, ರಾಜಿತ್ ರೈ ಕರಂಬಾರು ಬೆಳ್ತಂಗಡಿ, ಮಂಜುನಾಥ ಶೆಟ್ಟಿ  ಪಾತೂರು ಬಾಕ್ರಬೈಲು, ನಿತೇಶ್ ಶೆಟ್ಟಿ  ಎಕ್ಕಾರು, ಚಲನಚಿತ್ರ ನಟಿಯರಾದ ಪೂಜಾ ಶೆಟ್ಟಿ , ನಿರೀಕ್ಷಾ  ಶೆಟ್ಟಿ , ವಕರ್ಾಡಿ ಬಂಟರ ಸಂಘದ ಮಹಿಳಾ ಘಟಕದ ಅಧ್ಯಕ್ಷೆ  ಆಶಾ ದಿಲೀಪ್ ರೈ ಸುಳ್ಯಮೆ ಮತ್ತು  ಎಲ್ಲ  ಗ್ರಾಮ ಸಮಿತಿಗಳ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
  ವಿವಿಧ ವಲಯಗಳ ಸಾಧಕರಾದ ಎ.ಸದಾನಂದ ಶೆಟ್ಟಿ , ವಿಠಲ ಶೆಟ್ಟಿ  ಪಲ್ಲೆದಪಡ್ಪು , ಸಂಜೀವ ಶೆಟ್ಟಿ  ಕೊಡ್ಲಮೊಗರು, ವಸಂತ ಭಂಡಾರಿ ಕಯ್ಯ, ನಾರಾಯಣ ಶೆಟ್ಟಿ  ಕಿನ್ಯಗುತ್ತು , ಕಾಂತಾಡಿಗುತ್ತು  ಹರೀಶ್ ಪೆರ್ಗಡೆ ಇವರನ್ನು  ಸನ್ಮಾನಿಸಲಾಯಿತು. ವಿಖ್ಯಾತ್ ರೈ ಅರಿಬೈಲು ಮತ್ತು  ಪ್ರತಾಪಚಂದ್ರ ಶೆಟ್ಟಿ  ಹಾಗೂ ಇತರ ಐದು ಮಂದಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು.
   ಬಂಟರ ಸಂಘದ ವಕರ್ಾಡಿ ವಲಯದ ಅಧ್ಯಕ್ಷ  ದೇವಪ್ಪ  ಶೆಟ್ಟಿ  ಚಾವಡಿಬೈಲುಗುತ್ತು  ಸಮಾರಂಭದ ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು.  ರವೀಂದ್ರನಾಥ ಶೆಟ್ಟಿ  ಕಪರ್ಿಕಾರು ಬಾಕ್ರಬೈಲು ಸ್ವಾಗತಿಸಿ, ಬಂಟರ ಸಂಘದ ವಕರ್ಾಡಿ ವಲಯ ಕಾರ್ಯದಶರ್ಿ ರವಿಚಂದ್ರ ಶೆಟ್ಟಿ  ಅರಿಬೈಲು ಕುತ್ತನಾಡಿ ವರದಿ ವಾಚಿಸಿದರು. ಜಯಂತ ಶೆಟ್ಟಿ  ಪಾವಳ ವಂದಿಸಿದರು. ಶಿಲ್ಪಾ  ಶೆಟ್ಟಿ  ಕೊಡ್ಲಮೊಗರು ಪ್ರಾಥರ್ಿಸಿದರು. ಲೋಕೇಶ್ ಶೆಟ್ಟಿ  ಬಾಕ್ರಬೈಲು ಕಾರ್ಯಕ್ರಮ ನಿರೂಪಿಸಿದರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries