ರಾಜಕೀಯ ಡೊಂಬರಾಟ-ಸಿದ್ದಾಂತಗಳ ಕೊಲೆ
ಅವಿಶ್ವಾಸ ಗೊತ್ತುವಳಿಗೆ ಜಯ : ಬಿಜೆಪಿಗೆ ಅಧ್ಯಕ್ಷ ಸ್ಥಾನ ನಷ್ಟ
ಪೆರ್ಲ: ಭಾರೀ ಕುತೂಹಲ ಮೂಡಿಸಿದ್ದ ಎಣ್ಮಕಜೆ ಗ್ರಾ.ಪಂ. ಅಧ್ಯಕ್ಷರ ವಿರುದ್ಧ ಯುಡಿಎಫ್ ಬುಧವಾರ ಮಂಡಿಸಿದ ಅವಿಶ್ವಾಸ ಗೊತ್ತುವಳಿಗೆ ಜಯವಾಗಿದ್ದು, ಗ್ರಾಮ ಪಂಚಾಯತ್ ಅಧ್ಯಕ್ಷೆ ರೂಪವಾಣಿ ಆರ್.ಭಟ್ ಅಧ್ಯಕ್ಷ ಸ್ಥಾನವನ್ನು ಕಳೆದುಕೊಂಡಿದ್ದಾರೆ.
ಗ್ರಾಮ ಪಂಚಾಯತ್ ಅಧ್ಯಕ್ಷರು ಸದಸ್ಯರಲ್ಲಿ ಚಚರ್ೆ ನಡೆಸದೆ ಏಕಪಕ್ಷೀಯವಾಗಿ ತೀಮರ್ಾನ ಕೈಗೊಳ್ಳುತ್ತಿದ್ದಾರೆ, ಎಲ್ಲಾ ಯೋಜನೆ, ಅಭಿವೃದ್ಧಿ ಕಾರ್ಯಗಳನ್ನು ತಾವು ಮಾಡಿಸಿದುದಾಗಿ ಹೇಳುತ್ತಿದ್ದಾರೆ. ಅವರ ವಾಡರ್್ಗಳಿಗೆ ಮಾತ್ರ ಯೋಜನೆಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಬೋಡರ್್ ಸಭೆಗಳನ್ನು ಅರ್ಧದಲ್ಲೇ ಮೊಟಕುಗೊಳಿಸಿ ಹೋಗುತ್ತಾರೆ ಎಂದು ಆರೋಪಿಸಿ ಅವಿಶ್ವಾಸ ಗೊತ್ತುವಳಿಯನ್ನು ಮಂಡಿಸಲಾಗಿತ್ತು.
ಗ್ರಾಮ ಪಂಚಾಯತ್ ಅಧ್ಯಕ್ಷರ ವಿರುದ್ಧ ಕಾಂಗ್ರೆಸ್ನ ಶಾರದಾ ವೈ. ಅವಿಶ್ವಾಸ ಗೊತ್ತುವಳಿಗೆ ನೋಟೀಸ್ ನೀಡಿದ್ದರು. ಚಚರ್ೆಯ ಬಳಿಕ ಮತದಾನದಲ್ಲಿ ಅವಿಶ್ವಾಸ ಗೊತ್ತುವಳಿ ಪರವಾಗಿ ಯುಡಿಎಫ್ 7, ಸಿಪಿಐ(ಎಂ) 2, ಸಿಪಿಐ ಪಕ್ಷದ ಓರ್ವ ಸದಸ್ಯರ ಒಟ್ಟು 10 ಸದಸ್ಯರು ಮತ ಚಲಾಯಿಸಿದರು. ಇದರಿಂದ 17 ರಲ್ಲಿ 7 ಮಂದಿ ಸದಸ್ಯರನ್ನು ಹೊಂದಿರುವ ಬಿಜೆಪಿ ಸೋಲು ಅನುಭವಿಸಬೇಕಾಯಿತು. ಕಳೆದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ವೇಳೆ ಎಲ್ಡಿಎಫ್ ಮತದಾನದಲ್ಲಿ ಪಾಲ್ಗೊಂಡಿರಲಿಲ್ಲ. ಇದರಿಂದ ಬಿಜೆಪಿ, ಯುಡಿಎಫ್ ತಲಾ 7 ಸ್ಥಾನಗಳನ್ನು ಪಡೆದಿದ್ದ ಹಿನ್ನೆಲೆಯಲ್ಲಿ ಚೀಟಿ ಎತ್ತಿ ಅದೃಷ್ಟ ಪರಿಶೀಲಿಸಿದಾಗ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳು ಬಿಜೆಪಿಗೆ ಲಭಿಸಿತ್ತು. ಈ ಹಿಂದೆ 2016 ರಲ್ಲಿ ಯುಡಿಎಫ್ ಗ್ರಾಮ ಪಂಚಾಯತ್ ಆಡಳಿತ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಿದ್ದು ಸಿಪಿಐ(ಎಂ)ನ ಇಬ್ಬರು ಸದಸ್ಯರು ಮತದಾನದಲ್ಲಿ ಭಾಗವಹಿಸದೆ ಅವಿಶ್ವಾಸ ನಿರ್ಣಯಕ್ಕೆ ಸೋಲುಂಟಾಗಿತ್ತು. ಆದರೆ ಈ ಬಾರಿ ಯುಡಿಎಫ್ ಹಾಗೂ ಎಲ್ಡಿಎಫ್ ಒಗ್ಗೂಡಿದ ಕಾರಣ ಎರಡೂವರೆ ವರ್ಷಗಳ ಬಿಜೆಪಿ ಆಡಳಿತ ಕೊನೆಗೊಂಡತ್ತಾಗಿದೆ.
ಅವಿಶ್ವಾಸ ಗೊತ್ತುವಳಿಯ ಮಂಡನೆಯ ಹಿನ್ನೆಲೆಯಲ್ಲಿ ವಿದ್ಯಾನಗರ ವೃತ್ತ ನಿರೀಕ್ಷಕ ಬಾಬು ಪೆರಿಂಗೋತ್ತ್, ಬದಿಯಡ್ಕ ಠಾಣಾಧಿಕಾರಿ ಮೆಲ್ಬಿನ್ ಜೋಸ್, ಆದೂರು ಹೆಚ್ಚುವರಿ ಠಾಣಾಧಿಕಾರಿ ವಿಕ್ರಮನ್ ನೇತೃತ್ವದಲ್ಲಿ ಗ್ರಾಂ ಪಂಚಾಯತ್ ಕಚೇರಿ, ಪೆರ್ಲ ಪೇಟೆ ಗಳಲ್ಲಿ ಪೊಲೀಸ್ ಅಧಿಕಾರಿಗಳ ಬಿಗಿ ಭದ್ರತೆ ಎರ್ಪಡಿಸಲಾಗಿತ್ತು. ಗ್ರಾಮ ಪಂಚಾಯತ್ ಉಪಾಧ್ಯಕ್ಷ ಪುಟ್ಟಪ್ಪ ಖಂಡಿಗೆ ವಿರುದ್ಧ ಮುಸ್ಲಿಂ ಲೀಗ್ ಸದಸ್ಯ ಸಿದ್ದಿಕ್ ವಳಮೊಗರು ನೋಟೀಸು ನೀಡಿದ್ದು ಅವಿಶ್ವಾಸ ಗೊತ್ತುವಳಿ ಮಂಡನೆ ನಾಳೆ(ಗುರುವಾರ)ನಡೆಯಲಿದೆ. ನೂತನ ಅಧ್ಯಕ್ಷರ ಆಯ್ಕೆಯ ಬಗ್ಗೆ ಪ್ರತಿ ಪಕ್ಷಗಳು ನಿಲುವು ವ್ಯಕ್ತ ಪಡಿಸಿಲ್ಲ.
ರಾಜಕೀಯ ಸಿದ್ದಾಂತ-ರಕ್ತಸಿಕ್ತತೆ ಧೂಳೀಪಟ
ಎಣ್ಮಕಜೆ ಗ್ರಾ.ಪಂ. ನಲ್ಲಿ ಬುಧವಾರ ಮಂಡನೆಯಾದ ಅವಿಶ್ವಾಸ ನಿರ್ಣಯ, ಯುಡಿಎಫ್-ಎಲ್ಡಿಎಫ್ ಜೊತೆಯಾಗಿ ಗ್ರಾ.ಪಂ. ಆಡಳಿತದ ವಿರುದ್ದ ಹೂಡಿದ ಗೊತ್ತುವಳಿಗಳು ರಾಜಕೀಯ ಸಿದ್ದಾಂತದ ನಾಟಕೀಯತೆ ಎಂದು ಬಿಂಬಿತವಾಯಿತು. ಯುಡಿಎಫ್ನ ಪ್ರಬಲ ಪಕ್ಷವಾದ ಕಾಂಗ್ರೆಸ್ಸ್ ಹಾಗೂ ಎಲ್ಡಿಎಫ್ ಹಾವು-ಮುಂಗುಸಿಗಳಂತೆ ಎಣ್ಮಕಜೆ ಗ್ರಾ.ಪಂ. ನಲ್ಲಿ ಭಾರೀ ರಾಜಕೀಯ ಹಗೆಗಳ ಪಕ್ಷಗಳಾಗಿದ್ದು, ಆದರೆ ಅವಿಶ್ವಾಸ ನಿರ್ಣಯದ ಸಂದರ್ಭ ಜೊತೆಯಾದುದು ಸಿದ್ದಾಂತ, ನಂಬಿಕೆಗಳ ಧೂಳೀಪಟ ಎಂದು ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ.
ವರ್ಷಗಳ ಹಿಂದೆ ಯುಡಿಎಫ್ ಕಾರ್ಯಕರ್ತನೋರ್ವನನ್ನು ಎಲ್ಡಿಎಫ್ ಮುಖಂಡರು ಕೊಚ್ಚಿಕೊಲೆಗೈದ ನಾಟಕೀಯ ವಿದ್ಯಮಾನಗಳ ಬಳಿಕ ಎಣ್ಮಕಜೆ ಗಡಿ ಗ್ರಾ.ಪಂ.ನ ರಾಜಕೀಯ ಗತಿ ಬದಲಾಗಿತ್ತು.ಕೊಲೆಗೈದರೆಂದು ಆಪಾದಿತರಾಗಿ ಜೈಲು ಸೇರಿ ಇತ್ತೀಚೆಗೆ ಜಾಮೀನಿನಲ್ಲಿ ಬಿಡುಗಡೆಗೊಂಡ ಆರೋಪಿತರನ್ನು ಮತ್ತೆ ಉಚ್ಚ ನ್ಯಾಯಾಲಯದ ಮೂಲಕ ಜೈಲು ಪಾಲಾಗಿಸುವೆವು ಎಂದು ಪ್ರಚಾರ ಮಾಡುತ್ತಿರುವ ಯುಡಿಎಫ್ ಇದೀಗ ಅಧಿಕಾರದ ಲಾಲಸೆಗೊಳಗಾಗಿ ಅಪರಾಧಿಗಳ ಪಕ್ಷವನ್ನು ಅಪ್ಪಿಕೊಂಡಿರುವುದು, ತಮ್ಮ ಪಕ್ಷದ ಮುನ್ನೆಲೆಯ ಮುಖಂಡರನ್ನು ವೃಥಾ ಕೊಲೆ ಘಟನೆಯಲ್ಲಿ ಸೇರ್ಪಡೆಗೊಳಿಸಿ ರಾಜಕೀಯ ಆಟಕ್ಕೆ ಹಿಮ್ಮೆಟ್ಟಲು ಯುಡಿಎಫ್ ನಡೆಸುವ ಹುನ್ನಾರ ಖಂಡನಾರ್ಹವೆಂದು ಹೇಳುವ ಎಲ್ಡಿಎಫ್ ಇದೀಗ ಯುಡಿಎಫ್ನೊಂದಿಗೆ ಕೈಜೋಡಿಸಿರುವುದು ಅಧಿಕಾರ ವ್ಯಾಮೋಹದ ಪ್ರತೀಕವೆಂದು ವಿಶ್ಲೇಷಣೆ ತಿಳಿಸುತ್ತದೆ.
ಕೊಲೆಗೈಯ್ಯಲ್ಪಟ್ಟ ತಮ್ಮ ನಿಷ್ಠಾವಂತ ಕಾರ್ಯಕರ್ತನ ಹೆಸರಲ್ಲಿ ಕಣ್ಣೀರಿಟ್ಟು ವರ್ಷಂಪ್ರತಿ ಸಂಸ್ಮರಣೆ, ನ್ಯಾಯಕ್ಕಾಗಿ ಹೋರಾಡುವೆವು ಎಂದು ಜನರ ಮನಸ್ಸನ್ನು ಸೆಳೆಯುವ ಯುಡಿಎಫ್ನ ತಂತ್ರಗಾರಿಕೆ ಸಾರ್ವಜನಿಕರ ಗೊಂದಲಕ್ಕೆ ಕಾರಣವಾಗಿದ್ದು, ಮುಂದೆ ಇದೀಗ ಜಯಿಸಿರುವ ಪ್ರತಿಪಕ್ಷಗಳು ಬಹುಮತ ಸಾಬೀತುಪಡಿಸುವ ಸಂದರ್ಭದ ನಡೆಗಳು ಕುತೂಹಲ ಮೂಡಿಸಿವೆ