ನಾರಾಯಣ ಗುರು ಯುವವೇದಿಕೆ ವತಿಯಿಂದ ಪ್ಯಾರಾ ಕಮಾಂಡೋ ಸನೀಶ್ರಿಗೆ ಸನ್ಮಾನ
ಮಂಜೇಶ್ವರ: ರೈತ ಮತ್ತು ಯೋಧ ನಮ್ಮ ದೇಶದ ಬೆನ್ನೆಲುಬು ಇವರಿಬ್ಬರೂ ನಮ್ಮ ದೇಶದ ಆಸ್ತಿ ಎಂದು ಬ್ರಹ್ಮಶ್ರೀ ನಾರಾಯಣ ಗುರು ಯುವವೇದಿಕೆ ಕಾಸರಗೋಡು ಜಿಲ್ಲಾ ಸಮಿತಿ ಅಧ್ಯಕ್ಷ ಸಾಮಾಜಿಕ ಧಾಮರ್ಿಕ ಮುಂದಾಳು ಶ್ರೀ ಕೃಷ್ಣ ಶಿವಕೃಪಾ ತಿಳಿಸಿದರು.
ಬ್ರಹ್ಮಶ್ರೀ ನಾರಾಯಣ ಗುರುಗಳ 164 ನೇ ಜನ್ಮ ಜಯಂತಿಯ ಅಂಗವಾಗಿ ನಾರಾಯಣ ಗುರು ಯುವ ವೇದಿಕೆ ಕಾಸರಗೋಡು ಜಿಲ್ಲಾ ಸಮಿತಿ ವತಿಯಿಂದ ಸೋಮವಾರ ವಿಶೇಷ ಪ್ಯಾರಾ ಕಮಾಂಡೋ ಪಡೆಯಲ್ಲಿ ಕರ್ತವ್ಯ ನಿರ್ವಹಿಸುವ ಭಾರತೀಯ ಯೋಧ ಉಪ್ಪಳದ ಸನೀಶ್ ಇವರಿಗೆ ಅವರ ಸ್ವಗೃಹದಲ್ಲಿ ನಡೆದ ಗೌರವಪೂರ್ವಕ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ನಾವೆಲ್ಲರೂ ನೆಮ್ಮದಿಯಿಂದ ಸಂತೋಷದಿಂದ ಜೀವನ ನಡೆಸಬೇಕಾದರೆ ಅದಕ್ಕೆ ಕಾರಣ ನಮ್ಮ ಸೈನಿಕ,ಸಿಯಾಚಿನ್ ಮೊದಲಾದ ಅತ್ಯಂತ ದುರ್ಗಮ ಪ್ರದೇಶಗಳಲ್ಲಿ ಸೇವೆ ಮಾಡುವ ಸೈನಿಕರು ತನ್ನ ಸ್ವಂತ ಹಿತಾಶಕ್ತಿಯನ್ನು ಬದಿಗಿರಿಸಿ ದೇಶವೇ ಮೋದಲು ದೇಶವೇ ಸರ್ವಸ್ವ ಎಂಬುದಾಗಿ ರಾಷ್ಟ್ರರಕ್ಷಣೆಯ ಕಾರ್ಯವನ್ನು ಮಾಡುವ ಸೈನಿಕರು ನಮಗೆಲ್ಲ ಆದರ್ಶ ಎಂದರು. ಸನೀಶ್ ರಂತಹ ಸೈನಿಕರನ್ನು ಪಡೆದಂತಹ ನಾವುಗಳು ಧನ್ಯರು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಯುವವೇದಿಕೆ ಜಿಲ್ಲಾ ಸಮಿತಿ ಪಧಾಧಿಕಾರಿಗಳಾದ ಹರೀಶ್ ಸುವರ್ಣ ಹೊಸಬೆಟ್ಟು,ಕೃಷ್ಣಪ್ಪ ಪೂಜಾರಿ ಬಡಾಜೆ,ಗಣೇಶ್ ಬಡಾಜೆ, ರಮೇಶ್ ಸಂತಡ್ಕ, ರವಿ ಮುಡಿಮಾರು ಮತ್ತು ಯುವಭಾರತಿ ಸದಸ್ಯರಾದ ಲೋಕೇಶ್ ಉಪ್ಪಳ,ದೀಪಕ್ ರಾಜ್ ಉಪಸ್ಥಿತರಿದ್ದರು.
ಯುವಭಾರತಿ ಸಂಘಟನಾ ಕಾರ್ಯದಶರ್ಿ ಜಗದೀಶ್ ಪ್ರತಾಪನಗರ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ರತನ್ ಕುಮಾರ್ ಹೊಸಂಗಡಿ ವಂದಿಸಿದರು.