HEALTH TIPS

No title

                         ಹವ್ಯಕ ಮಂಡಲ ಸಭೆ
      ಬದಿಯಡ್ಕ: ಮುಳ್ಳೇರಿಯ ಹವ್ಯಕ ಮಂಡಲದ ಸಭೆಯು ಪೆರಡಾಲ ವಲಯದ ವ್ಯಾಪ್ತಿಯ ಮಾನ್ಯ ಕಾಮರ್ಾರು ಶ್ರೀ ಮಹಾವಿಷ್ಣು ಕ್ಷೇತ್ರದಲ್ಲಿ ನಡೆಯಿತು. ಮಂಡಲ ಉಪಾಧ್ಯಕ್ಷ ಕುಮಾರ ಸುಬ್ರಹ್ಮಣ್ಯ ಪೈಸಾರಿ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯದಶರ್ಿ ಬಾಲಸುಬ್ರಹ್ಮಣ್ಯ ಸರ್ಪಮಲೆ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ ಬೆಂಗಳೂರು ಗಿರಿನಗರ ಮಠದಲ್ಲಿ ನಡೆಯಲಿರುವ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಚಾತುಮರ್ಾಸ್ಯದ ಕುರಿತು ಮಾಹಿತಿಯನ್ನು ನೀಡಿದರು. ಚಾತುಮರ್ಾಸ್ಯ ವ್ರತದ ಸಂದರ್ಭದಲ್ಲಿ ಶ್ರೀ ಗುರುಗಳ ದರ್ಶನಗೈಯುವ ಸಲುವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತವೃಂದವು ಪಾಲ್ಗೊಳ್ಳಬೇಕೆಂದು ಕರೆಯಿತ್ತ ಅವರು ಗತಸಭೆಯ ವರದಿಯನ್ನು ಮಂಡಿಸಿದರು.
ಕೋಶಾಧ್ಯಕ್ಷ ಸುಬ್ರಹ್ಮಣ್ಯ ಭಟ್ ಗಬ್ಬಲಡ್ಕ `ಲಕ್ಷ್ಮೀ ಲಕ್ಷಣ' ಗಣಕೀಕೃತ ಮಾಧ್ಯಮದಲ್ಲಿ ಎಲ್ಲಾ ವಲಯಗಳ ಸಕ್ರಿಯ ಭಾಗವಹಿಸುವಿಕೆಗೆ ಮೆಚ್ಚುಗೆ ಸೂಚಿಸಿ ಲೆಕ್ಕಪತ್ರಮಂಡಿಸಿದರು. ಡಾ. ಡಿ.ಪಿ. ಭಟ್, ಬಾಲಸುಬ್ರಹ್ಮಣ್ಯ ಭಟ್ ಪರಪ್ಪೆ, ಕೇಶವಪ್ರಸಾದ ಎಡೆಕ್ಕಾನ, ಕುಸುಮ ಪೆಮರ್ುಖ, ದೇವಕಿ ಪನ್ನೆ, ಮಹೇಶ್ ಸರಳಿ, ಸತ್ಯಶಂಕರ ಭಟ್ ಹಿಳ್ಳೆಮನೆ, ವೈ.ಕೆ.ಗೋವಿಂದ ಭಟ್ ಆಯಾ ವಿಭಾಗಗಳ ವರದಿ ನೀಡಿ ಮಾಹಿತಿಗಳನ್ನಿತ್ತರು. ಕೃಷ್ಣಮೋಹನ ಎಡನಾಡು ಉಲ್ಲೇಖ ವಿಭಾಗದ ಮಾಹಿತಿಗಳನ್ನೊದಗಿಸುವುದರೊಂದಿಗೆ ಮುಜುಂಗಾವು ಶ್ರೀ ಭಾರತೀ ನೇತ್ರಚಿಕಿತ್ಸಾಲಯದ ನೇತೃತ್ವದಲ್ಲಿ ನಡೆಯುವ ಉಚಿತ ಶಿಬಿರಗಳ ಕುರಿತು ವಿವರಣೆಗಳನ್ನಿತ್ತರು. ಮಹಾಮಂಡಲ ಉಲ್ಲೇಖ ಪ್ರಧಾನ ಗೋವಿಂದ ಬಳ್ಳಮೂಲೆ ಸದ್ರಿ ವಿಭಾಗದ ಕಾರ್ಯವೈಖರಿಯ ಕುರಿತು ಮಾಹಿತಿಗಳನ್ನಿತ್ತರು.
    ಸಭೆಯಲ್ಲಿ ಉನ್ನತ ಅಂಕ ಗಳಿಸಿದ ವಲಯದ ವಿದ್ಯಾಥರ್ಿಗಳನ್ನು ಗೌರವಿಸಿ ಸನ್ಮಾನಿಸಲಾಯಿತು. ಬಹುನಿರೀಕ್ಷೆಯ ಗೋಸ್ವರ್ಗ ಏಕಪದ ಯೋಜನೆಗೆ ದೇಣಿಗೆ, ಶ್ರೀ ಕ್ಷೇತ್ರದ ಆಡಳಿತ ಸಮಿತಿಯವರಿಂದ ಶ್ರೀಮಠಕ್ಕೆ ಚರಣ ಕಾಣಿಕೆ ಹಾಗೂ ಮೂಲ ಮಠ ಅಶೋಕೆಗೆ ಕಾಮರ್ಾರು ನರಸಿಂಹ ಭಟ್ ಸಹೋದರರಿಂದ ದೇಣಿಗೆಗಳನ್ನು ಈ ಸಂದರ್ಭದಲ್ಲಿ ಸಮರ್ಪಣೆ ಮಾಡಲಾಯಿತು. ಮಂಡಲ ಮಾತೃವಿಭಾಗದಿಂದ ಭಜನಾ ರಾಮಾಯಣ ಮತ್ತು ಕುಂಕುಮಾರ್ಚನೆಯಲ್ಲಿ ಮಹಿಳೆಯರು ಪಾಲ್ಗೊಂಡರು. ಮಂಡಲದ ವತಿಯಿಂದ ಶ್ರೀ ದೇವರಿಗೆ ವಿಶೇಷ ಕಾತರ್ಿಕಪೂಜೆಯನ್ನು ನೆರವೇರಿಸಲಾಯಿತು. ಕಾಮದುಘಾ ಯೋಜನೆಯ ಜೊತೆಕಾರ್ಯದಶರ್ಿ ಮತ್ತು ಮಂಡಲ ಸಂಘಟನಾ ಕಾರ್ಯದಶರ್ಿ ಶ್ರೀಕೃಷ್ಣ ಭಟ್ ಮೀನಗದ್ದೆ ಉಪಸ್ಥಿತರಿದ್ದರು. ರಾಮತಾರಕ ಮಂತ್ರ, ಶಾಂತಿಮಂತ್ರ, ಗೋಸ್ತುತಿ, ಧ್ವಜಾವರೋಹಣ, ಶಂಖನಾದದೊಂದಿಗೆ ಸಭೆ ಮುಕ್ತಾಯವಾಯಿತು.

   

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries