HEALTH TIPS

No title

              ತುಳುನಾಡಿನ ಆಚಾರ ವಿಚಾರ, ಸಂಸ್ಕೃತಿ, ಸಂಪ್ರದಾಯಗಳೊಂದಿಗೆ
                ನಾಳೆ ವಾಂತಿಚ್ಚಾಲಿನಲ್ಲಿ `ಆಟಿದೊ ಆಯನೊ'
   ಬದಿಯಡ್ಕ : ಜಿ.ಕೆ.ಚಾರಿಟೇಬಲ್ ಟ್ರಸ್ಟ್ ವಾಂತಿಚ್ಚಾಲು, ಬದಿಯಡ್ಕ ಇವರ ನೇತೃತ್ವದಲ್ಲಿ ಕನರ್ಾಟಕ ಜಾನಪದ ಪರಿಷತ್ ಬೆಂಗಳೂರು, ಕೇರಳ ಘಟಕ ಕಾಸರಗೋಡು, ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಕಾಸರಗೋಡು, ತುಳುವರೆ ಆಯೆನೊ ಕೂಟ ಬದಿಯಡ್ಕ ಇವರ ಸಹಯೋಗದೊಂದಿಗೆ 50ನೇ ವರ್ಷದ `ಆಟಿದ ಆಯನೊ' ಕಾಯಕ್ರಮವು ಆಗಸ್ಟ್ 12ರಂದು ವಾಂತಿಚ್ಚಾಲಿನಲ್ಲಿ ನಡೆಯಲಿರುವುದು. ತುಳುನಾಡಿನ ಆಚಾರ ವಿಚಾರ, ಸಂಸ್ಕೃತಿ, ಸಂಪ್ರದಾಯಗಳನ್ನು ಮುಂದಿನ ಪೀಳಿಗೆಗೆ ಉಳಿಸಿಕೊಡುವ ನಿಟ್ಟಿನಲ್ಲಿ ವಿವಿಧ ಧಾಮರ್ಿಕ, ಸಾಹಿತ್ಯ, ದೈವಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
 ಕಾರ್ಯಕ್ರಮಗಳ ಅಂಗವಾಗಿ ಅಂದು ಪ್ರಾತಃಕಾಲ ದ್ವಾದಶ ನಾಳಿಕೇರ ಗಣಪತಿಹೋಮ, ಭಜನೆ, ಮಕ್ಕಳಿಗೆ ಕ್ರೀಡಾ ಸ್ಪಧರ್ೆಗಳು, ಹರಿಕಥೆ. 10 ಗಂಟೆಯಿಂದ ಆಟಿದ ಆಯೊನೊ ಉದ್ಘಾಟನಾ ಸಮಾರಂಭ ನಡೆಯಲಿದೆ. ಮಧ್ಯಾಹ್ನ 12 ಗಂಟೆಗೆ ಕವಿಹೃದಯದ ಸವಿಮಿತ್ರರ ನೇತೃತ್ವದಲ್ಲಿ ಬಹುಭಾಷಾ ಕವಿಗೋಷ್ಠಿ, 1 ಗಂಟೆಗೆ ಶ್ಯಾಮಲಾ ರವಿರಾಜ್ ಕುಂಬಳೆ ವೃಂದದವರಿಂದ ಗಾನ ವೈವಿಧ್ಯ, 2 ಗಂಟೆಗೆ ಆಟಿ ಸಂಪ್ರದಾಯ ಆಚರಣೆ ನೆಲೆನಿಲ್ಲುವಲ್ಲಿ ಮಹಿಳೆಯರ ಪಾತ್ರ - ವಿಚಾರ ವಿನಿಮಯ ಗೋಷ್ಠಿ, 03 ಗಂಟೆಗೆ ದೈವಾರಾಧನೆ ಕೋಡೆ-ಇನಿ-ಎಲ್ಲೆ ವಿಚಾರಗೋಷ್ಠಿ, 5 ಗಂಟೆಗೆ ಆಟಿಕಳಂಜ, 6 ಗಂಟೆಗೆ ರಾಮಾಯಣ ಪಾರಾಯಣ ಪ್ರವಚನ, 7.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ಶ್ರೀಮಂತ್ರಮೂತರ್ಿ ಗುಳಿಗ ಸನ್ನಿಧಿಯಲ್ಲಿ ಕ್ಷೀರಾಭಿಷೇಕ, ಸೀಯಾಳಾಭಿಷೇಕ, ತಂಬಿಲಸೇವೆ ಹಾಗೂ ದೈವಗಳಿಗೆ ತಂಬಿಲ, ಅಗೇಲು ಸೇವೆಯೂ ನಡೆಯಲಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries