HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                   ಕನರ್ಾಟಕ ಲಲಿತಕಲಾ ಅಕಾಡೆಮಿ ಚಿತ್ರಕಲಾ ಪ್ರದರ್ಶನ
                         ತೀಪರ್ುಗಾರರಾಗಿ ಪಿ.ಎಸ್.ಪುಣಿಚಿತ್ತಾಯ
    ಕಾಸರಗೋಡು: ಕನರ್ಾಟಕ ಲಲಿತಕಲಾ ಅಕಾಡೆಮಿಯ 47 ನೇ ವಾಷರ್ಿಕ ಚಿತ್ರಕಲಾ ಪ್ರದರ್ಶನ ಬೆಂಗಳೂರಿನಲ್ಲಿ ನಡೆಯಲಿದ್ದು ತೀಪರ್ುಗಾರರಾಗಿ ಅಂತಾರಾಷ್ಟ್ರೀಯ ಚಿತ್ರ ಕಲಾವಿದ ಪಿ.ಎಸ್.ಪುಣಿಚಿತ್ತಾಯ ನಿಯುಕ್ತರಾಗಿದ್ದಾರೆ. ನವೆಂಬರ್ ತಿಂಗಳಲ್ಲಿ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದ ಕನ್ನಡ ಭವನದಲ್ಲಿ ಚಿತ್ರಕಲಾ ಪ್ರದರ್ಶನ ನಡೆಯಲಿದೆ. ಪುಣಿಚಿತ್ತಾಯರು ಈ ಹಿಂದೆ ಎರಡು ಬಾರಿ ತೀಪರ್ುಗಾರರಾಗಿ ಭಾಗವಹಿಸಿದ್ದರು.
  ಜಲವರ್ಣ ಮಾಂತ್ರಿಕರೆಂದೇ ಗುರುತಿಸಲ್ಪಟ್ಟ ಪುಣಿಚಿತ್ತಾಯರು ಕನರ್ಾಟಕ ಮತ್ತು ಕೇರಳದ ಲಲಿತಕಲಾ ಅಕಾಡೆಮಿಗಳಲ್ಲಿ ಎರಡು ಅವಧಿಗೆ ಕಾರ್ಯಕಾರಿ ಸಮಿತಿ ಗೌರವ ಸದಸ್ಯರಾಗಿ ಕರ್ತವ್ಯ ನಿರ್ವಹಿಸಿದ್ದರು. ದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಆಹ್ವಾನಿತ ಉಪನ್ಯಾಸಕರಾಗಿ, ಮಾರ್ಗದರ್ಶಕರಾಗಿ ಈಗಲೂ ಭಾಗವಹಿಸುತ್ತಿದ್ದಾರೆ.
  ವಿಶ್ವ ಕನ್ನಡ ಸಮ್ಮೇಳನದ ಕಲಾ ಶಿಬಿರದ ಸಂಚಾಲಕರಾಗಿ, ಕೇರಳ ಲಲಿತಕಲಾ ಅಕಾಡೆಮಿ ರಾಜ್ಯದಾದ್ಯಂತ ಆಯೋಜಿಸಿದ ಕಲಾ ಶಿಬಿರಗಳ ಸಂಚಾಲಕ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ದುಡಿದಿದ್ದಾರೆ. ಅವರ ಕಲಾ ಬದುಕು ಮತ್ತು ಸಾಧನೆಗಳ ಕುರಿತಾದ ಕೃತಿಯನ್ನು ಇತ್ತೀಚೆಗೆ ಕಾಂತಾವರ ಕನ್ನಡ ಸಂಘ ಪ್ರಕಟಿಸಿತ್ತು. ಕಾರಡ್ಕದಲ್ಲಿ ಕಾಂಚನಗಂಗಾ ಕಲಾಗ್ರಾಮವನ್ನು ಸ್ಥಾಪಿಸಿ ಕಲಾ ದಿಗಂತದಲ್ಲಿ ಕಾಸರಗೋಡಿಗೆ ಮಹತ್ವವನ್ನು ಕಲ್ಪಿಸಿದವರು ಪುಣಿಚಿತ್ತಾಯರಾಗಿದ್ದಾರೆ.
  

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries