ಚುನಾವಣಾ ಆಯೋಗದಿಂದ ಅವಿಶ್ವಾಸ ಗೊತ್ತುವಳಿಗೆ ತಡೆಯಾಜ್ಞೆ
ಪೆರ್ಲ:ಎಣ್ಮಕಜೆ ಗ್ರಾಮ ಪಂಚಾಯಿತಿ ಅಧ್ಯಕ್ಷರ ಹಾಗೂ ಉಪಾಧ್ಯಕ್ಷರ ವಿರುದ್ಧ ಯುಡಿಎಫ್ ಮಂಡಿಸಿದ ಅವಿಶ್ವಾಸ ಗೊತ್ತುವಳಿ ಮಂಡನೆ ತೀಮರ್ಾನದ ಮೇಲೆ ರಾಜ್ಯ ಚುನಾವಣಾ ಆಯೋಗ ತಾತ್ಕಾಲಿಕ ತಡೆ ಆಜ್ಞೆ ವಿಧಿಸಿದೆ.
ನಿಯಮ ಪ್ರಕಾರ ಅವಿಶ್ವಾಸ ಗೊತ್ತುವಳಿ ಮಂಡನೆಗೂ 7 ದಿನಗಳ ಮುಂಚಿತವಾಗಿ ಗ್ರಾಮ ಪಂಚಾಯಿತಿ ಸದಸ್ಯರಿಗೆ ನೋಟೀಸು ನೀಡಬೇಕಾಗಿದ್ದು, ಆದರೆ ತಾವು ಸಹಿತ ಬಿಜೆಪಿ ಸದಸ್ಯರಾದ ಪುಟ್ಟಪ್ಪ ಖಂಡಿಗೆ, ಮಲ್ಲಿಕಾ ಜೆ. ರೈ, ಮಮತಾ ಯು.ರೈ, ಶಶಿಕಲಾ ವೈ., ಉದಯ ಚೆಟ್ಟಿಯಾರ್ ಬಜಕೂಡ್ಲು, ಸತೀಶ್ ಕುಲಾಲ್ ಇವರೆಲ್ಲರಿಗೂ ಆ.2ರಿಂದ ಆ.6 ತನಕದ ವ್ಯತ್ಯಸ್ತ ದಿನಗಳಲ್ಲಿ ನೋಟೀಸು ಲಭಿಸಿದ್ದು ಚುನಾವಣಾ ನಿಯಮದ ಉಲ್ಲಂಘನೆ ಆಗಿದ್ದು ಅವಿಶ್ವಾಸ ಮಂಡನೆ ಚಚರ್ೆಯನ್ನು ರದ್ದು ಗೊಳಿಸುವಂತೆ ಹಾಗೂ ಈ ವಿಷಯವನ್ನು ಅವಿಶ್ವಾಸ ಗೊತ್ತುವಳಿ ಮಿನಿಟ್ಸ್ ನಲ್ಲಿ ದಾಖಲಿಸುವಂತೆಯೂ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೂಪವಾಣಿ ಆರ್.ಭಟ್ ಅವಿಶ್ವಾಸ ಗೊತ್ತುವಳಿ ಮಂಡನೆಯ ವಿರುದ್ಧ ಚುನಾವಣಾ ಅಧಿಕಾರಿಯೂ ಆಗಿರುವ ಮಂಜೇಶ್ವರ ಬ್ಲಾಕ್ ಪಂಚಾಯಿತಿ ಬಿಡಿಓ ಅವರಿಗೆ ಗೊತ್ತುವಳಿಗೂ ಮೊದಲು ಮನವಿ ಸಲ್ಲಿಸಿದ್ದು ಬಳಿಕ ರಾಜ್ಯ ಚುನಾವಣಾ ಅಧಿಕಾರಿಗಳಿಗೂ ದೂರು ಸಲ್ಲಿಸಿದ್ದರು.
ಇದೀಗ ರಾಜ್ಯ ಚುನಾವಣಾ ಆಯೋಗ ಬಿಡಿಓ ಅವರಿಗೆ ಅವಿಶ್ವಾಸ ಗೊತ್ತುವಳಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಶೀಘ್ರವಾಗಿ ಸಲ್ಲಿಸುವಂತೆ ಸೂಚನೆ ನೀಡಿದ್ದು ಸಮಗ್ರ ಪರಿಶೀಲನೆಯ ಬಳಿಕವಷ್ಟೇ ಮುಂದಿನ ಹೆಜ್ಜೆ ಇರಿಸುವಂತೆ ಸೂಚನೆ ನೀಡಿದೆ.
ಎಣ್ಮಕಜೆ ಗ್ರಾಮ ಪಂಚಾಯಿತಿಯಲ್ಲಿ ಪಂಚಾಯಿತಿ ಅಧ್ಯಕ್ಷೆ ರೂಪವಾಣಿ ಆರ್. ಭಟ್ ವಿರುದ್ಧ ಕಾಂಗ್ರೆಸ್ ನ ಶಾರದಾ ವೈ, ಉಪಾಧ್ಯಕ್ಷ ಪುಟ್ಟಪ್ಪ ಖಂಡಿಗೆ ವಿರುದ್ಧ ಮುಸ್ಲಿಂಲೀಗ್ ನ ಸಿದ್ದಿಕ್ ವಳಮೊಗರು ಅವಿಶ್ವಾಸ ಗೊತ್ತುವಳಿ ನೋಟೀಸು ನೀಡಿದ್ದು ಆ.8 ಹಾಗೂ 9ರಂದು ಅವಿಶ್ವಾಸ ಗೊತ್ತುವಳಿ ಚಚರ್ೆಯ ಬಳಿಕ ನಡೆದ ಮತದಾನದಲ್ಲಿ ಯುಡಿಎಫ್(7) ಹಾಗೂ ಎಲ್ ಡಿ ಎಫ್(3) ಗೊತ್ತುವಳಿ ಪರ ಒಟ್ಟು 10 ಸದಸ್ಯರು ಮತ ಚಲಾಯಿಸಿದುದರ ಪರಿಣಾಮ ಒಟ್ಟು 17 ಸ್ಥಾನ ಹೊಂದಿದ್ದ ಎಣ್ಮಕಜೆ ಪಂಚಾಯಿತಿಯಲ್ಲಿ 7 ಸದಸ್ಯರನ್ನು ಹೊಂದಿರುವ ಬಿಜೆಪಿ ಅಧಿಕಾರ ಕಳೆದು ಕೊಂಡಿತ್ತು.