ತುಳುವಿಗೆ ಅವಮಾನ-ಸಂಚಿನ ಹೊಂಚು-ವಿಶೇಷ ಬರಹ
ಕುಂಬಳೆ: ಗಡಿನಾಡು ಕಾಸರಗೊಡಿನ ಕನ್ನಡ-ತುಳು ಅಸ್ಮಿತೆಯನ್ನು ಹಿಸುಕಿ ಮಲೆಯಾಳ ಭಾಷೆಯನ್ನು ಕಡ್ಡಾಯವಾಗಿ ಹೇರುವ ಮೂಲಕ ಮೂಲ ಸಂಸ್ಕೃತಿಯನ್ನು ಸರ್ವನಾಶಗೊಳಿಸುವ ವಿವಿಧ ಮುಖಗಳ ಪ್ರಯತ್ನ ಮುಂದುವರಿಯುತ್ತಿರುವಂತೆ ಇದೀಗ ಹೊಸತೊಂದು ಅಲೆ ತೀವ್ರ ಸ್ವರೂಪಪಡೆಯುತ್ತಿರುವುದು ಬೆಳಕಿಗೆ ಬಂದಿದೆ.
ಕಾಸರಗೋಡು ಜಿಲ್ಲೆಯ ಅತ್ಯುತ್ತರದ ತಾಲೂಕು ಆಗಿರುವ ಮಂಜೇಶ್ವರ ತಾಲೂಕಿನ ಹೆಸರನ್ನು ತುಳುನಾಡು ತಾಲೂಕು ಎಂಬ ಮರು ನಾಮಕರಣಕ್ಕೆ ಸರಕಾರದ ಕಂದಾಯ ಇಲಾಖೆ ಸಿದ್ದತೆ ಮಾಡಿಕೊಳ್ಳುತ್ತಿರುವಂತೆ ಇದಕ್ಕೆ ಎದುರಾಗಿ ತಾಲೂಕು ಆಡಳಿತ (ಭರಣ!) ಭಾಷಾ ಅಭಿವೃದ್ದಿ ಸಮಿತಿಯೆಂಬ ಸಂಘಟನೆ ತಯಾರು ಕಾಯರ್ೋನ್ಮುಖವಾಗಿದ್ದು ಶನಿವಾರ ಪ್ರಬಲ ಪ್ರತಿಭಟನೆ ಹಾಗೂ ಸಹಿ ಸಂಗ್ರಹ ಅಭಿಯಾನ ನಡೆಸುವುದಾಗಿ ತಿಳಿಸಿದೆ.
ಹಿನ್ನೆಲೆ:
ಕೇರಳ ತುಳು ಅಕಾಡೆಮಿಯ ನೇತೃತ್ವದಲ್ಲಿ ಮಂಜೇಶ್ವರ ತಾಲೂಕಿಗೆ ತುಳುನಾಡು ತಾಲೂಕು ಎಂದು ಮರು ನಾಮಕರಣ ನಡೆಸಬೇಕೆಮದು ಒತ್ತಾಯಿಸಿ ರಾಜ್ಯ ಕಂದಾಯ ಸಚಿವರಿಗೆ ಕೆಲವು ತಿಂಗಳುಗಳ ಹಿಂದೆ ಮನವಿ ನೀಡಲಾಗಿತ್ತು. ಆ ಬಳಿಕ ಸಚಿವರು ಕಂದಾಯ ಇಲಾಖೆಯ ರಾಜ್ಯ ಕಾರ್ಯದಶರ್ಿಗಳಿಗೆ ಈ ಮನವಿ ಪರಿಶೀಲನೆಗೆ ತಿಳಿಸಿದ್ದರು. ಈ ಬಗ್ಗೆ ಸವಿರ ವರದಿ ಮತ್ತು ಅಗತ್ಯ ಕ್ರಮಗಳ ಮುನ್ನುಡಿಯಾಗಿ ಆ.18 ರಂದು ಉಪ್ಪಳದಲ್ಲಿರುವ ಮಂಜೇಶ್ವರ ತಾಲೂಕು ಕಚೇರಿ ಕೇಂದ್ರೀಕರಿಸಿ ಸಭೆ ಹಾಗೂ ಚಚರ್ೆಯೊಂದನ್ನು ನಡೆಸಲು ನಿರ್ಧರಿಸಲಾಗಿತ್ತಾದರೂ ರಾಜ್ಯದ ಅತಿವೃಷ್ಠಿ-ಹಾನಿಯ ಗೊಂದಲದ ಸ್ಥಿತಿಯಲ್ಲಿ ಸಭೆ ರದ್ದುಗೊಳಿಸಲಾಗಿತ್ತು.
ಇದಕ್ಕೂ ಮೊದಲು ಉನ್ನತ ಅಧಿಕಾರಿ ವರ್ಗ ನಡೆಸಿದ್ದ ವರದಿಯೊಂದರಲ್ಲಿ ತಾಲೂಕಿನ 53 ಶಾಲೆಗಳಲ್ಲಿ ಮಲೆಯಾಳ ಮಾಧ್ಯಮ ಕಲಿಕೆ ನೀಡಲಾಗುತ್ತಿಲ್ಲ ಎಂಬ ಸೂಚನೆ ಉಲ್ಲೇಖಿಸಲಾಗಿತ್ತು. ಕನಿಷ್ಠ ಹತ್ತು ಮಂದಿ ವಿದ್ಯಾಥರ್ಿಗಳಾದರೂ ಮಲೆಯಾಳ ಕಲಿಯಲು ಆಸಕ್ತರಾಗಿದ್ದಲ್ಲಿ ಅವರಿಗೆ ಅಂತಹ ಅವಕಾಶ ಕಲ್ಪಿಸಬೇಕೆಂದು ತಾಲೂಕು ಆಡಳಿತ ಭಾಷಾ ಅಭಿವೃದ್ದಿ ಸಮಿತಿ ವಿದ್ಯಾಭ್ಯಾಸ ಇಲಾಖೆಯ ಅಧಿಕೃತರಿಗೆ ಮನವಿಯನ್ನೂ ನೀಡಿ ಗೊಂದಲ ಸೃಷ್ಟಿಗೆ ಹವಣಿಸುತ್ತಿರುವುದೂ ಕಂಡುಬಂದಿದೆ.
ತಾಲೂಕಿನ ಕನ್ನಡಿಗರ ಬಹುಸಂಖ್ಯಾತ ಪ್ರದೇಶ ಹೊರತುಪಡಿಸಿ ಮಿಕ್ಕುಳಿದಲ್ಲಿ ಮಲೆಯಾಳ ಮಾಧ್ಯಮ ತರಗತಿಗಳಿದ್ದು, ಅದನ್ನು ಮರೆಮಾಚಿ ತಾಲೂಕಿನಾದ್ಯಂತ ಎಲ್ಲಾ ಶಾಲೆಗಳಲ್ಲೂ ಮಲೆಯಾಳ ಮಾಧ್ಯಮ ಶಿಕ್ಷಣಕ್ಕೆ ಈ ಆಡಳಿತ ಭಾಷಾ ಸಮಿತಿ ಹವಣಿಸುತ್ತಿದ್ದು, ಇದೀಗ ಕನ್ನಡ-ತುಳುವಿನ ಮಧ್ಯೆ ಕಂದಕ ಸೃಷ್ಟಿಸಿ ಒಡೆದು ಆಳುವ ನೀತಿ ಅನುಸರಿಸುತ್ತಿರುವುದು ಭವಿಷ್ಯದಲ್ಲಿ ಇನ್ನಷ್ಟು ಜಟಿಲತೆಗೆ ಕಾರಣವಾಗಲಿದೆ ಎಂದು ವಿಶ್ಲೇಶಿಸಲಾಗುತ್ತಿದೆ.
ಇಷ್ಟಕ್ಕೂ ಮಂಜೇಶ್ವರ ತಾಲೂಕಿನ 7 ಗ್ರಾ.ಪಂ. ಗಳಲ್ಲಿ ತುಳು ಮಾತೃಭಾಷೆಯಾಗಿರುವ ಕನ್ನಡಿಗರೇ ಅತ್ಯಧಿಕ ಸಂಖ್ಯೆಯಲ್ಲಿರುವಾಗ ತಾಲೂಕಿನ ಹೆಸರನ್ನು ತುಳುನಾಡು ತಾಲೂಕು ಎಂದು ಮರುನಾಮಕರಣಗೊಳಿಸುತ್ತಿರುವುದನ್ನು ತಡೆಹಿಡಿಯುವ ಕುತ್ಸಿತ ಮನೋಸ್ಥಿತಿಯ ಹಿಂದಿನ ಶಕ್ತಿ ಗಂಭೀರ ಸ್ವರೂಪದ್ದೂ, ಅಪಾಯಕಾರಿ ಮೂಲಭೂತವಾದದ ಸರಪಳಿಯಾಗಿ ಕಾಡುವುದರಲ್ಲಿ ಸಂಶಯವಿಲ್ಲ.