ಪಡ್ರೆ ಶಾಲೆಯಲ್ಲಿ ಪ್ರತಿಭಾ ಪುರಸ್ಕಾರ
ಪೆರ್ಲ:ಪಡ್ರೆ ವಾಣೀನಗರ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಕಳೆದ ಶೈಕ್ಷಣಿಕ ವರ್ಷದಲ್ಲಿ ಎಸ್ ಎಸ್ ಎಲ್ ಸಿ ಹಾಗೂ ಹೈಯರ್ ಸೆಕೆಂಡರಿ ವಿಭಾಗದಲ್ಲಿ ಪ್ರಥಮ, ದ್ವಿತೀಯ ಸ್ಥಾನ ಗಳಿಸಿದ ವಿದ್ಯಾಥರ್ಿಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬ್ಲಾ.ಪಂ. ಸದಸ್ಯೆ ಸವಿತಾ ಬಾಳಿಕೆ, ಮಕ್ಕಳ ಪ್ರತಿಭೆಗಳನ್ನು ಅನಾವರಣಗೊಳಿಸುವಲ್ಲಿ ರಕ್ಷಕ, ಶಿಕ್ಷಕರ ಪಾತ್ರ ಮಹತ್ವ ಪೂರ್ಣವಾದುದು, ಶಾಲೆಯ ಶೈಕ್ಷಣಿಕ ಸಾಧನೆ ಅಭಿನಂದಾರ್ಹ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ನರಸಿಂಹ ಎಸ್.ಬಿ, ಸತತ ಮೂರು ವರ್ಷಗಳಿಂದ ನೂರು ಶೇಕಡಾ ಫಲಿತಾಂಶ ಲಭಿಸಿ ಕಾಸರಗೋಡು ಜಿಲ್ಲೆಯಲ್ಲೇ ಮಾದರಿ ಶಾಲೆಯಾಗಿ ಪಡ್ರೆ ಶಾಲೆ ರೂಪುಗೊಂಡಿದೆ ಎಂದು ತಿಳಿಸಿದರು. ಲಕ್ಷ್ಮಿ ಕೇಶವ ಪ್ರತಿಷ್ಠಾನದ ಪತ್ತಡ್ಕ ಗಣಪತಿ ಭಟ್, ಎಣ್ಮಕಜೆ ಗ್ರಾ.ಪಂ. ಸದಸ್ಯೆ ಶಶಿಕಲಾ ವೈ, ದಾಮೋದರ ಭಟ್ ಅಜಕ್ಕಳಮೂಲೆ, ಮುಖ್ಯೋಪಾಧ್ಯಾಯ ವಾಸುದೇವ ನಾಯಕ್, ಪ್ರಾಂಶುಪಾಲೆ ಗೀತಾ ಕುಮಾರಿ, ದಿಲೀಪ್ ಡಿ ಆನಂದ್, ನಿವೃತ್ತ ಶಿಕ್ಷಕಿ ನೀಲಮ್ಮ ಶುಭ ಹಾರೈಸಿದರು.