HEALTH TIPS

No title

               ಎಲ್ಲಿದೆ ಸ್ವಾತಂತ್ರ್ಯ-ನಡೆಯಲು ಕಟ್ಟಪುಣಿಗಳೇ ಇಲ್ಲದ ನತದೃಷ್ಟರು
   ಮಂಜೇಶ್ವರ: ಸ್ವಾತಂತ್ರ್ಯ ಲಭಿಸಿ ಅರ್ಧ ಶತಮಾನಗಳ ಹೊಸ್ತಿಲಲ್ಲಿದ್ದರೂ ಇನ್ನೂ ಮೂಲ ಸೌಕರ್ಯಗಳ ಕೊರತೆ ಕಂಡುಬರುತ್ತಿರುವುದು ದುದರ್ೈವವೆನ್ನದೆ ವಿಧಿಯಿಲ್ಲ. ಇಂದಿನ ಕಾಲದಲ್ಲಿ ರಸ್ತೆ ಇಲ್ಲದ ಮನೆಗಳಿವೆ ಎನ್ನುವುದೇ ವಿಪಯರ್ಾಸ.  ಅಂತಹದ್ದರಲ್ಲಿ  ಮಂಜೇಶ್ವರ ಗ್ರಾ.ಪಂ. ವ್ಯಾಪ್ತಿಯಲ್ಲಿರುವ ಕೊಳಕೆಬೈಲು ಕುಚ್ಚಿಕ್ಕಾಡ್ ಪ್ರದೇಶವಾಸಿಗಳಿಗೆ ರಸ್ತೆ ಬಿಡಿ ಒಂದು ಕಾಲು ದಾರಿಗೆ ಕಟ್ಟಪುಣಿ ಕೂಡಾ ಇಲ್ಲದೆ ಮಕ್ಕಳನ್ನು ಬೆಳಿಗ್ಗೆ ಶಾಲೆಗೆ ಕಳುಹಿಸಲು ಪೋಷಕರು ಹರಸಾಹಸ ಪಟ್ಟು ನೀರಿನಲ್ಲಿ ಈಜಿಕೊಂಡೇ ಸಾಗಬೇಕಾದ ದುಸ್ಥಿತಿ ಗಮನಕ್ಕೆ ಬಂದಿದೆ.
   ಇಲ್ಲಿಯ ಸಾರ್ವಜನಿಕರ ಸಮಸ್ಯೆಯ ಬಗ್ಗೆ ಹಲವಾರು ಬಾರಿ ಊರವರು ಗ್ರಾಮ ಸಭೆಯಲ್ಲಿ, ಗ್ರಾ.ಪಂ. ಪ್ರತಿನಿಧಿಗಳಲ್ಲಿ ಮನವಿ ನೀಡಿದ್ದರೂ ಈ ತನಕ ಯಾವುದೇ ಪರಿಹಾರವನ್ನು ಕಾಣಲು ಸಾಧ್ಯವಾಗಿರುವುದು ಸ್ವಾತಂತ್ರ್ಯ-ಪ್ರಜಾಪ್ರಭುತ್ವದ ಅಣಕವೆಂದೇ ಪರಿಗಣಿಸಬಹುದಾಗಿದೆ.
  ತುತರ್ು ಸಂದರ್ಭ ಆಸ್ಪತ್ರೆಗೆ ಸಾಗಲು, ದಿನನಿತ್ಯದ ಕಾರ್ಯಕ್ಕೆ ಪೇಟೆಗೆ ಸಾಗಲು, ವಿದ್ಯಾಥರ್ಿಗಳು ಶಾಲಾ-ಕಾಲೇಜುಗಳಿಗೆ ತೆರಳಲು, ಮನೆಗೆ ದಿನಸಿ ಸಾಮಾನು ತರಲು, ಕೃಷಿ ಚಟುವಟಿಕೆಗೆ ರಸ್ತೆ ಬೇಕೇ ಬೇಕು. ಆದರೆ ಇಲ್ಲಿಯ ಪ್ರದೇಶವಾಸಿಗಳು ಕಳೆದ ಹಲವಾರು ವರ್ಷಗಳಿಂದ ಕಾಲ್ನಡಿಗೆ ಸಂಚಾರದ ರಸ್ತೆಯಿಂದಲೂ ವಂಚಿತರಾಗಿರುವುದನ್ನು ಕಂಡೂ ಕಾಣದಂತೆ ಅಧಿಕೃತರು ಜಾಣ ಕುರುಡುತನವನ್ನು ಪ್ರದಶರ್ಿಸುತ್ತಿರುವುದಾಗಿ ಸ್ಥಳೀಯರು ಆರೋಪಿಸುತಿದ್ದಾರೆ.
    ವಿದ್ಯಾಥರ್ಿಗಳ ಪರಿಸ್ಥಿತಿ ಕೇಳುವರಾರು?
  ಕೊಳಕೆಬೈಲು ಕುಚ್ಚಿಕ್ಕಾಡು ಪ್ರದೇಶದಲ್ಲಿ 90 ಕ್ಕಿಂತಲೂ ಮಿಕ್ಕಿದ ಕುಟುಂಬಗಳು ವಾಸಿಸುತ್ತಿದ್ದು, ರಸ್ತೆ ಸೌಕರ್ಯವಿಲ್ಲದೆ ನಲುಗುತ್ತಿದ್ದಾರೆ. ನೀರು ತುಂಬಿರುವ ಗದ್ದೆಯನ್ನು ದಾಟಿ ಮನೆಗೆ ತಲುಪಲು ಅರ್ಧ ಕಿಲೋಮೀಟರಿನಷ್ಟು ಸಾಗಬೇಕಾಗಿದೆ. ಜೋರಾಗಿ ಮಳೆ ಬಂದರೆ ಸುಮಾರು ನಾಲ್ಕರಿಂದ ಐದು ಫೀಟ್ ಎತ್ತರದಲ್ಲಿ  ನೀರು ಕಟ್ಟಿ ನಿಲ್ಲುತ್ತದೆ. ಒಂದು ಕಟ್ಟಪುಣಿ ವ್ಯವಸ್ಥೆ ಇಲ್ಲದ ಗದ್ದೆಯಲ್ಲಿ ಸಂಚರಿಸುವುದು ಅಪಾಯಕಾರಿಯಾಗಿದ್ದು, ಜೀವಕ್ಕೆ ಹೊಣೆ ಯಾರು? ಈ ಪ್ರದೇಶದ ಸುಮಾರು 90 ಕುಟುಂಬಗಳು ಹೊರ ಪ್ರಪಂಚದ ಸಂಪರ್ಕಕ್ಕಾಗಿ ರಸ್ತೆ ಇಲ್ಲದೆ ದ್ವೀಪವಾಸಿಗಳಂತೆ ಕಳೆಯಬೇಕಾದ ಸ್ಥಿತಿ ಜನರನ್ನು ಹತಾಶೆಗೊಳಪಡಿಸುತ್ತಿದೆ. ರಸ್ತೆ ವ್ಯವಸ್ಥೆ ಕಷ್ಟವಾದರೂ ಗದ್ದೆಗೆ ವ್ಯವಸ್ಥಿತ ಕಟ್ಟಪುಣಿಯನ್ನಾದರೂ ಸ್ಥಳೀಯ ಗ್ರಾ.ಪಂ. ವತಿಯಿಂದ ನಿಮರ್ಿಸಲು ಸಾಧ್ಯವಿದೆ.ಸಂಬಂಧಪಟ್ಟವರು ಇನ್ನಾದರೂ ಪರಿಹಾರಕ್ಕೆ ಮುಂದಾದರೆ ಸಂಭವಿಸಬಹುದಾದ ದೊಡ್ದ ದುರಂತವೊಂದನ್ನು ತಪ್ಪಿಸಬಹುದಾಗಿದೆ. ಸಂಬಂಧಪಟ್ಟವರು ಇತ್ತ ಕಡೆ ಗಮನಹರಿಸಬೇಕಾದದ್ದು ಅನಿವಾರ್ಯ.
     ಏನಂತಾರೆ:
  ಕೊಳಕೆಬೈಲು ಕುಚ್ಚಿಕ್ಕಾಡು ಪರಿಸರದ ಜನರ ಸಮಸ್ಯೆಯ ಬಗ್ಗೆ ಈ ವರೆಗೆ ಯಾವುದೇ ಮಾಹಿತಿಗಳು ಬಂದಿಲ್ಲ. ಗ್ರಾಮ ಸಭೆಯಲ್ಲಿ ಈ ಬಗ್ಗೆ ಯಾವುದೇ ಮನವಿ ಈ ಹಿಂದೆ ನೀಡಿರುವುದು ಗಮನಕ್ಕೆ ಬಂದಿಲ್ಲ. ಸ್ಪಷ್ಟವಾಗಿ ಮನವಿ ನೀಡಿದಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಜೊತೆಗೆ ಆ ಪರಿಸರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು.
   ಅಬ್ದುಲ್ ಅಸೀಸ್
 ಅಧ್ಯಕ್ಷರು ಮಂಜೇಶ್ವರ ಗ್ರಾಮ ಪಂಚಾಯತು.
     
   

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries