ಆ.29 ರಂದು ಕಾಸರಗೋಡಿಗೆ ಅಟಲ್ ಚಿತಾಭಸ್ಮ
ಕಾಸರಗೋಡು: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಚಿತಾಭಸ್ಮ ವಿಸರ್ಜನಾ ಯಾತ್ರೆ ಆ.29 ರಂದು ಕಾಸರಗೋಡಿಗೆ ಬರಲಿದೆ ಎಂದು ಬಿಜೆಪಿ ಕಾಸರಗೋಡು ಜಿಲ್ಲಾ ಅಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್ ಅವರು ಹೇಳಿದರು.
ಕಾಸರಗೋಡು ಪ್ರೆಸ್ಕ್ಲಬ್ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಬೆಳಗ್ಗೆ 9.30 ಕ್ಕೆ ಕಾಸರಗೋಡು ಹೊಸ ಬಸ್ ನಿಲ್ದಾಣ ವಠಾರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯ ಸಮಿತಿ ಅಧ್ಯಕ್ಷ ಪಿ.ಎಸ್.ಶ್ರೀಧರನ್ ಪಿಳ್ಳೆ, ಶಾಸಕ ಒ.ರಾಜಗೋಪಾಲ್, ಸಂಸದರಾದ ಪಿ.ಮುರಳೀಧರನ್, ಸುರೇಶ್ ಗೋಪಿ, ರಿಚಾಡರ್್ ಹೇ, ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಪಿ.ಕೆ.ಕೃಷ್ಣದಾಸ್ ಪಾಲ್ಗೊಳ್ಳವರು. ಚಿತಾಭಸ್ಮ ಕಲಶಕ್ಕೆ ಪುಷ್ಪಾರ್ಚನೆ ನಡೆಸಲು ಕಾರ್ಯಕರ್ತರಿಗೆ ಅವಕಾಶ ಕಲ್ಪಿಸಲಾಗಿದೆ. ಬಿಜೆಪಿ ಜಿಲ್ಲಾ ಸಮಿತಿ ಹಳೇ ಕಚೇರಿ ವಠಾರದಲ್ಲಿ ವಿಶೇಷವಾಗಿ ನಿಮರ್ಿಸಿದ ವೇದಿಕೆಯಲ್ಲಿ ಚಿತಾಭಸ್ಮ ಕಲಶವನ್ನು ಆ.29 ರಿಂದ 31 ರ ವರೆಗೆ ಇರಿಸಿ ಸೆ.1 ರಂದು ತೃಕ್ಕನ್ನಾಡ್ ಸಮುದ್ರದಲ್ಲಿ ವಿಸಜರ್ಿಸಲಾಗುವುದು. ಅಂದು `ಹರೇ ರಾಮ ಹರೇ ಕೃಷ್ಣ' ಸಹಿತ ದೇವರ ನಾಮ ಸಂಕೀರ್ತನೆ ನಡೆಯಲಿದೆ.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಪ್ರಮೀಳಾ ಸಿ.ನಾಕ್, ರಾಜ್ಯ ಸಮಿತಿ ಸದಸ್ಯರಾದ ಪಿ.ಸುರೇಶ್ ಕುಮಾರ್ ಶೆಟ್ಟಿ, ನ್ಯಾಯವಾದಿ ವಿ.ಬಾಲಕೃಷ್ಣ ಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದಶರ್ಿಗಳಾದ ಎ.ವೇಲಾಯುಧನ್, ಪಿ.ರಮೇಶ್ ಮೊದಲಾದವರಿದ್ದರು.