ಸತ್ಯಸಾಯಿ ಸಂಸ್ಥೆಗಳಿಂದ ಪರಿಹಾರ ನಿಧಿಗೆ ಸಹಾಯ
ಉಪ್ಪಳ: ಕೇರಳದ ಜಲಪ್ರಳಯದಲ್ಲಿ ಕೋಟ್ಯಂತರ ರೂ.ನಾಶನಷ್ಟ ಸಂಭವಿಸಿದ್ದು ಅನೇಕ ಮಂದಿ ಮನೆ ಮಠಗಳನ್ನು ಕಳೆದು ನಿರ್ಗತಿಕರಾಗಿದ್ದಾರೆ. ಅವರನ್ನು ಸುಸ್ಥಿತಿಗೆ ತರಲು ಮುಖ್ಯಮಂತ್ರಿ ಪರಿಹಾರ ನಿಧಿಯನ್ನು ಆರಂಭಿಸಲಾಗಿದ್ದು, ಸಂಘ ಸಂಸ್ಥೆಗಳು ಧನ ಸಹಾಯ ಒದಗಿಸುತ್ತಿದೆ.
ಶ್ರೀ ಸತ್ಯಸಾಯಿ ಜಿಲ್ಲಾ ಸಮಿತಿ ಹಾಗೂ ಬಾಯಾರು ಪ್ರಶಾಂತಿ ವಿದ್ಯಾಕೇಂದ್ರದ ಆಶ್ರಯದಲ್ಲಿ ಗುರುವಾರ ರೂ.75000 ಚೆಕ್ನ್ನು ಜಿಲ್ಲಾಧಿಕಾರಿ ಸಜಿತ್ ಬಾಬು ಅವರಿಗೆ ಹಸ್ತಾಂತರಿಸಲಾಯಿತು. ಈ ಸಂದರ್ಭ ಪ್ರಶಾಂತಿ ಟ್ರಸ್ಟಿನ ಪೆಲತ್ತಡ್ಕ ರಾಮಕೃಷ್ಣ ಭಟ್, ಪ್ರಶಾಂತಿ ವಿದ್ಯಾಕೇಂದ್ರದ ಪ್ರಬಂಧಕ ಮಹಾಲಿಂಗ ಭಟ್, ಶಾಲಾ ಪ್ರಾಂಶುಪಾಲ ಅನೂಪ್, ಜಿಲ್ಲಾ ಸಾಯಿ ಸಮಿತಿಗಳ ಉಪಾಧ್ಯಕ್ಷ ರಾಮಚಂದ್ರ ಐಲ, ಜಿಲ್ಲಾ ಯುವ ಸಂಚಾಲಕ ಕೃಷ್ಣಪ್ರಸಾದ್ ಕಾಟುಕುಕ್ಕೆ ಸಹಿತ ಶ್ರೀ ಸತ್ಯಸಾಯಿ ಸೇವಾ ಸಮಿತಿ ಕಾಸರಗೋಡು, ಮಧೂರು, ಶಿರಿಯ, ಉಪ್ಪಳ, ಕಾಟುಕುಕ್ಕೆ ಹಾಗೂ ಬಾಯಾರು ಇದರ ಸಂಚಾಲಕರು, ಪದಾಧಿಕಾರಿಗಳು ಉಪಸ್ಥಿತರಿದ್ದರು.