HEALTH TIPS

No title

               ಕನ್ನಡ ಶಾಲೆಗಳಿಗೆ ಮಲಯಾಳಿ ಶಿಕ್ಷಕರ ನೇಮಕ
           ತಿರುವನಂತಪುರದ ಸೆಕ್ರೆಟರಿಯೇಟ್ ಮುಂಭಾಗ ಧರಣಿ
   ಕಾಸರಗೋಡು: ಕನ್ನಡ ಶಾಲೆಗಳಿಗೆ ಮಲಯಾಳಿ ಶಿಕ್ಷಕರನ್ನು ನೇಮಿಸುತ್ತಿರುವ ಕೇರಳ ಸರಕಾರದ ಕನ್ನಡ ವಿರೋಧಿ ನೀತಿಯನ್ನು ಖಂಡಿಸಿ ಕನರ್ಾಟಕ ನವನಿಮರ್ಾಣ ಸೇನೆಯಿಂದ ತಿರುವನಂತಪುರದ ಸೆಕ್ರಟರಿಯೇಟ್ ಕಚೇರಿಯ ಮುಂಭಾಗ ಆ.18 ರಂದು ಧರಣಿ ನಡೆಸಲಿದೆ ಎಂದು ರಾಜ್ಯಾಧ್ಯಕ್ಷ ಭೀಮಾಶಂಕರ ಪಾಟೀಲ ಅವರು ತಿಳಿಸಿದ್ದಾರೆ.
   ಕೇರಳ ಸರಕಾರ ಕನ್ನಡಿಗರ ಕಾಸರಗೋಡಿನಲ್ಲಿ ಮಲಯಾಳ ಭಾಷಾ ಮಾಧ್ಯಮ ಕಡ್ಡಾಯ ಅನುಷ್ಠಾನಕ್ಕೆ ಮುಂದಾಗಿರುವ ಕ್ರಮವನ್ನು ಕನರ್ಾಟಕ ನವನಿಮರ್ಾಣ ಸೇನೆ ತೀವ್ರವಾಗಿ ಖಂಡಿಸುತ್ತದೆ. ಮಹಾಜನ ವರದಿ ಅನ್ವಯ ಕಾಸರಗೋಡು ಕನರ್ಾಟಕದ ನೆಲ. ಈ ಕುರಿತು ಸುಪ್ರೀಂ ಕೋಟರ್್ನಲ್ಲಿ ಪ್ರಕರಣ ವಿಚಾರಣೆಯ ಹಂತದಲ್ಲಿದೆ. ಇಷ್ಟಿದ್ದೂ ಕೇರಳ ರಾಜ್ಯ ಸರಕಾರ ಮಲಯಾಳ ಭಾಷಾ ಮಾಧ್ಯಮದಂತಹ ಆದೇಶಗಳನ್ನು ಮಾಡುವುದರ ಮೂಲಕ ವಿನಾಕಾರಣ ಕಾಸರಗೋಡಿನ ಕನ್ನಡಿಗರನ್ನು ಒಕ್ಕಲೆಬ್ಬಿಸುವ ನೀಚ ಕೆಲಸ ಮಾಡುತ್ತಿದೆ. ಕಾಸರಗೋಡಿನ ಕನ್ನಡ ಶಾಲೆಗೆ ಮಲಯಾಳಿ ಶಿಕ್ಷಕರನ್ನು ನೇಮಿಸುತ್ತಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ. ಕಾಸರಗೋಡಿನ ಕನ್ನಡ ಶಾಲೆಗಳಲ್ಲಿ ಮಲಯಾಳ ಹೇರಿಕೆಯನ್ನು ಈ ರೀತಿಯಾಗಿ ಪ್ರಯತ್ನಿಸುತ್ತಿರುವುದು ನಿಜಕ್ಕೂ ದೊಡ್ಡ ದುರಂತ. ಕನರ್ಾಟಕ ಸರಕಾರ ಕೇರಳ ಸರಕಾರದ ಈ `ಾಷಾ ದ್ವೇಷದ ನೀತಿಯ ವಿರುದ್ಧ ಶಿಸ್ತು ಕ್ರಮಕೈಗೊಂಡು ಕೇರಳ ಸರಕಾರ ಕಾಸರಗೋಡು ಕನ್ನಡಿಗರಿಗೆ ಮಾಡುತ್ತಿರುವ ದೌರ್ಜನ್ಯವನ್ನು ದಾಖಲೆ ರೂಪದಲ್ಲಿ ಸುಪ್ರೀಂ ಕೋಟರ್್ಗೆ ಸಲ್ಲಿಸುವ ಕೆಲಸ ಮಾಡಬೇಕು ಎಂದು ಕನರ್ಾಟಕ ನವನಿಮರ್ಾಣ ಸೇನೆ ಕನರ್ಾಟಕ ಸರಕಾರವನ್ನು ಒತ್ತಾಯಿಸುತ್ತದೆ ಎಂದರು.
   ಕಾಸರಗೋಡು ಕನ್ನಡ ಶಾಲೆಗಳಲ್ಲಿ ಮಲಯಾಳ ಶಿಕ್ಷಕರನ್ನು ನೇಮಿಸುತ್ತಿರುವ ಕೇರಳ ಸರಕಾರದ ಕನ್ನಡ ವಿರೋಧಿ ಕ್ರಮವನ್ನು ಖಂಡಿಸಿ ಕನರ್ಾಟಕ ನವನಿಮರ್ಾಣ ಸೇನೆ ಆ.18 ರಂದು ಬೆಳಗ್ಗೆ 11.30 ಕ್ಕೆ ತಿರುವನಂತಪುರದ ಸೆಕ್ರೆಟರಿಯೇಟ್ ಮುಂಭಾಗ ಪ್ರತಿಭಟನಾ ಧರಣಿಯನ್ನು ಹಮ್ಮಿಕೊಂಡಿದೆ. ನಂತರ ಶಿಕ್ಷಣ ಸಚಿವ ಪ್ರೊ.ವಿ.ರವೀಂದ್ರನಾಥ್ ಅವರಿಗೆ ಮನವಿ ಸಲ್ಲಿಸಲಿದೆ.  ಈ ಹೋರಾಟದಲ್ಲಿ ಕನರ್ಾಟಕದ ಹಿರಿಯ ಕನ್ನಡ ಹೋರಾಟಗಾರರು, ಚಿಂತಕರು, ಮಠಾಧೀಶರು ಭಾಗವಹಿಸಲಿದ್ದಾರೆಂದು ತಿಳಿಸಿದ್ದಾರೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries