HEALTH TIPS

No title

              ಕನ್ನಡ ಮಾಧ್ಯಮ ಶಾಲೆಗಳಿಗೆ ಕನ್ನಡ ಬಾರದ ಶಿಕ್ಷಕರ ವೈರಸ್ ದಾಳಿ:
                  ಒಬ್ಬರಿಗೆ ನೇಮಕಾತಿ, ಕಾದಿರುವರು ಇನ್ನೂ ಹದಿನೆಂಟು ಮಂದಿ
     ಸರಕಾರಿ ಪ್ರೌಢಶಾಲೆಗಳ ಕನ್ನಡ ಮಾಧ್ಯಮ ವಿಭಾಗಕ್ಕೆ ಕನ್ನಡ ಭಾಷೆಯ ಪ್ರಾಥಮಿಕ ಜ್ಞಾನವೂ ಇಲ್ಲದ ಅಧ್ಯಾಪಕರ ನೇಮಕಾತಿಯ ವಿವಾದ ದಿನದಿಂದ ದಿನಕ್ಕೆ ಗಂಭೀರ ಸ್ವರೂಪ ಪಡೆಯುತ್ತಿದೆ. ಈ ವರ್ಷ ಪ್ರಕಟವಾದ ಪಿ.ಎಸ್. ಸಿ  ರಾಂಕ್ ಪಟ್ಟಿಗಳಿಂದ  ನೇಮಕಾತಿ ಪಡೆಯಲು ಸರದಿಯಲ್ಲಿ ನಿಂತಿರುವ ಕನ್ನಡ ಬಾರದ ಅಧ್ಯಾಪಕರು ಒಬ್ಬಿಬ್ಬರಲ್ಲ. ಬರೋಬ್ಬರಿ ಹತ್ತೊಂಬತ್ತು ಮಂದಿ! ಇವರಲ್ಲಿ ಒಬ್ಬರನ್ನು ಈಗಾಗಲೇ ಮಂಗಲ್ಪಾಡಿ ಶಾಲೆಯಲ್ಲಿ ನೇಮಿಸಲಾಗಿದೆ. ಐವರಿಗೆ ನೇಮಕಾತಿ ಆದೇಶ ನೀಡಿದ್ದರೂ ನೇಮಕಗೊಂಡಿಲ್ಲ.  ಇನ್ನೂ ಹದಿನೆಂಟು ಮಂದಿ ನೇಮಕವಾಗುವ ಸಾಧ್ಯತೆಯಿದೆ. ಇವುಗಳೆಲ್ಲ ಜಾತಿ ಮೀಸಲಾತಿ ಹುದ್ದೆಗಳಾದುದರಿಂದ ನಿಯಮಪ್ರಕಾರ ಇವರಿಗೆ ಖಚಿತವಾಗಿ ನೇಮಕಾತಿ ದೊರೆಯಬಹುದು. ಆದರೆ ಕನ್ನಡದ ಗಂಧಗಾಳಿಯಿಲ್ಲದ ಇಂತಹವರನ್ನು ಆರಿಸಲು ಕಾರಣವೇನು? ಇದರ ಹಿಂದೆ ಭ್ರಷ್ಟಾಚಾರ, ರಾಜಕೀಯ ಪ್ರಭಾವಗಳು ನಡೆದಿರಬಹುದೆ? ನೇಮಕಾತಿ ಸಮಿತಿಯಲ್ಲಿದ್ದರೆನ್ನಲಾದ ಕನ್ನಡ ಭಾಷಾತಜ್ಞರು ಇದನ್ನು ವಿರೋಧಿಸಲಿಲ್ಲವೆ? ಮೊದಲಾದ ಪ್ರಶ್ನೆಗಳು ಉದ್ಭವಿಸುತ್ತವೆ. ಏನಿದ್ದರೂ ಈ ಅಧ್ಯಾಪಕರಿಗೆ ನೇಮಕಾತಿ ದೊರೆತರೆ ಕನ್ನಡ ಮಾಧ್ಯಮ ಶಿಕ್ಷಣ ವ್ಯವಸ್ಥೆಗೆ ಸರಿಪಡಿಸಲಾರದ ಹಾನಿ ಉಂಟಾಗಬಹುದು ಎಂಬುದು ಸಾರ್ವಜನಿಕರ ಅಭಿಪ್ರಾಯ.
    ಪ್ರೌಢಶಾಲಾ ಸಹಾಯಕ ( ಭೌತ ವಿಜ್ಞಾನ- ಕನ್ನಡ ಮಾಧ್ಯಮ) ಹುದ್ದೆಗಳಿಗೆ ಎಸ್.ಐ.ಯು.ಸಿ ನಾಡಾರ್, ಮುಸ್ಲಿಂ, ದೀವಾರ, .ಎಕ್ಸ್, ಎಸ್.ಸಿ ಮೊದಲಾದ ಜಾತಿ ಮೀಸಲಾತಿಯಡಿಯಲ್ಲಿ ಪ್ರಕಟವಾದ ಐದು ರಾಂಕ್ ಪಟ್ಟಿಗಳಲ್ಲಿ ಕ್ರಮವಾಗಿ ಐದು, ನಾಲ್ಕು, ಎರಡು, ಒಂದು ಮತ್ತು ಮೂವರು ಹೀಗೆ ಒಟ್ಟು ಹದಿಮೂರು ಮಂದಿ ಸ್ಥಾನ ಪಡೆದಿದ್ದಾರೆ. ಇವರಲ್ಲಿ ಎಸ್.ಸಿ ಪಟ್ಟಿಯಲ್ಲಿರುವ ಇಬ್ಬರು ಮಾತ್ರ ಕನ್ನಡಿಗರು ಎಂಬುದು ಅಲ್ಪ ಸಮಾಧಾನ. ಉಳಿದಂತೆ ಎಲ್ಲರೂ ಕನ್ನಡ ಭಾಷಾಜ್ಞಾನವಿಲ್ಲದವರು ಎಂಬ ಆರೋಪವಿದೆ. ಇವರಲ್ಲಿ ಐದು ಮಂದಿಗೆ ಈಗಾಗಲೇ ನೇಮಕಾತಿಯ ಆದೇಶ ಹೋಗಿದೆ. ಆದರೂ ಇನ್ನೂ ನೇಮಕಾತಿ ಪಡೆದಿಲ್ಲ. ಈ ಐವರ ನೇಮಕಾತಿ ಬಳಿಕ ಉಳಿದ ಎಂಟು ಮಂದಿಗಳನ್ನು ಮುಂದಿನ ವರ್ಷಗಳಲ್ಲಿ ಉಂಟಾಗುವ ತೆರವುಗಳಲ್ಲಿ ನೇಮಿಸಬೇಕಾಗುತ್ತದೆ.
ಗಣಿತ ವಿಷಯದ ಪ್ರೌಢಶಾಲಾ ಸಹಾಯಕ ಕನ್ನಡ ಮಾಧ್ಯಮ ಹುದ್ದೆಗೆ ಪ್ರಕಟಿಸಿದ ರಾಂಕ್ ಪಟ್ಟಿಯಲ್ಲಿ ಇಬ್ಬರು ಕನ್ನಡಬಾರದವರಿದ್ದಾರೆ ಎಂಬ ಸೂಚನೆಯಿದೆ. ಇವರಲ್ಲಿ ಎಸ್.ಸಿ ವಿಭಾಗದ ಒಬ್ಬರನ್ನು ಮಂಗಲ್ಪಾಡಿ ಶಾಲೆಯಲ್ಲಿ ನೇಮಿಸಲಾಗಿದ್ದು ಅವರಿಗೆ ಕನ್ನಡದ ಪ್ರಾಥಮಿಕ ಜ್ಞಾನವಿಲ್ಲ ಎಂಬ ವಿಷಯ ತರಗತಿಗಳಲ್ಲಿ ಬಯಲಾಗಿದ್ದು ಕನ್ನಡ ತಿಳಿಯದವರನ್ನೇ ನೇಮಿಸಬೇಕೆಂದು ಸ್ವಯಂ ವಿದ್ಯಾಥರ್ಿಗಳೇ ತರಗತಿಗಳನ್ನು ಬಹಿಷ್ಕರಿಸಿ ಮುಷ್ಕರ ಹೂಡುತ್ತಿದ್ದಾರೆ. ಜಿಲ್ಲಾ ಶಿಕ್ಷಣ ಉಪನಿದರ್ೇಶಕರ ಕಚೇರಿಯೆದುರೂ ಪ್ರತಿಭಟನೆ ನಡೆಸಿದ್ದು ನಿರಾಹಾರ ಸತ್ಯಾಗ್ರಹಕ್ಕೂ ಸಿದ್ಧರಾಗಿದ್ದಾರೆಂದರೆ ಪ್ರಕರಣದ ಗಂಭೀರ ಸ್ವರೂಪವನ್ನು ಅರ್ಥಮಾಡಿಕೊಳ್ಳಬಹುದು. ಕನ್ನಡ ಬಾರದ ಇನ್ನೊಬ್ಬರಿಗೆ ಸದ್ಯವೇ  ನೇಮಕಾತಿ ದೊರೆಯಬಹುದು.
    ಸಾಮಾಜಿಕ ಅಧ್ಯಯನ ಎಲ್.ಸಿ. ಎ. ಐ ಮೀಸಲು ಶಿಕ್ಷಕ ಹುದ್ದೆಗೆ ನಡೆದ ಸಂದರ್ಶನದಲ್ಲಿ ಇಬ್ಬರು ಕನ್ನಡ ಬಾರದವರು ಸ್ಥಾನ ಪಡೆದುಕೊಂಡಿದ್ದು ಇಬ್ಬರಿಗೂ ನೇಮಕಾತಿ ಖಚಿತ. ಸಾಮಾಜಿಕ ಅಧ್ಯಯನ ಸಾಮಾನ್ಯ ವರ್ಗದ ಶಿಕ್ಷಕ ಹುದ್ದೆಗಳ ರಾಂಕ್ ಪಟ್ಟಿ ಪ್ರಕಟವಾಗಬೇಕಿದ್ದು ಅದರಲ್ಲೂ ಕನ್ನಡ ಬಾರದವರಿದ್ದಾರೆ ಎಂಬುದು ಕನ್ನಡ ಉದ್ಯೋಗಾಥರ್ಿಗಳ ಅಳಲು, ಪರಿಸರ ವಿಜ್ಞಾನ ರಾಂಕ್ ಪಟ್ಟಿಯಲ್ಲಿ ಕನ್ನಡ ಬಾರದವರಿದ್ದಾರೆಯೇ ಎಂಬುದು ಖಚಿತಗೊಂಡಿಲ್ಲ.
ಪ್ರಕರಣದ ತನಿಖೆ ನಡೆಯಬೇಕು
    ಆರು ವರ್ಷಗಳ ಮೊದಲು ಕನ್ನಡ ಮಾಧ್ಯಮದ ವಿವಿಧ ಶಿಕ್ಷಕ ಹುದ್ದೆಗಳಿಗೆ ನಾಲ್ವರು ಕನ್ನಡ ಬಾರದವರ ನೇಮಕವಾಗಿದ್ದು ಇವರ ವಿರುದ್ಧ ಕಾನೂನು ಹೋರಾಟದ ಸಹಿತ ಎಲ್ಲ ವಿಧದ ಪ್ರತಿಭಟನೆಯನ್ನೂ ನಡೆಸಲಾಗಿತ್ತು. ಮಾನವ ಹಕ್ಕು ಆಯೋಗದ ಸೂಚನೆ ಪ್ರಕಾರ ನಡೆಸಿದ ತನಿಖೆಯಲ್ಲಿ ಇವರಿಗೆ ಕನ್ನಡ ಜ್ಞಾನವಿಲ್ಲವೆಂಬುದು ಸಾಬೀತಾಗಿತ್ತು. ಆದರೆ ಸಂದರ್ಶನ ಸಮಿತಿಯಲ್ಲಿ ಕನ್ನಡ ಭಾಷಾತಜ್ಞರೂ ಇದ್ದು ಅವರ ಸಮ್ಮುಖದಲ್ಲೇ ಆಯ್ಕೆ ನಡೆಸಲಾಗಿದೆ ಎಂದು ಪಿ.ಎಸ್.ಸಿ ವಾದಿಸಿತ್ತು. ಆದರೂ ನೇಮಕಾತಿ ಪಡೆದು ಆರು ವರ್ಷ ಕಳೆದರೂ ಅಭ್ಯಥರ್ಿಗಳಿಗೆ ಕನ್ನಡ ಜ್ಞಾನವಿಲ್ಲ ಎಂಬುದನ್ನು ಮನಗಂಡು  ಭವಿಷ್ಯದಲ್ಲಿ ಬಹಳ ಜಾಗರೂಕತೆಯಿಂದ ಕನ್ನಡ ಮಾಧ್ಯಮ ಶಿಕ್ಷಕ ಹುದ್ದೆಗಳ ನೇಮಕಾತಿ ನಡೆಸಬೇಕೆಂದೂ ಲಿಖಿತ ಪರೀಕ್ಷೆಯನ್ನು ನಡೆಸಬೇಕೆಂದು ನ್ಯಾಯಾಲಯ ಆದೇಶ ನೀಡಿತ್ತು. ಆದರೆ ಭಾಷಾಜ್ಞಾನವನ್ನು ಆಳವಾಗಿ ಪರೀಕ್ಷಿಸುವ ತೇರ್ಗಡೆಗೆ  ಅಂಕಗಳನ್ನು  ನಿಗದಿಪಡಿಸದ ವಿವರಣಾತ್ಮಕ ಪರೀಕ್ಷೆ ನಡೆಸದೆ ಕಾಟಾಚಾರಕ್ಕೆ ಒ.ಎಂ. ಆರ್ ಪರೀಕ್ಷೆ ನಡೆಸಲಾಗಿದೆ. ಕಣ್ಣುಮುಚ್ಚಿ ಟಿಕ್ ಮಾಡಿದರೂ ಒಂದೆರಡು ಅಂಕಗಳನ್ನು ಗಳಿಸಬಹುದಾದ ಈ ಪರೀಕ್ಷೆಯಲ್ಲಿ ಐದಕ್ಕಿಂತಲೂ ಕಡಿಮೆ ಅಂಕ ಪಡೆದವರಿಗೂ ಸಂದರ್ಶನ ನಡೆಸಿ ನೇಮಕಾತಿ ಆದೇಶ ನೀಡಲಾಗಿರುವುದು ವಿಚಿತ್ರ. ಸಂದರ್ಶನ ಸಮಿತಿಯಲ್ಲಿದ್ದವರು ಯಾರು? ಕನ್ನಡ ಭಾಷಾತಜ್ಞರು ಹಾಜರಾಗಿದ್ದರೂ ಅನರ್ಹರ ನೇಮಕಾತಿಯನ್ನು ವಿರೋಧಿಸಲಿಲ್ಲವೆ? ಅವರ ಸಮ್ಮತಿ ಪಡೆದು ಅಥವಾ ವಿರೋಧದ ನಡುವೆ ಆಯ್ಕೆ ನಡೆಯಿತೆ? ಇದರ ಹಿಂದೆ ಭ್ರಷ್ಟಾಚಾರ ಅಥವಾ ರಾಜಕೀಯ ಪ್ರಭಾವ ಕೆಲಸ ಮಾಡಿತೆ? ಇವೆಲ್ಲದರ ಬಗ್ಗೆ ಪಿ.ಎಸ್.ಸಿ ಹಾಗೂ ಸರಕಾರ ತನಿಖಾ ಆಯೋಗದಿಂದ ನಿಷ್ಪಕ್ಷಪಾತದ ತನಿಖೆ ನಡೆಸಬೇಕು ಎಂಬುದು ಬಹುಜನರ ಆಗ್ರಹವಾಗಿದೆ. ಶಾಸಕರೂ ಈ ಹಗರಣವನ್ನು ವಿಧಾನಸಭೆಯಲ್ಲಿ ಪ್ರಸ್ತಾಪಿಸಿ ಕನ್ನಡ ವಿದ್ಯಾಥರ್ಿಗಳಿಗೆ ನ್ಯಾಯವನ್ನೊದಗಿಸುವಂತೆ ಹಾಗೂ ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಸರಕಾರವನ್ನು ಒತ್ತಾಯಿಸಬೇಕು.
      ಸಮಸ್ಯೆಗೆ ಶಾಶ್ವತ ಪರಿಹಾರ ಬೇಕು:
   ಈಗಾಗಲೇ ನೇಮಕಾತಿ ಪಡೆದ ಕನ್ನಡ ಬಾರದವರನ್ನು ಮಲಯಾಳ ಮಾಧ್ಯಮಕ್ಕೆ ಅಥವಾ ತತ್ಸಮಾನ ಹುದ್ದೆಗಳಿಗೆ ವಗರ್ಾಯಿಸಿ ಮಂಗಲ್ಪಾಡಿ ಶಾಲೆಗೆ ಕನ್ನಡ ಜ್ಞಾನವಿರುವ ಶಿಕ್ಷಕರನ್ನೇ ನೇಮಿಸಬೇಕು. ಉಳಿದ ವಿವಾದಿತ ರಾಂಕ್ ಪಟ್ಟಿಗಳಲ್ಲಿ ಸ್ಥಾನಪಡೆದವರಿಗೆಲ್ಲ ಕನ್ನಡ ಭಾಷಾಜ್ಞಾನವನ್ನು ಆಳವಾಗಿ ಪರೀಕ್ಷಿಸುವ ಲಿಖಿತ ಪರೀಕ್ಷೆ ನಡೆಸಿ ತೇರ್ಗಡೆಯಾದವರಿಗೆ ಮಾತ್ರ ನೇಮಕಾತಿ ನೀಡಬೇಕು. ಮುಂದಿನ ದಿನಗಳಲ್ಲಿ ಇಂತಹ ಅನ್ಯಾಯ ಸಂಭವಿಸದ ಹಾಗೆ ನೋಡಿಕೊಳ್ಳಬೇಕು. ಅದಕ್ಕಾಗಿ  ಎಲ್. ಪಿ.ಎಸ್.ಎ, ಯು.ಪಿ.ಎಸ್.ಎ, ಎಚ್.ಎಸ್.ಎ (ಒಂದರಿಂದ ಹತ್ತರವರೆಗಿನ ಶಿಕ್ಷಕ ಹುದ್ದೆಗಳು) ಹುದ್ದೆಗಳಿಗೆ ಭಾಷಾವಿಷಯ (ಲಾಂಗ್ವೇಜ್) ವಿಶೇಷವಿಷಯ (ಸ್ಪೆಶಲ್ ಸಬ್ಜೆಕ್ಟ್) ಹಾಗೂ ಪ್ರಧಾನವಿಷಯ (ಕೋರ್ ಸಬ್ಜೆಕ್ಟ್) ಗಳನ್ನೊಳಗೊಂಡಂತೆ ಎಲ್ಲ ವಿಷಯಗಳನ್ನೂ  ಕನ್ನಡ ಮಾಧ್ಯಮ ವಿದ್ಯಾಥರ್ಿಗಳಿಗೆ ಬೋಧಿಸಲು ನೇಮಕಗೊಳ್ಳುವ ಸರಕಾರಿ ಹಾಗೂ ಅನುದಾನಿತ ಶಾಲಾ ಅಧ್ಯಾಪಕರಿಗೆ ಅವರ ಶೈಕ್ಷಣಿಕ ಅರ್ಹತೆಯಲ್ಲಿ ಹತ್ತನೇತರಗತಿವರೆಗೆ ಕನ್ನಡ ವಿಷಯವನ್ನು ಕಲಿತಿರಬೇಕೆಂದು ನಿಯಮ ರೂಪಿಸಬೇಕಾಗಿದೆ.
       




Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries